ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ‘ಹೈ ರಿಸ್ಕ್ ಅಂಡ್ ಕ್ರಿಟಿಕಲ್ ಕೇರ್ ಒಬ್ಸೆಟ್ರಿಕ್ಸ್’ ಕುರಿತು ಪ್ರಾದೇಶಿಕ ಸಮ್ಮೇಳನವನ್ನು ಗುರುವಾರ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಫಾದರ್ ಮುಲ್ಲರ್ ಕಾಲೇಜಿನ ಪ್ರಾಧ್ಯಾಪಕಿ ಡಾ. ರೀನಾ ವಿಲ್ಟಾ ಪ್ರಾಂಕ್ ಸಮ್ಮೇಳನ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಇಲ್ಲಿನ ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್‌ನಲ್ಲಿ ‘ಹೈ ರಿಸ್ಕ್ ಅಂಡ್ ಕ್ರಿಟಿಕಲ್ ಕೇರ್ ಒಬ್ಸೆಟ್ರಿಕ್ಸ್’ ಕುರಿತು ಪ್ರಾದೇಶಿಕ ಸಮ್ಮೇಳನವನ್ನು ಗುರುವಾರ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಯಾಗಿದ್ದ ಮಂಗಳೂರಿನ ಫಾದರ್ ಮುಲ್ಲರ್ ಕಾಲೇಜಿನ ಪ್ರಾಧ್ಯಾಪಕಿ ಡಾ. ರೀನಾ ವಿಲ್ಟಾ ಪ್ರಾಂಕ್ ಸಮ್ಮೇಳನ ಉದ್ಘಾಟಿಸಿದರು.ಈ ಸಂದರ್ಭ ಐಎಂಜೆ ಇನ್ಸ್ಟಿಟ್ಯೂಷನ್ಸ್ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ ಮಾತನಾಡಿ, ಸಮ್ಮೇಳನ ಆಯೋಜಿಸಿದ ಎಂಸಿಎನ್ ಪ್ರಾಧ್ಯಾಪಕರು ಹಾಗೂ ಸಮ್ಮೇಳನಗಳನ್ನು ನಡೆಸಲು ಬಹಳ ಉತ್ತೇಜನ ನೀಡುತ್ತಿರುವ ಐಎಂಜೆ ಇನ್ಸ್ಟಿಟ್ಯೂಷನ್ಸ್ ಛೇರ್ಮನ್ ಸಿದ್ದಾರ್ಥ ಶೆಟ್ಟಿ ಅವರನ್ನು ಅಭಿನಂದಿಸಿದರು. ಸಂಸ್ಥೆಯ ಉಪ ಪ್ರಾಂಶುಪಾಲೆ ರೂಪಶ್ರೀ ಕೆ. ಎಸ್. ಉಪಸ್ಥಿತರಿದ್ದರುಸಭಾ ಕಾರ್ಯಕ್ರಮದ ನಂತರ ಆಹ್ವಾನಿತ ವಿಷಯ ತಜ್ಞರಿಂದ ವಿಚಾರ ಮಂಡನೆ ನಡೆಯಿತು. ಮೊದಲನೆಯವರಾಗಿ ಡಾ. ರೀನಾ ವಿಲ್ಮಾ ಪ್ರಾಂಕ್ ಅವರು ‘ಪ್ರಸೂತಿಯಲ್ಲಿ ಕೃತಕ ಬುದ್ಧಿಮತ್ತೆ’ ಎನ್ನುವ ವಿಷಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ನಂತರ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ನ ಡಾ. ಸೋನಿಯಾ ಆರ್. ಬಿ. ಡಿಸೋಜ ಹಾಗು ರಂಜನಿ ಪಿ. ಅವರು ‘ಗರ್ಭಾವಸ್ಥೆಯಲ್ಲಿ ತೀವ್ರ ರಕ್ತದೊತ್ತಡ ನಿರ್ವಹಣೆ’ಯ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು. ಅಪರಾಹ್ನ ಸ್ತ್ರೀರೋಗ ತಜ್ಞೆ ಡಾ. ಪ್ರಿಯಾಂಕ ಜೋಗಿ ಅವರು ‘ಶೋಲ್ಡರ್ ಡಿಸ್ಟ್ರೊಶಿಯಾ’ದ ಬಗ್ಗೆ ವಿಚಾರ ಮಂಡಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದವರಿಗೆ ಉಪಪ್ರಾಂಶುಪಾಲೆ ರೂಪ ಶ್ರೀ ಕೆ.ಎಸ್. ಪ್ರಮಾಣ ಪತ್ರ ವಿತರಿಸಿದರು. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸೆರೆನಾ ನಿರೂಪಿಸಿ, ಮಂಜುನಾಥ್ ವಂದಿಸಿದರು. ಹಲವು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.