ಮಳೆ ಕೊರತೆ: ಬರಿದಾಗುತ್ತಿರುವ ಕೆರೆಕಟ್ಟೆಗಳು

KannadaprabhaNewsNetwork |  
Published : Oct 15, 2023, 12:46 AM IST
14ಕೆಆರ್ ಎಂಎನ್‌ 1.ಜೆಪಿಜಿಕನಕಪುರ ತಾಲೂಕು ಕಸಬಾ ಹೋಬಳಿ ತುಂಗಣಿ ಕೆರೆ ಬರಿದಾಗುತ್ತಿರುವುದು. | Kannada Prabha

ಸಾರಾಂಶ

ರಾಮನಗರ: ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿದ ಪರಿಣಾಮ ಜಿಲ್ಲೆಯಲ್ಲಿ ಬೆಳೆ ಹಾನಿಯಿಂದ ಕೋಟ್ಯಂತರ ರುಪಾಯಿ ನಷ್ಟ ಸಂಭವಿಸಿರುವುದು ಮಾತ್ರವಲ್ಲದೆ ಜಲಮೂಲಗಳಾಗಿರುವ ಜಲಾಶಯಗಳು ಮತ್ತು ಕೆರೆಕಟ್ಟೆಗಳು ಬರಿದಾಗುತ್ತಿವೆ. ಇದರಿಂದಾಗಿ ಜನ ಜಾನುವಾರುಗಳಿಗೆ ಸಂಕಷ್ಟ ಎದುರಾಗುವ ಆತಂಕ ಸೃಷ್ಟಿಯಾಗಿದೆ.

ರಾಮನಗರ: ಮುಂಗಾರು ಮಳೆ ಸಂಪೂರ್ಣ ಕ್ಷೀಣಿಸಿದ ಪರಿಣಾಮ ಜಿಲ್ಲೆಯಲ್ಲಿ ಬೆಳೆ ಹಾನಿಯಿಂದ ಕೋಟ್ಯಂತರ ರುಪಾಯಿ ನಷ್ಟ ಸಂಭವಿಸಿರುವುದು ಮಾತ್ರವಲ್ಲದೆ ಜಲಮೂಲಗಳಾಗಿರುವ ಜಲಾಶಯಗಳು ಮತ್ತು ಕೆರೆಕಟ್ಟೆಗಳು ಬರಿದಾಗುತ್ತಿವೆ. ಇದರಿಂದಾಗಿ ಜನ ಜಾನುವಾರುಗಳಿಗೆ ಸಂಕಷ್ಟ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿನ ಕೆರೆಕಟ್ಟೆಗಳಲ್ಲಿ ನೀರು ಸಂಪೂರ್ಣ ಸಂಗ್ರಹವಾಗದೆ ಕಾಡುಪ್ರಾಣಿ, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುತ್ತಿವೆ. ಮುಂಗಾರು ಮಳೆಯ ಪ್ರಮಾಣ ವಾಡಿಕೆಗಿಂತ ಸಂಪೂರ್ಣ ಕುಸಿತ ಕಂಡಿರುವುದರಿಂದ ನೀರಿನ ಸಮಸ್ಯೆ ತೀವ್ರವಾಗಿದೆ. ಮಳೆಗಾಲದ ಸಮಯದಲ್ಲಿ ಇಷ್ಟೊಂದು ಭೀಕರತೆ ತಲೆದೋರಿದ್ದು, ಮುಂಬರುವ ಬೇಸಿಗೆ ದಿನಗಳಲ್ಲಿ ಸಮಸ್ಯೆಗಳನ್ನು ಊಹಿಸಲು ಅಸಾಧ್ಯವಾಗಿದೆ. ಮಳೆರಾಯನ ಆಟಕ್ಕೆ ಜೀವಸಂಕುಲ ಪರಿತಪಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ವರ್ಷ ಪೂರ್ವ ಮುಂಗಾರು, ಮುಂಗಾರು ಮಳೆಯ ಆರ್ಭಟದಿಂದ ಸಂಕಷ್ಟ ಅನುಭವಿಸಿದ್ದ ರೈತರು, ಈ ವರ್ಷ ಮಳೆಯ ಕೊರತೆಯಿಂದ ಆಕಾಶವನ್ನೇ ನೋಡುವಂತಾಗಿದೆ. ಜಿಲ್ಲೆಯಲ್ಲಿ ಮಳೆ ಕೊರತೆ: ಮುಂಗಾರು ಹಂಗಾಮಿನಲ್ಲಿ ಜೂನ್‌ ನಿಂದ ಸೆಪ್ಟೆಂಬರ್‌ ತಿಂಗಳ ಅಂತ್ಯದವರೆಗೆ ವಾಡಿಕೆ ಮಳೆ 436 ಮಿ.