ವಿಜಯಪುರ: ಸಮಾಜದಲ್ಲಿ ಉತ್ತಮ ನಾಯಕರಾಗಿ ಬೆಳೆಯಲು ಸಹಕರಿಸಿದ ಜನರ ಏಳಿಗೆಗಾಗಿ ಸದಾ ಸಿದ್ಧರಾಗಿರಬೇಕು ಎಂದು ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಹೇಳಿದರು.
ಪುರಸಭೆ ಮಾಜಿ ಪುರಸಭೆ ಸದಸ್ಯ ಸಂಪತ್ ಕುಮಾರ್ ಮಾತನಾಡಿ, ಸತೀಶ್ ಕುಮಾರ್ ಅವರು ಶಿಕ್ಷಣ ಸಂಸ್ಥೆಗಳ ಜೊತೆಗೆ ಪುರಸಭೆಯಲ್ಲಿ ಜನಪ್ರತಿನಿಧಿಯಾಗಿ, ವಾರ್ಡುಗಳ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಎಸ್.ಭವ್ಯಾಮಹೇಶ್, ಪ್ರಥಮ ದರ್ಜೆ ಗುತ್ತಿಗೆದಾರರಾದ ರವೀಶ್, ವಿಜಯ ಬಸ್ ಮಾಲೀಕ ಗೀತೇಶ್, ಮಹಂತಿನ ಮಠದ ಅಧ್ಯಕ್ಷರಾದ ಪುನೀತ್ ಕುಮಾರ್, ಕಾರ್ಯದರ್ಶಿ ವಿಶ್ವನಾಥ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗೌಸ್ ಖಾನ್, ಟೌನ್ ಕಾಂಗ್ರೆಸ್ ಅಧ್ಯಕ್ಷ ವಿ.ಎಂ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಮಂಜುನಾಥ್, ಪುರಸಭೆ ಸದಸ್ಯರಾದ ಎಂ.ನಾರಾಯಣಸ್ವಾಮಿ, ಎಂ.ರಾಜಣ್ಣ, ಸೈಯದ್ ಎಕ್ಭಾಲ್, ಕೆ.ಎಂ.ಮಧು ಮಹೇಶ್, ಆರ್.ಮುನಿರಾಜು, ಮುನಿಚಿನ್ನಪ್ಪ, ಕೆ.ಮುನಿರಾಜು, ಮುನಿರಾಜು, ಹೆಚ್.ಟಿ.ನಾರಾಯಣಸ್ವಾಮಿ, ಎಜಾಜ್ ಅಹಮದ್, ಅಪ್ಜಲ್ ಪಾಷ, ಆರ್.ಎಂ.ಸಿಟಿ.ಮಂಜುನಾಥ್, ನಯಾಜ್ ಪಾಷಾ, ಎಂ.ವೇಣುಗೋಪಾಲ್, ಮುನಿನಾರಾಯಣಪ್ಪ, ಮುನ್ನಾಖಾನ್, ಜಗದೀಶ್, ರಮೇಶ್, ಹರೀಶ್ ಮುಂತಾದವರು ಹಾಜರಿದ್ದರು.