ಯುವ ಸಮುದಾಯದ ಸೋಮಾರಿತನ ದೇಶಕ್ಕೆ ಮಾರಕ: ಸ್ವಾಮೀಜಿ

KannadaprabhaNewsNetwork | Published : May 28, 2024 1:08 AM

ಸಾರಾಂಶ

ಯುವ ಸಮುದಾಯದಲ್ಲಿ ದುಡಿಯುವ ಪ್ರವೃತ್ತಿಗಿಂಥ ಸೋಮಾರಿ ಮನೋಭಾವ ಹೆಚ್ಚತೊಡಗಿದ್ದು, ಇದು ಹೀಗೆ ಮುಂದುವರೆದರೆ ದೇಶ ಮತ್ತು ಸಮಾಜಕ್ಕೆ ಮಾರಕವಾಗಲಿದೆ ಎಂದು ಮಾದನಹಿಪ್ಪರಗಾ ಮಠದ ಅಭಿನವ ಶಿವಲಿಂಗ ಸ್ವಾಮೀಜಿ ತೀವ್ರ ಆತಂಕ ಹೊರಹಾಕಿದರು.

ಕನ್ನಡಪ್ರಭ ವಾರ್ತೆ ಆಳಂದ

ಯುವ ಸಮುದಾಯದಲ್ಲಿ ದುಡಿಯುವ ಪ್ರವೃತ್ತಿಗಿಂಥ ಸೋಮಾರಿ ಮನೋಭಾವ ಹೆಚ್ಚತೊಡಗಿದ್ದು, ಇದು ಹೀಗೆ ಮುಂದುವರೆದರೆ ದೇಶ ಮತ್ತು ಸಮಾಜಕ್ಕೆ ಮಾರಕವಾಗಲಿದೆ ಎಂದು ಮಾದನಹಿಪ್ಪರಗಾ ಮಠದ ಅಭಿನವ ಶಿವಲಿಂಗ ಸ್ವಾಮೀಜಿ ತೀವ್ರ ಆತಂಕ ಹೊರಹಾಕಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರತಿಷ್ಠಿತ ಅಫ್ಜಲ್ ಮಶಾಕಬೀ ತಾಹೇರ್ ಅನ್ಸಾರಿ ಮಹಾವಿದ್ಯಾಲಯ ಎನ್‌ಎಸ್‌ಎಸ್ ಘಟಕದ ವಿಶೇಷ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಸಮರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಯುವ ಸಮುದಾಯಕ್ಕೆ ಸಮಾಜದಲ್ಲಿ ಜವಾಬ್ದಾರಿಂದ ಸಿಕ್ಕ ಯಾವುದೇ ರೀತಿಯ ಸೇವಾ ಅವಕಾಶವನ್ನು ಸದ್ಬಳಕೆ ಮಾಡುವ ಮೂಲಕ ದೇಶ ಮತ್ತು ಸಮಾಜ ಸೇವಕರಾಗಿ ಹೊರಹೊಮ್ಮಬೇಕು. ಇದುವೇ ಸಾಥರ್ಕ ಬದುಕು. ಸಾಮಾಜಿಕ ಪ್ರಗತಿ ಮತ್ತು ಸರ್ಕಾರದ ಸೇವೆಗಳ ಬಲವರ್ಧನೆಯು ಸಮಾನಂತರವಾಗಿ ಜನ ಸೇವೆಯು ನಡೆಯಬೇಕು. ಇದರೊಂದಿಗೆ ದೇಶದಲ್ಲಿ ಎಲ್ಲ ಮೂಲಭೂತ ವ್ಯವಸ್ಥೆಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಯುವ ಸಮುದಾಯದಲ್ಲಿ ದುಡಿಯುವ ಪ್ರವರ್ತಿಯನು ಕಡಿಮೆಯಾಗುತ್ತಿದೆ, ದುಶ್ಚಟಗಳಿಗೆ ಬಲಿಯಾಗದೇ ಕಠಿಣ ಪರಿಶ್ರಮ ಉನ್ನತ ಹುದ್ದೆಯ ಕನಸಿನೊಂದಿಗೆ ದುಡಿಯುವ ಪ್ರತವರ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ಗುಲಬರರ್ಗಾ ವಿವಿ ಕುಲಸಚಿವ ಡಾ. ಮೇಧಾವಿನಿ ಕಟ್ಟಿ ಅವರು ಮಾತನಾಡಿ, ದೇಶ ಮತ್ತು ಸಮಾಜ ಸೇವೆಗಾಗಿ ಪರಿಶ್ರಮವನ್ನು ಪಡಬೇಕು. ಆಗ ಮಾತ್ರ ದೇಶದ ಅಭಿವೃದ್ಧಿಯಾಗುತ್ತದೆ ಎಂಬ ಉದ್ದೇಶದಿಂದ ವಿವಿ ಆಶ್ರಯದ ಕಾಲೇಜುಗಳಲ್ಲಿ ಎನ್‌ಎಸ್‌ಎಸ್ ಶಿಬಿರಗಳನ್ನು ನಡೆಸಲಾಗುತ್ತಿದೆ. ಇದರ ಸದ್ಬಳಕೆ ಮಾಡಿಕೊಂಡು ವ್ಯಕ್ತಿತ್ವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮ ಸ್ವರಾಜದ ಕನಸು ಕಂಡಿದ್ದ ಮಹಾತ್ಮಗಾಂಧೀಜಿಯವ ಕನಸು ನನಸಾಗಿಸಲು ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ತೊಡಗುವ ಮೂಲಕ ವ್ಯಕ್ತಿತ್ವನ್ನು ರೂಪಿಸಿಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಗುಲ್ಬರ್ಗ ವಿವಿ ಎನ್‌ಎಸ್‌ಎಸ್ ಅಧಿಕಾರಿ ಡಾ. ಎನ್.ಜಿ. ಕಣ್ಣೂರ ಅವರು ಮಾತನಾಡಿ, ರಾಷ್ಟೀಯ ಸೇವಾ ಯೋಜನೆಯ ಶಿಬಿರವು ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ವಿಕಸನಕ್ಕಾ ರಹದಾರಿಯಾಗಿದೆ. ಶಿಬಿರದಲ್ಲಿ ಉತ್ತಮ ಕಾರ್ಯಗಳನ್ನು ಮಾಡಿ ಮತ್ತು ಉಪನ್ಯಾಸನಗಳ ಆಲಿಸಿ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ರವಿಚಂದ್ರ ಕಂಟೆಕುರೆ ಅವರು ಮಾತನಾಡಿ, ವಿದ್ಯಾರ್ಥಿಗಳ ಪದವಿ ಕಲಿಕೆಯೊಂದಿಗೆ ನಿಮ್ಮ ವ್ಯಕ್ತಿತ್ವ ವಿಕಸನ ಮತ್ತು ಮಾನವೀಯ ಮೌಲ್ಯಗಳು. ಸಮಾಜ ಸೇವಾ ಮನೋಭಾವ ಬೆಳೆಸಿಕೊಳ್ಳಲು ಇಂಥ ಶಿಬಿರಗಳ ಲಾಭವನ್ನು ಪಡೆದುಕೊಂಡು ಸಮಾಜ ಕಾರ್ಯದಲ್ಲಿ ಯುವ ಸಮುದಾಯ ತೊಡಗಬೇಕು ಎಂಬ ಸದುದ್ದೇಶವನ್ನು ಈಡೇರೆಸಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು.

ಇನ್ನೊರ್ವ ಮುಖ್ಯ ಅತಿಥಿಗಳಾಗಿದ್ದ ಪತ್ರಕರ್ತ ಮಹಾದೇವ ವಡಗಾಂವ ಅವರು ಮಾತನಾಡಿ, ಕಲಿಕೆಯಲ್ಲಿ ಪರಿಪೂರ್ಣತೆ ತಂದುಕೊಳ್ಳಲು ಎಐ ಮತ್ತು ಚಾಟ್‌ಜಿಟಿಪಿಯಂತಹ ತಂತ್ರಜ್ಞಾನ ಸಹಾಯ ಪಡೆದು ಪದವಿಯೊಂದಿಗೆ ಮುಂದೆ ಉದ್ಯಗ, ಉದ್ಯಮೆ ಮತ್ತು ನೌಕರಿಯಲ್ಲಿ ವೃತ್ತಿ ಕೌಶಲ್ಯತೆ ಸ್ಕೇಲರ್‌ಗಳಾಗಿ ಹೊರಹೊಮ್ಮಬೇಕು ಎಂದರು.

ಪ್ರಾಧ್ಯಾಪಕ ಡಾ. ಅರವಿಂದ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ರಾಜಶೇಖರ ಪಾಟೀಲ ನಿರೂಪಿಸಿದರು. ಡಾ. ರಾಜಕುಮಾರ ಹಿರೇಮಠ ಸ್ವಾಗತಿಸಿದರು. ದೋಂಡಿಬಾ ನಿಕಂ ವಂದಿಸಿದರು. ಈ ಸಂದರ್ಭದಲ್ಲಿ ಎನ್‌ಎಸ್‌ಎಸ್ ಶಿಬಿರಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

Share this article