ಕನ್ನಡಪ್ರಭ ವಾರ್ತೆ ಮಂಡ್ಯ
ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ಕೆ.ವಿ.ಶಂಕರಗೌಡ ಅವರ ೧೧ನೇ ಜನ್ಮದಿನದ ಅಂಗವಾಗಿ ೨೦೨೫ನೇ ಸಾಲಿನ ರಾಜ್ಯ ಮಟ್ಟದ ಕೆ.ವಿ.ಶಂಕರಗೌಡ ಮತ್ತು ಕೆ.ಎಸ್.ಸಚ್ಚಿದಾನಂದ ರಂಗಭೂಮಿ ಮತ್ತು ಸಮಾಜ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜು.೧೫ರ ಬೆಳಗ್ಗೆ ೧೧ ಗಂಟೆಗೆ ನಿತ್ಯ ಸಚಿವ ಕೆ.ವಿ.ಶಂಕರಗೌಡ ತರಬೇತಿ ಮತ್ತು ಉದ್ಯೋಗ ಕೇಂದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ನ ನಿರ್ದೇಶಕ ಡಾ.ರಾಮಲಿಂಗಯ್ಯ ತಿಳಿಸಿದರು.೧೯೯೦ರಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ೩೭ಕ್ಕೂ ಹೆಚ್ಚು ರಂಗಭೂಮಿ ಮತ್ತು ೩೦ಕ್ಕೂ ಹೆಚ್ಚು ಸಮಾಜ ಸೇವಾ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದಿವ್ಯಸಾನ್ನಿಧ್ಯವನ್ನು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ವಹಿಸಿ ಪ್ರಶಸ್ತಿ ಪ್ರದಾನ ಮಾಡುವರು. ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ಅವರು ಅಧ್ಯಕ್ಷತೆ ವಹಿಸಲಿದ್ದು, ಉಪಾಧ್ಯಕ್ಷ ಬಸವಯ್ಯ ಉದ್ಘಾಟಿಸುವರು ಎಂದರು.ಕೆ.ವಿ.ಶಂಕರಗೌಡರ ಜೀವನ ಕುರಿತು ನಿತ್ಯ ಸಚಿವ ನಾಟಕದಲ್ಲಿ ಹಿರಿಯ ಶಂಕರಗೌಡರ ಪಾತ್ರದಲ್ಲಿ ನಟಿಸಿರುವ ರಂಗಭೂಮಿ ಕಲಾವಿದ ಅಜಯ್ ನೀನಾಸಂ ಅವರಿಗೆ ರಾಜ್ಯ ಮಟ್ಟದ ರಂಗಭೂಮಿ ಪ್ರಶಸ್ತಿ ಹಾಗೂ ವಿಕಸನ ಜೋಗುಳ ದತ್ತು ಸೇವಾ ಕೇಂದ್ರಕ್ಕೆ ರಾಜ್ಯ ಮಟ್ಟದ ಸಮಾಜ ಸೇವಾ ಪ್ರಶಸ್ತಿ ನೀಡಲಾಗುತ್ತಿದ್ದು, ವಿಕಸನ ಜೋಗುಳ ದತ್ತು ಸೇವಾ ಕೇಂದ್ರದ ಪರವಾಗಿ ಮಹೇಶ್ ಚಂದ್ರಗುರು ಪ್ರಶಸ್ತಿ ಸ್ವೀಕರಿಸುವರು. ಜನತಾ ಶಿಕ್ಷಣ ಟಸ್ಟ್ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಉಪಸ್ಥಿತರಿರುವರು ಎಂದರು.
ಗೋಷ್ಠಿಯಲ್ಲಿ ಟ್ರಸ್ಟ್‌ನ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಇದ್ದರು.ಇಂದು ವೈದ್ಯರಿಗೆ ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ ಮಂಡ್ಯನಗರದ ಸಂತೋಷ್ ಪಿಯು ಕಾಲೇಜು ವತಿಯಿಂದ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರಿಗೆ ಅಭಿನಂದನಾ ಸಮಾರಂಭವನ್ನು ಜು.೧೨ರಂದು ಬೆಳಗ್ಗೆ ೧೧ ಗಂಟೆಗೆ ಕಾಳೇಗೌಡ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ.
