ಕಿಕ್ಕೇರಿ: ಸಂಭ್ರಮದಿಂದ ಸಿಡಿ ರಥ ಎಳೆದ ಭಕ್ತರ ಸಮೂಹ

KannadaprabhaNewsNetwork |  
Published : Nov 10, 2026, 12:45 AM IST
9ಕೆಎಂಎನ್ ಡಿ23 | Kannada Prabha

ಸಾರಾಂಶ

ಮಡಿವಾಳ ಸಮುದಾಯದವರು ಶ್ಯಾವಿಗೆ ಮನೆಯಿಂದ ತಯಾರಿಸಿಕೊಂಡು ಮಾದಾಪುರ ಗ್ರಾಮದ ಮಧ್ಯ ಭಾಗದಲ್ಲಿರುವ ಹನುಮಂತ ದೇವರ ಗುಡಿಗೆ ಸಾಗಿದರು. ಅನುಸೂಚಿತ ಸಮುದಾಯದವರು ತಂಬಿಟ್ಟಿನ ಕಳಸವನ್ನು ಮೆರವಣಿಗೆ ಮೂಲಕ ತರಲಾಯಿತು. ಸಿಡಿರಥದ ಸುತ್ತ ಮೂರು ಪ್ರದಕ್ಷಿಣೆ ಹಾಕಿ ಮಹಾ ಪ್ರಸಾದವನ್ನು ಭಕ್ತರಿಗೆ ವಿತರಿಸಿದರು.

ಕಿಕ್ಕೇರಿ:

ಮಾದಾಪುರ ಗ್ರಾಮದಲ್ಲಿ ಸುತ್ತಮುತ್ತಲ ಹತ್ತೂರು ಗ್ರಾಮಗಳ ಸದ್ಭಕ್ತರ ಸಮ್ಮುಖದಲ್ಲಿ ದೀಪಾವಳಿ ಅಮಾವಾಸ್ಯೆ ಸೋಮವಾರ ಸಿಡಿ ಹಬ್ಬದ ಜಾತ್ರೆ ಜರುಗಿತು.

ಜೋಡಿ ಗ್ರಾಮಗಳಾದ ಮಾದಾಪುರ ಹಾಗೂ ಮಾದಾಪುರ ಕೊಪ್ಪಲು ಮಧ್ಯದ ಕೆಂಕೇರಮ್ಮ ದೇಗುಲ ಆವರಣದಲ್ಲಿ ಸಿಂಗಮ್ಮ, ಚಿಕ್ಕಮ್ಮ ಹಾಗೂ ಕೆಂಕೇರಮ್ಮನವರಿಗೆ ದೇವಿಗೆ ವಿಶೇಷ ಅಲಂಕಾರಗಳಿಂದ ಶೃಂಗರಿಸಲಾಗಿತ್ತು. ವಿವಿಧ ಪೂಜಾ ವಿಧಿವಿಧಾನಗಳು ಜರುಗಿದ ನಂತರ ಸಿಡಿ ಜಾತ್ರೆಗೆ ಚಾಲನೆ ದೊರೆಯಿತು.

ಜಾತ್ರೆ ಮುನ್ನದಿನವಾದ ನರಕಚತುದರ್ಶಿಯ ಭಾನುವಾರ ರಾತ್ರಿ ಗ್ರಾಮಸ್ಥರು ವಿವಿಧ ಸಂಘ ಸಂಸ್ಥೆಯೊಂದಿಗೆ ಸಿಡಿ ರಥವನ್ನು ತೊಳೆದು ಶುಚಿಗೊಳಿಸಿದರು. ವಿವಿಧ ವರ್ಣದ ಬಾವುಟಗಳಿಂದ ಶೃಂಗರಿಸಿದರು. ಮಡಿವಾಳ ಸಮುದಾಯದವರು ಶ್ಯಾವಿಗೆ ಮನೆಯಿಂದ ತಯಾರಿಸಿಕೊಂಡು ಮಾದಾಪುರ ಗ್ರಾಮದ ಮಧ್ಯ ಭಾಗದಲ್ಲಿರುವ ಹನುಮಂತ ದೇವರ ಗುಡಿಗೆ ಸಾಗಿದರು. ಅನುಸೂಚಿತ ಸಮುದಾಯದವರು ತಂಬಿಟ್ಟಿನ ಕಳಸವನ್ನು ಮೆರವಣಿಗೆ ಮೂಲಕ ತರಲಾಯಿತು. ಸಿಡಿರಥದ ಸುತ್ತ ಮೂರು ಪ್ರದಕ್ಷಿಣೆ ಹಾಕಿ ಮಹಾ ಪ್ರಸಾದವನ್ನು ಭಕ್ತರಿಗೆ ವಿತರಿಸಿದರು. ಸಿಡಿ ರಥವನ್ನು ಗ್ರಾಮದ ಸಿಡಿ ಬಂಡಿಯನ್ನು ಉರುಳಿಸಿಕೊಂಡು ಸುಮಾರು 2ಕಿ.ಮೀ ದೂರದ ದೇವಿ ಜಾತ್ರಾ ಮೈದಾನಕ್ಕೆ ತರಲಾಯಿತು.