ಮೀ.ಗೆ 278 ಮಿ.ಮೀ. ಮಳೆಯಾಗಿದ್ದು, ಶೇ.36ರಷ್ಟು ಮಳೆ ಕೊರತೆಯಾಗಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ವಾಡಿಕೆ ಮಳೆ 175 ಮಿ.ಮೀ.ಗೆ 144 ಮಿ.ಮೀ. ಮಳೆಯಾಗಿ ಶೇ.18ರಷ್ಟು ಕೊರತೆಯಾಗಿದೆ. ಜನವರಿಯಿಂದ ಅಕ್ಟೋಬರ್‌ ತಿಂಗಳ ಅಂತ್ಯದವರೆಗೆ ಒಟ್ಟಾರೆ ಚನ್ನಪಟ್ಟಣ - ಶೇ.17, ಕನಕಪುರ - ಶೇ.33, ಮಾಗಡಿ - ಶೇ.21,ರಾಮನಗರ - ಶೇ.34 ಮತ್ತು ಹಾರೋಹಳ್ಳಿ - ಶೇ.25ರಷ್ಟು ಮಳೆ ಕೊರತೆಯಾಗಿದೆ. ಬರಿದಾಗುತ್ತಿವೆ ಕೆರೆಕಟ್ಟೆಗಳು: ಜಿಲ್ಲೆಯಲ್ಲಿ ಒಟ್ಟು 1496 ಕೆರೆಗಳಿದ್ದು, ಇದರಲ್ಲಿ ಸಣ್ಣ ನೀರಾವರಿ ಇಲಾಖೆ - 110 ಕೆರೆಗಳು, ಪಂಚಾಯತ್‌ ರಾಜ್ ಇಲಾಖೆ - 1322 ಕೆರೆಗಳು, ನಗರ ಸ್ಥಳೀಯ ಸಂಸ್ಥೆಗಳು - 61 ಕೆರೆಗಳು ಹಾಗೂ ಕಾವೇರಿ ನೀರಾವರಿ ನಿಗಮ 3 ಕೆರೆಗಳ ಉಸ್ತುವಾರಿ ನೋಡಿಕೊಳ್ಳುತ್ತಿವೆ. ಸಣ್ಣ ನೀರಾವರಿ ವಿಭಾಗದ ವ್ಯಾಪ್ತಿಯಲ್ಲಿ 101 ಕೆರೆಗಳು 4911.67 ಎಂಸಿಎಫ್‌ ಟಿಯಷ್ಟು ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 2 ಕೆರೆಗಳು ಮಾತ್ರ ಭರ್ತಿಯಾಗಿದ್ದು, 4 ಕೆರೆಗಳು ಸಂಪೂರ್ಣವಾಗಿ ಬರಿದಾಗಿದ್ದರೆ 41 ಕೆರೆಗಳು ಶೇ.1ರಿಂದ ಶೆ.30ರಷ್ಟು ನೀರಿದ್ದರೆ, 36 ಕೆರೆಗಳಲ್ಲಿ ಶೇ.31ರಿಂದ ಶೇ.50ರಷ್ಟು ಹಾಗೂ 18 ಕೆರೆಗಳು ಶೇ.51ರಿಂದ ಶೇ.99ರಷ್ಟು ನೀರು ಸಂಗ್ರಹವಾಗಿದೆ. ಪಂಚಾಯತ್‌ ರಾಜ್‌ ಎಂಜಿನಿಯರಿಂಗ್‌ ವಿಭಾಗ ವ್ಯಾಪ್ತಿಯ 393 ಕೆರೆಗಳು 2208.36 ಎಂಸಿಎಫ್‌ ಟಿಯಷ್ಟು ನೀರು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ ಯಾವ ಕೆರೆಗಳು ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿಲ್ಲ, ಖಾಲಿಯೂ ಆಗಿಲ್ಲ. 224 ಕೆರೆಗಳು ಶೇ.1 ರಿಂದ ಶೇ.30ರಷ್ಟು ನೀರು ಸಂಗ್ರಹವಾಗಿದ್ದರೆ, 136 ಕೆರೆಗಳು ಶೇ.31ರಿಂದ ಶೇ.50ರಷ್ಟು ಹಾಗೂ 32 ಕೆರೆಗಳು ಶೇ.51ರಿಂದ ಶೇ.99ರಷ್ಟು ನೀರು ಸಂಗ್ರಹವಾಗಿದೆ. ಕಳೆದ ಜನವರಿಯಿಂದಲೇ ಜಿಲ್ಲೆಯಲ್ಲಿ ಉಷ್ಣಾಂಶದ ಪ್ರಮಾಣ ಏರುಗತಿಯಲ್ಲಿತ್ತು. ಹೆಚ್ಚುತ್ತಿರುವ ಬಿಸಿಲಿನಿಂದ ಜಲಮೂಲಗಳಾದ ಕೆರೆಕಟ್ಟೆಗಳು ಬರಿದಾಗುತ್ತಿವೆ. ಅಂತರ್ಜಲ ಮಟ್ಟವೂ ಗಂಭೀರ ಸ್ಥಿತಿಗೆ ತಲುಪುವಂತಾಗಿದೆ. ಇದರಿಂದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗುವಂತಾಗಿದೆ. ಸಮಸ್ಯೆ ಕಂಡುಬರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಬಾಕ್ಸ್ ............... ರಾಮನಗರ ಜಿಲ್ಲೆಯ ವಿವಿಧ ತಾಲೂಕುಗಳ ನೂರಾರು ಕೆರೆಗಳು ನೀರಿಲ್ಲದೆ ಬರಿದಾಗುತ್ತಿದ್ದು, ಅಂತರ್ಜಲ ಮಟ್ಟ ಗಂಭೀರ ಸ್ಥಿತಿಗೆ ತಲುಪಿದೆ. ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗುವ ಸಾಧ್ಯತೆಗಳಿವೆ. ಹೆಚ್ಚುತ್ತಿರುವ ಬಿಸಿಲಿನಿಂದ ಮೇವು ಹಾಗೂ ನೀರಿಗೆ ಜಾನುವಾರುಗಳು ಅಲೆದಾಡುವ ಸ್ಥಿತಿ ಎದುರಾಗಲಿದ್ದು, ಹಸಿರು ಒಣಗಿ ಹೋಗಿದೆ. ಗದ್ದೆ, ತೋಟಗಳಲ್ಲಿ ಬೋರ್ ವೆಲ್‌ ಗಳು ಕೈಕೊಡುತ್ತಿರುವುದರಿಂದ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ. ಕೆಲ ರೈತರು ಹೊಸದಾಗಿ ಬೋರ್‌ ವೆಲ್ ಕೊರೆಯಿಸಿದರೆ, ಮತ್ತೆ ಕೆಲವರು ಟ್ಯಾಂಕರ್ ಮತ್ತಿತರ ವ್ಯವಸ್ಥೆಗಳ ಮೂಲಕ ನೀರು ಪೂರೈಸಿ ಬೆಳೆ ಉಳಿಸಿಕೊಳ್ಳಲು ಹರಸಾಹಸ ನಡೆಸುತ್ತಿದ್ದಾರೆ. (ಜನವರಿಯಿಂದ ಅಕ್ಟೋಬರ್‌ 6ರವರೆಗಿನ ಮಳೆ ವಿವರ - ಮಿಲಿಮೀಟರ್‌ ನಲ್ಲಿ) ತಾಲೂಕ. ವಾಡಿಕೆ ಮಳ. ಸುರಿದ ಮಳ. ಮಳೆ ಕೊರತೆ ಚನ್ನಪಟ್ಟ. 668.. 558.. - 17 ಕನಕಪು. 606.. 405.. - 33 ಮಾಗಡ. 791.. 625.. - 21 ರಾಮನಗ. 719.. 472.. - 34 ಹಾರೋಹಳ್ಳ. 65. 49. -25 ಒಟ್ಟ. 60. 48. -19 14ಕೆಆರ್ ಎಂಎನ್‌ 1.ಜೆಪಿಜಿ ಕನಕಪುರ ತಾಲೂಕು ಕಸಬಾ ಹೋಬಳಿ ತುಂಗಣಿ ಕೆರೆ ಬರಿದಾಗುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗೆ ಕಾಲಿಟ್ಟಿರೋ ಹುಷಾರ್‌, ಕಚ್ಲಿಕ್ಕೆ ಕಾಯ್ತಿವೆ ಬೀದಿ ನಾಯಿ
ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆಯತ್ನಿಸಿದ ಮೂವರ ಬಂಧನ