ಹೆಣ್ಮಕ್ಕಳು ರಂಗೋಲಿ ಕಲಿಯಿರಿ

KannadaprabhaNewsNetwork | Published : Sep 16, 2024 1:57 AM

ಸಾರಾಂಶ

ಹೊಸಕೋಟೆ: ರಂಗೋಲಿ ನಮ್ಮ ಸಂಸ್ಕೃತಿ, ಸಂಪ್ರದಾಯದ ಸಂಕೇತ, ಮಹಿಳೆಯರು ರಂಗೋಲಿ ಕಲೆಯನ್ನು ಮುಂದಿನ ಪೀಳಿಗೆಗೆ ಕಲಿಸಬೇಕು. ಇತ್ತೀಚಿನ ದಿನಗಳಲ್ಲಿ ಬೆಳಗಿನ ಜಾವ ಮನೆಗಳ ಮುಂದೆ ರಂಗೋಲಿ ಕಾಣಿಸುತ್ತಿಲ್ಲ. ಇದು ನಮ್ಮ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ ಎನ್ನುವ ಸಂಕೇತ ತೋರುತ್ತಿದೆ. ಹಾಗಾಗದಂತೆ ಪ್ರತಿ ತಾಯಂದಿರು ಹೆಣ್ಣು ಮಕ್ಕಳಿಗೆ ರಂಗೋಲಿ ಕಲೆ ಕಲಿಸಿ ಸಂಸ್ಕೃತಿ ರಕ್ಷಣೆಗೆ ಮುಂದಾಗಬೇಕು ಎಂದು ಗ್ರಾಪಂ ಸದಸ್ಯ ಮುನೇಗೌಡ ತಿಳಿಸಿದರು

ತಾಲೂಕಿನ ಕಸಬಾ ಹೋಬಳಿಯ ಚಿಕ್ಕಗಟ್ಟಿಗನಬ್ಬೆ ಗ್ರಾಮದ ರಚ್ಚೆಕಟ್ಟೆ ವಿನಾಯಕ ಗೆಳೆಯರ ಬಳಗದ ವತಿಯಿಂದ ೧೫ನೇ ಗಣೇಶೋತ್ಸವದಲ್ಲಿ ರಂಗೋಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.ಅಟಲ್ ಭೂಜಲ ಯೋಜನೆ ಲೆಕ್ಕ ಪರಿಶೋಧನಾ ಸಮಿತಿ ಅಧ್ಯಕ್ಷ ಪಿಬಿ ಚಂದ್ರಶೇಖರ್ ಮಾತನಾಡಿ, ನಶಿಸಿ ಹೋಗುತ್ತಿರುವ ರಂಗೋಲಿ ಸಂಸ್ಕೃತಿಯನ್ನು ಉಳಿಸುವ ಉದ್ದೇಶದೊಂದಿಗೆ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಹಿಂದೆಲ್ಲ ರಂಗೋಲಿ ಎಂದರೆ ಮನೆಯೊಡತಿಯ ಹಕ್ಕೆಂದೇ ಭಾವಿಸಿದ್ದರು. ನಾಗರಿಕತೆ ಬೆಳೆದಂತೆ ರಂಗೋಲಿ ಹಾಕುವುದನ್ನೂ ಮನೆ ಕೆಲಸದವರೇ ಮಾಡುತ್ತಾರೆ. ಶ್ರೀಮಂತ ಗೃಹಿಣಿಯರ ಮನದಲ್ಲಿಯೂ ಈ ಭಾವನೆಯೇ ಇದೆ. ಆದರೆ, ರಂಗೋಲಿ ಕಲೆ ಭಾವನೆ- ಸಂಬಂಧಗಳನ್ನು ಬೆಸೆಯುವ ಸಂಕೇತ. ಭಾರತೀಯ ಸಂಸ್ಕೃತಿ ಹಾಗೂ ಪರಂಪರೆ ಉಳಿಸಬೇಕು ಎಂದರು.

ರಂಗೋಲಿ ಸ್ಪರ್ಧೆಯಲ್ಲಿ ೫೦ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಮೂಡಿಸಿದ್ದರು. ಸ್ಪರ್ಧೆಯಲ್ಲಿ ಇಂಚರ ಹಾಗೂ ಮಾನ್ಯಶ್ರೀ ಮೊದಲ ಬಹುಮಾನ, ಮೋನಿಕಾ ದ್ವಿತೀಯ ಹಾಗೂ ಭಾಗ್ಯಮ್ಮ ತೃತೀಯ ಬಹುಮಾನ ಪಡೆದರು.

ಈ ಸಂದರ್ಭದಲ್ಲಿ ರಚ್ಚೆಕಟ್ಟೆ ವಿನಾಯಕ ಗೆಳೆಯರ ಬಳಗದ ಕಾಂತರಾಜು, ಬೈರೇಗೌಡ, ಮಂಜುನಾಥ್, ಕಾರ್ತಿಕ್, ಸತೀಶ್, ಮಧು ಕಿರಣ್, ಅರ್ಚಕ, ಚಂದ್ರಶೇಖರ್, ಬಳಗ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.

ಪೋಟೋ :– 14 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲೂಕಿನ ಚಿಕ್ಕಗಟ್ಟಿಗನಬ್ಬೆ ರಚ್ಚೆಕಟ್ಟೆ ವಿನಾಯಕ ಗೆಳೆಯರ ಬಳಗ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ವಿಜೇತರಿಗೆ ಗ್ರಾಪಂ ಸದಸ್ಯ ಮುನೇಗೌಡ ಬಹುಮಾನ ವಿತರಿಸಿದರು.

Share this article