ಉಳ್ಳಾಲ: ಉಳ್ಳಾಲ ತಾಲೂಕು ಕುರ್ನಾಡು ಶ್ರೀ ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೆ ವಿದ್ಯಾರ್ಥಿಗಳ ಸಹಯೋಗದೊಂದಿಗೆ ಶಾಲೆ ವಿದ್ಯಾರ್ಥಿಗಳಿಗೆ ಆಯುಷ್ಮಾನ್ ಕಾರ್ಡ್ ನೋಂದಣಿ ಮತ್ತು ವಿತರಣಾ ಸಮಾರಂಭ ಭಾನುವಾರ ನಡೆಯಿತು.
ಶಾಲಾ ಸಂಚಾಲಕ ಗಣೇಶ್ ನಾಯ್ಕ್, ಹಿರಿಯ ವಿದ್ಯಾರ್ಥಿ ಸುಂದರ ದೇವಾಡಿಗ, ಪುತ್ತೂರು ವಿವೇಕಾನಂದ ಕಾಲೇಜ್ ನಿವೃತ್ತ ಪ್ರಾಂಶುಪಾಲ ಜೀವನ್ ದಾಸ್ ಗಟ್ಟಿ, ಕುರ್ನಾಡು ಗ್ರಾ.ಪಂ. ಉಪಾಧ್ಯಕ್ಷ ಅಶ್ರಫ್, ಶಾಲಾ ಮುಖ್ಯೋಪಾಧ್ಯಾಯನಿ ವಸಂತಿ, ದತ್ತಾತ್ರೇಯ ಭಜನಾ ಮತ್ತು ಯಕ್ಷಗಾನ ಮಂಡಳಿ ಉಪಾಧ್ಯಕ್ಷ ಮೋಹನ್ ಕುರ್ನಾಡು, ಶಾಲೆಯ ಶಿಕ್ಷಕ ರಕ್ಷಕ ಸಮಿತಿ ಉಪಾಧ್ಯಕ್ಷ ಮೋಹನ್ ನಾಯಕ್, ಹಳೆ ವಿದ್ಯಾರ್ಥಿಗಳಾದ ನಿಯಾಝ್ ಕುರ್ನಾಡು, ಅಲ್ವಿನ್ ಪಿಂಟೋ ಮತ್ತಿತರರು ಹಾಜರಿದ್ದರು.ವಿದ್ಯಾರ್ಥಿನಿಯರಾದ ತ್ರಿಶ ಮತ್ತು ನೃತಿಕ ಪ್ರಾರ್ಥಿಸಿದರು. ರೇಖಾ ನಿೂಪಿಸಿದರು. ಮೇಘಶ್ರೀ ಕೆ.ಪಿ.ಸ್ವಾಗತಿಸಿದರು. ರಂಜಿತ್ ಎಂ. ವಂದಿಸಿದರು.ಶಾಂತಶ್ರೀ ಪ್ರಶಸ್ತಿಗೆ ವಿದ್ಯಾಮನೋಜ್ ಆಯ್ಕೆ:ಕಲ್ಲಡ್ಕ ಶ್ರೀಶಾರದಾ ಸೇವಾ ಪ್ರತಿಷ್ಠಾನದ ವತಿಯಿಂದ ಕಲ್ಲಡ್ಕದಲ್ಲಿ ನಡೆಯುವ 48 ನೇ ವರ್ಷದ ಶಾರದೋತ್ಸವದಲ್ಲಿ ಹಿರಿಯ ನಾಟಕಕಾರ ದಿ.ಶಾಂತಾರಾಮ ಕಲ್ಲಡ್ಕ ನೆನಪಿನಲ್ಲಿ ನೀಡುವ ‘ಶಾಂತಶ್ರೀ’ ಪ್ರಶಸ್ತಿಗೆ ವಿದುಷಿ ವಿದ್ಯಾ ಮನೋಜ್ ಆಯ್ಕೆಯಾಗಿದ್ದರೆ. 44 ವರ್ಷ ಶಬರಿಮಲೆ ಯಾತ್ರೆ ಕೈಗೊಂಡ ಶತಾಯುಷಿಗಳಾದ ಕಮಲ ಗುರುಸ್ವಾಮಿ ಕುಂಟಿಪಾಪು ಮತ್ತು ಸ್ವಉದ್ಯಮದಲ್ಲಿ ಸಾಧನೆಗೈದ ಸಾಧಕಿ ನಾಗರತ್ನ ಪೂರ್ಲಿಪಾಡಿ ಅವರನ್ನು ‘ಗ್ರಾಮ ಗೌರವ’ ಪುರಸ್ಕಾರಕ್ಕೆ ಆಯ್ಕೆಮಾಡಲಾಗಿದೆ. 29 ರಂದು ವೇದಮೂರ್ತಿ ಪಳನೀರು ಶ್ರೀಪತಿ ಭಟ್ ಇವರ ಪೌರೋಹಿತ್ಯದಲ್ಲಿ ಶಾರದಾ ಮಾತೆಯ ಪ್ರತಿಷ್ಠಾಪನೆ ನೆರವೇರಲಿದೆ. ದುರ್ಗಾಹೋಮ, ಶಾರದೆಗೆ ರಂಗಪೂಜೆ, ಅಕ್ಷರಭ್ಯಾಸ, ಆಯುಧಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಗಣ್ಯರ ಭಾಗವಹಿಸುವಿಕೆಯಲ್ಲಿ ಧಾರ್ಮಿಕ ಸಭೆ, ಪ್ರಶಸ್ತಿ ಪ್ರಧಾನ,ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ನೌಕಸೇನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಅಭಿನಂದನೆ ಮಾಡಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.