ಸಾಮಾಜಿಕ ಜಾಲತಾಣದಲ್ಲಿ ತುಂಗಭದ್ರಾ ಜಲಾಶಯ ಒಡೆದ ವದಂತಿ : ರಾತ್ರಿಯೇ ಗಂಟು ಮೂಟೆ ಕಟ್ಟಿದ ಮೀನುಗಾರರು

ಸಾರಾಂಶ

ತುಂಗಭದ್ರಾ ಜಲಾಶಯದ ಗೇಟ್ ನ ಚೈನ್ ಲಿಂಕ್ ತುಂಡಾದ ವಿಡಿಯೋದ ತುಣುಕೊಂದು ಶನಿವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇಲ್ಲಿನ ಜನ ಗಾಬರಿಗೊಂಡರು.

ಕಂಪ್ಲಿ :  ತುಂಗಭದ್ರಾ ಜಲಾಶಯದ ಗೇಟ್ ನ ಚೈನ್ ಲಿಂಕ್ ತುಂಡಾದ ವಿಡಿಯೋದ ತುಣುಕೊಂದು ಶನಿವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇಲ್ಲಿನ ಜನ ಗಾಬರಿಗೊಂಡರು. 

ಡ್ಯಾಂ ಒಡೆದಿದ್ದು, ಕಂಪ್ಲಿ ಕೋಟೆಗೆ ನೀರು ನುಗ್ಗಲಿದೆ, ಮನೆಗಳು ಜಲಾವೃತಗೊಳ್ಳಲಿವೆ ಎಂಬ ವದಂತಿ ಹರಡಿ, ಕೋಟೆ ಪ್ರದೇಶದ ಮೀನುಗಾರರೆಲ್ಲ ನಿದ್ದೆಯಿಂದ ಎದ್ದು, ಮನೆಯಲ್ಲಿನ ಸಾಮಗ್ರಿ, ಸರಂಜಾಮುಗಳನ್ನು ಕಟ್ಟಿಕೊಂಡು ಸ್ಥಳಾಂತರಕ್ಕೆ ಸಿದ್ಧರಾಗಿದ್ದರು.

ಈ ವೇಳೆ, ಕೆಲವರು ಟಿಬಿ ಬೋರ್ಡ್‌ನ ಅಧಿಕಾರಿಗಳಿಗೆ ಕರೆ ಮಾಡಿದಾಗ, ಜಲಾಶಯದ ಗೇಟ್‌ನ ಚೈನ್ ಲಿಂಕ್ ತುಂಡಾಗಿದೆ. ಸದ್ಯ 30 ಸಾವಿರ ಕ್ಯುಸೆಕ್ ನೀರು ಮಾತ್ರ ಬಿಡಲಾಗಿದೆ. ಗಾಬರಿಪಡುವುದು ಬೇಡ ಎಂದು ಅಧಿಕಾರಿಗಳು ಧೈರ್ಯ ತುಂಬಿದರು. ಆಗ ಸಮಾಧಾನಗೊಂಡ ಜನ ತಮ್ಮ ಮನೆಗಳಲ್ಲೇ ಉಳಿದರು. ಕೆಲವರು ರಾತ್ರಿ ಪೂರ್ತಿ ಎಚ್ಚರವಿದ್ದರು.

Share this article