ಮೂಡುಅಲೆವೂರಿನ ಕರ್ವಾಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ವಿಷ್ಣು ಸ್ನೇಹ ಬಳಗ ವತಿಯಿಂದ ಶಾಲೆಯ ದತ್ತು ಸ್ವೀಕಾರ ಯೋಜನೆ ಅಂಗವಾಗಿ ದಾನಿಗಳ ನೆರವಿನಿಂದ ಶಾಲಾ ಬ್ಯಾಗ್, ಕೊಡೆ ಮತ್ತು ಕಲಿಕಾ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಮೂಡುಅಲೆವೂರಿನ ಕರ್ವಾಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ವಿಷ್ಣು ಸ್ನೇಹ ಬಳಗ ವತಿಯಿಂದ ಶಾಲೆಯ ದತ್ತು ಸ್ವೀಕಾರ ಯೋಜನೆ ಅಂಗವಾಗಿ ದಾನಿಗಳ ನೆರವಿನಿಂದ ಶಾಲಾ ಬ್ಯಾಗ್, ಕೊಡೆ ಮತ್ತು ಕಲಿಕಾ ಸಾಮಾಗ್ರಿಗಳನ್ನು ಹಸ್ತಾಂತರಿಸಲಾಯಿತು.ಮಂಗಳವಾರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ , ವಿಷ್ಣು ಸ್ನೇಹ ಬಳಗ ಅಧ್ಯಕ್ಷ ಮತ್ತು ಅಲೆವೂರು ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀಕಾಂತ ನಾಯಕ್, ಕಳೆದ ಹಲವಾರು ವರ್ಷಗಳಿಂದ ಶಾಲೆಯ ನ್ನು ದತ್ತು ಸ್ವೀಕಾರ ಮಾಡಿ ಮುಚ್ಚುವ ಶಾಲೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಸಹಾಯ ಪಡೆದ ವಿದ್ಯಾರ್ಥಿಗಳು ಉತ್ತಮವಾಗಿ ಅಧ್ಯಯನ ಮಾಡಿ ಶಾಲೆಗೆ ಕೀರ್ತಿ ತರುವ ಕೆಲಸ ಮಾಡಬೇಕು ಎಂದರು.
ಶಾಲಾ ಹಳೆ ವಿದ್ಯಾರ್ಥಿ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡಿ, ನಮ್ಮ ಸಮಾಜದಲ್ಲಿ ಅದೆಷ್ಟು ಯುವಕ ಯುವತಿ ಮಂಡಲಗಳು ಕೇವಲ ವಾರ್ಷಿಕೋತ್ಸವಕ್ಕೆ ಮಾತ್ರ ಸೀಮಿತವಾಗಿವೆ, ಆದರೆ ವಿಷ್ಣು ಸ್ನೇಹ ಬಳಗ ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ಶಾಲೆಯನ್ನು ಉಳಿಸಿ ಬೆಳೆಸುವ ಅಪೂರ್ವವಾದ ಕೆಲಸ ಮಾಡುತ್ತಿವೆ ಇದು ಮಾದರಿಯಾದ ಕಾರ್ಯ ಎಂದರು.ವಿದ್ಯಾಭಿಮಾನಿ ರಾಮಚಂದ್ರ ನಾಯಕ್ ಶುಭ ಹಾರೈಸಿದರು. ವೇದಿಕೆಯಲ್ಲಿ ಹಳೆ ವಿದ್ಯಾರ್ಥಿಗಳಾದ ಸಂಪತ್, ಕೇಶವ ಆಚಾರ್ಯ, ಸುರೇಶ್ ನಾಯಕ್, ರಾಘವೇಂದ್ರ ಆಚಾರ್ಯ, ವಿಘ್ನೇಶ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಸವಿತಾ ಶಾಲೆಯ ಬೆಳವಣಿಗೆಗೆ ಎಲ್ಲಾ ಪೋಷಕರು ಸಹಕರಿಸುವಂತೆ ಮನವಿ ಮಾಡಿದರು ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಧನಸಹಾಯ ಮಾಡಿದ ಎಲ್ಲ ದಾನಿಗಳಿಗೆ ಧನ್ಯವಾದ ಸಮರ್ಪಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.