ಮಕ್ಕಳ ತಜ್ಞ ಡಾ.ಜಗದೀಶ್‌ಕುಮಾರ್ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಅಧ್ಯಕ್ಷತೆ ವಹಿಸುವರು. ಸಂತೋಷ್ ಪಿಯು ಕಾಲೇಜಿನ ಪ್ರಾಂಶುಪಾಲ ಬಿ.ಸಂತೋಷ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ನಂಜನಗೂಡು ಮಿಂಚು ಹೆಲ್ತ್‌ಕೇರ್‌ನ ಮಾಲೀಕ ಡಾ.ಸಿ.ಎಸ್.ರವಿ, ಮಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಸಿ.ಶ್ರೀಧರ್, ಕ್ಯಾತುಂಗೆರೆ ಪಿಎಚ್‌ಸಿ ವೈದ್ಯೆ ಡಾ.ಆರ್.ಶಶಿಕಲಾ, ಇಎನ್‌ಟಿ ತಜ್ಞ ಡಾ.ಸಿ.ನಿಂಗಯ್ಯ, ಬೆಂಗಳೂರಿನ ಮಿಂಟೋ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕಿ ಡಾ.ತನುಶ್ರೀ, ಡಾ.ಎಂ.ರಾಜೇಂದ್ರ ಪ್ರಸಾದ್ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಗುರುಸ್ವಾಮಿ, ನಗರಸಭೆ ಸದಸ್ಯ ಎಂ.ಸಂಪತ್, ಡಾ.ಎಂ.ಎಸ್.ರಾಜೇಂದ್ರಪ್ರಸಾದ್ ಸ್ಮಾರಕ ವಿದ್ಯಾಸಂಸ್ಥೆಯ ಕಾರ್ಯದರ್ಶಿ ನಾಗರತ್ನ, ಖಜಾಂಚಿ ಗುರುಕುಮಾರ್, ಆಡಳಿತಾಧಿಕಾರಿ ಚಂದ್ರಪ್ರಭ, ಕಾರ್ಯದರ್ಶಿ ಸುಜಾತ ಮತ್ತಿತರರು ಪಾಲ್ಗೊಳ್ಳುವರು.ವೈದ್ಯರ ದಿನಾಚರಣೆ ಪ್ರಯುಕ್ತ ಖ್ಯಾತ ವೈದ್ಯರಾದ ಡಾ.ವಿ.ಶರತ್‌ಕುಮಾರ್, ಡಾ.ಎಚ್.ವಿ.ಪೂಜಾ, ಡಾ.ಕೆ.ಚಂದನ್, ಡಾ.ಜಿ.ಆರ್.ಮಾಲಾ, ಡಾ.ಕೆ.ಎಲ್.ಚೇತನ್‌ಕುಮಾರ್, ಡಾ.ಚೈತ್ರಾ, ಡಾ.ಕೆ.ಪಲ್ಲವಿ, ಡಾ.ಎನ್.ಮೇಘ, ಡಾ.ಸಿ.ನಂದೀಶ್‌ಕುಮಾರ್, ಡಾ.ಅರ್ಪಿತಾ, ಡಾ.ಮುರಳಿ, ಡಾ.ಧನುಷ್‌ಗೌಡ, ಡಾ.ಪ್ರಖ್ಯಾತ್ ಮಹದೇವ್‌ಗೌಡ, ಡಾ.ಸಿ.ಆರ್.ಅಮೂಲ್ಯ, ಡಾ.ಮೋನಿಷಾ ಅವರನ್ನು ಅಭಿನಂದಿಸಲಾಗುವುದು.