ಕೂಳೂರು- ಬೈಕಂಪಾಡಿ ಎಲಿವೇಟೆಡ್‌ ಹೆದ್ದಾರಿ: ನಳಿನ್ ಕುಮಾರ್‌

KannadaprabhaNewsNetwork |  
Published : Mar 01, 2024, 02:20 AM IST
ನಳಿನ್‌ ಕುಮಾರ್‌ | Kannada Prabha

ಸಾರಾಂಶ

ನಂತೂರು ಹಾಗೂ ಕೆಪಿಟಿ ಮೇಲ್ಸೇತುವೆ ಕಾಮಗಾರಿಗಳಿಗೆ ಟೆಂಡರ್‌ ಆಗಿದೆ. ಆದರೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ, ಅದು ತೆರವಾದ ಕೂಡಲೆ ಕಾಮಗಾರಿ ಶುರುವಾಗಲಿದೆ ಎಂದು ನಳಿನ್‌ ಕುಮಾರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಣಂಬೂರು ಕೆಐಒಸಿಎಲ್‌ನಿಂದ (ಕೂಳೂರಿನಿಂದ) ಬೈಕಂಪಾಡಿವರೆಗೆ ಸುಮಾರು ೪ ಕಿ.ಮೀ. ಉದ್ದ ಎಲಿವೇಟೆಡ್‌ ಹೆದ್ದಾರಿ ನಿರ್ಮಾಣವಾಗಲಿದ್ದು, ಡಿಪಿಆರ್‌ ಹಂತದಲ್ಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ನವಮಂಗಳೂರು ಬಂದರು ಪ್ರಾಧಿಕಾರದ ವತಿಯಿಂದ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಮುಂದಿನ ಹಂತದಲ್ಲಿ ಬಿ.ಸಿ. ರೋಡ್‌- ಮುಕ್ಕ ನಡುವೆ ಈಗ ಇರುವ ಚತುಷ್ಪಥ ರಸ್ತೆಯನ್ನು 6 ಪಥಕ್ಕೆ ವಿಸ್ತರಿಸಲಾಗುವುದು. ನಗರ ಪ್ರದೇಶಗಳಲ್ಲಿ ಈ ಹೆದ್ದಾರಿಯನ್ನು ಎಲಿವೇಟೆಡ್‌ ಹೈವೇ ಆಗಿ ಅಭಿವೃದ್ಧಿಪಡಿಸಿದರೆ, ಉಳಿದೆಡೆ ಅಗಲೀಕರಣ ಮಾಡಲಾಗುವುದು ಎಂದು ವಿವರಿಸಿದರು.ಭೂಸ್ವಾಧೀನ ಸಮಸ್ಯೆ ಇತ್ಯರ್ಥ: ಬಿಕರ್ನಕಟ್ಟೆ- ಸಾಣೂರು ನಡುವಿನ ಹೆದ್ದಾರಿ ಕಾಮಗಾರಿ ಶೇ.30ರಷ್ಟು ಮುಗಿದಿದೆ. ಬಿಕರ್ನಕಟ್ಟೆಯ ಒಂದು ಗ್ರಾಮದ ಭೂಸ್ವಾಧೀನ ಸಮಸ್ಯೆ ಹೊರತುಪಡಿಸಿದರೆ ಉಳಿದ ಕಡೆಯ ಸಮಸ್ಯೆ ಮುಗಿದಿದೆ. ಕುಡುಪು ದೇವಾಲಯದವರೆಗೆ ಕಾಮಗಾರಿ ನಡೆಯುತ್ತಿದೆ ಎಂದು ನಳಿನ್‌ ಕುಮಾರ್‌ ಹೇಳಿದರು.ಬಿ.ಸಿ.ರೋಡ್‌- ಅಡ್ಡಹೊಳೆ ಹೆದ್ದಾರಿ: ಬಿ.ಸಿ. ರೋಡ್‌- ಅಡ್ಡಹೊಳೆ ನಡುವಿನ ಹೆದ್ದಾರಿ ಕಾಮಗಾರಿಯಲ್ಲಿ ಬಿ.ಸಿ.ರೋಡ್‌- ಪೆರಿಯಶಾಂತಿ ಮಧ್ಯೆಯ 48 ಕಿ.ಮೀ. ಉದ್ದದ ಚತುಷ್ಪಥ ಕಾಂಕ್ರೀಟ್ ಹೆದ್ದಾರಿ‌ ಕಾಮಗಾರಿಯ ಶೇ.40ರಷ್ಟು ಮುಗಿದಿದೆ. ಕಲ್ಲಡ್ಕ ಮೇಲ್ಸೇತುವೆ, ಪಾಣೆಮಂಗಳೂರು ಹಾಗೂ ಉಪ್ಪಿನಂಗಡಿ ಸೇತುವೆ ಕಾಮಗಾರಿಗೆ ಸ್ವಲ್ಪ ಸಮಯ ಹಿಡಿಯಿತು. ಉಳಿದಂತೆ ಪೆರಿಯಶಾಂತಿ- ಅಡ್ಡಹೊಳೆಯ 15 ಕಿ.ಮೀ. ರಸ್ತೆಯ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು.ಚಾರ್ಮಾಡಿ ರಸ್ತೆ: ಬಿ.ಸಿ.ರೋಡ್‌ ಪೂಂಜಾಲಕಟ್ಟೆ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದೆ. ಪೂಂಜಾಲಕಟ್ಟೆ- ಚಾರ್ಮಾಡಿ ಕಾಮಗಾರಿ ಶೇ.20ರಷ್ಟು ಮುಗಿದಿದ್ದು, ಪ್ರಗತಿಯಲ್ಲಿದೆ. ಚಾರ್ಮಾಡಿ ಘಾಟ್‌ ಅಗಲೀಕರಣಕ್ಕೆ ಶಿಲಾನ್ಯಾಸ ಆಗಿದ್ದು, ಮುಂದಿನ ಹಂತದಲ್ಲಿ ಆ ಕಾಮಗಾರಿಯೂ ನಡೆಯಲಿದೆ ಎಂದು ವಿವರಿಸಿದರು.ನಂತೂರು ಫ್ಲೈಓವರ್‌: ನಂತೂರು ಹಾಗೂ ಕೆಪಿಟಿ ಮೇಲ್ಸೇತುವೆ ಕಾಮಗಾರಿಗಳಿಗೆ ಟೆಂಡರ್‌ ಆಗಿದೆ. ಆದರೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ, ಅದು ತೆರವಾದ ಕೂಡಲೆ ಕಾಮಗಾರಿ ಶುರುವಾಗಲಿದೆ ಎಂದು ನಳಿನ್‌ ಕುಮಾರ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾನತೆಯ ಅರಿವಿನ ಡಾ.ಅಂಬೇಡ್ಕರ್‌ ಹಬ್ಬ: ಡಾ.ಶಿವಾನಂದ
ಸಿದ್ದೇಶ್ವರ ಕೋಚಿಂಗ್ ಕ್ಲಾಸ್‌ ವಿದ್ಯಾರ್ಥಿಗಳ ಉತ್ತಮ ಸಾಧನೆ