ಸೋಮವಾರ ಮಧ್ಯಾಹ್ನ ಪುಷ್ಪ, ಧ್ವಜ ಪತಾಕೆಗಳಿಂದ ಶೃಂಗರಿಸಲಾಗಿದ್ದ ಸಿಡಿ ರಾಯನ ರಥಕ್ಕೆ ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರು ಸಿಡಿ ರಥಕ್ಕೆ ಹಣ್ಣು, ಕಾಯಿ ಅರ್ಪಿಸಿ ದೂಪ, ದೀಪದ ಆರತಿ ಬೆಳಗಿದರು. ಪುಟಾಣಿ ಮಕ್ಕಳಿಗೆ ರಥಕ್ಕೆ ನಮಸ್ಕಾರ ಹಾಕಿಸುವ ಮೂಲಕ ರೋಗರುಜಿನ ಬಾರದಂತೆ ಪ್ರಾರ್ಥಿಸಿದರು. ಕೆಂಕೇರಮ್ಮ ದೇಗುಲ ಹಾಗೂ ಸಿಂಗಮ್ಮ ಗುಡಿಯ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕುವ ಮೂಲಕ ಭಕ್ತರು ರಥವನ್ನು ಎಳೆದರು.

ಭಕ್ತರು ಕೆಂಕೇರಮ್ಮ, ಸಿಂಗಮ್ಮ ದೇವಿಗೆ ಜೈಕಾರ ಹಾಕುತ್ತ ಸಾಗಿ ದೇಗುಲಕ್ಕೆ ಪ್ರವೇಶಿಸಿ ದೇವಿಯ ದರ್ಶನ ಪಡೆದರು. ದೇವಿ ತೀರ್ಥ ಪ್ರಸಾದ ಸ್ವೀಕರಿಸಿದರು. ಮಾದಾಪುರ, ಮಾದಾಪುರ ಕೊಪ್ಪಲು, ಗಾಣದಹಳ್ಳಿ, ಗೊಂದಿಹಳ್ಳಿ, ಚಿನ್ನೇನಹಳ್ಳಿ, ಕೋಟಹಳ್ಳಿ, ಊಗಿನಹಳ್ಳಿ ಸೇರಿದಂತೆ ಹತ್ತಾರು ಹಳ್ಳಿಗಳಿಂದ ರೈತರು ಜಾತ್ರೆಗೆ ಎತ್ತಿನ ಬಂಡಿ ಮತ್ತಿತರ ವಾಹನ ಮೂಲಕ ಆಗಮಿಸಿದ್ದರು.

ಬೆಳಗ್ಗಿನಿಂದ ಸಂಜೆವರೆಗೆ ಜಾತ್ರೆ ಪ್ರಾಂಗಣದಲ್ಲಿ ತಂಗಿ ವಿವಿಧ ಅಟಿಕೆ ವಸ್ತು, ಸಿಹಿ ತಿನಿಸು ಸವಿದು ಸಂಭ್ರಮಪಟ್ಟರು. ಸಿಡಿ ಜಾತ್ರೆಯಲ್ಲಿ ಜಾತಿ, ಮತ ಪಂಥ ಬೇಧ ಮರೆತು ಭಕ್ತರು, ರೈತರು ಸಮಾಗಮವಾಗಿದ್ದರು..

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

12, 13ರಂದು ಪುಣ್ಯಾರಾಧನೆ, ಸ್ಮರಣೋತ್ಸವ, ಜನಜಾಗೃತಿ ಧರ್ಮ ಸಮ್ಮೇಳನ
ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ: ಡಿಕೆಶಿ ಆಕ್ರೋಶ