-ಶ್ರೀಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಮೌನಯೋಗಿ ಸುಶೀಲ ಗೋಶಾಲೆಯ ದಿನದರ್ಶಿಕೆ ಬಿಡುಗಡೆ
ಕನ್ನಡಪ್ರಭ ವಾರ್ತೆ ಸುರಪುರ
ಪ್ರತಿದಿನ ಸೂರ್ಯೋದಯ ಒಂದು ನೂತನ ಸಂಕಲ್ಪದಿಂದ ಗೋ ಮಾತೆಯ ನಮಸ್ಕಾರದೊಂದಿಗೆ ಕೂಡಿರುವಂತಾದರೆ, ಆ ದಿನ ಅರ್ಥಪೂರ್ಣವಾಗಿ ಪೂರೈಸಿಕೊಳ್ಳಲು ಸಾಧ್ಯವಾಗುತ್ತದೆ. ಸಂಕಲ್ಪವಿಲ್ಲದ ದಿನ ನಮ್ಮ ಬದುಕಿನಿಂದ ಜಾರಿ ಹೋಗದಂತೆ ಜಾಗೃತಿ ವಹಿಸುವುದು ಅವಶ್ಯಕ ಎಂದು ಶ್ರೀಗಿರಿ ಸಂಸ್ಥಾನ ಮಠದ ಡಾ. ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ನುಡಿದರು.ಶ್ರೀಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಮೌನಯೋಗಿ ಸುಶೀಲ ಗೋಶಾಲೆಯ 2025ನೇ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಶ್ರೀಗಳು, ಪ್ರತಿದಿನ ಗೋ ಮಾತೆ ನಮಸ್ಕಾರದೊಂದಿಗೆ ಪ್ರಾರಂಭಿಸಿ ಎಂದರು.
ಶ್ರೀಗುರು ಪುಟ್ಟರಾಜನ ಕಲ್ಯಾಣ ಸೇವಾ ಸಮಿತಿಯ ಅಧ್ಯಕ್ಷ ಕ್ಷೀರಲಿಂಗಯ್ಯ ಹಿರೇಮಠ ಬೋನ್ಹಾಳ, ತ್ರಿಮೂರ್ತಿ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಪಾಣಿಬಾತೆ, ರವಿಚಂದ್ರನ ಕುಂಬಾರ, ಬಸವರಾಜ ಸಿದ್ರಾ, ಹನುಮಂತರಾಯ ಮಠದ ಭಕ್ತರು ಇದ್ದರು.
---------ಫೋಟೊ....ಸುರಪುರ ಸಮೀಪದ ಶ್ರೀಮರಡಿ ಮಲ್ಲಿಕಾರ್ಜುನ ದೇವಸ್ಥಾನದ ಮೌನಯೋಗಿ ಸುಶೀಲ ಗೋಶಾಲೆಯ 2025ನೇ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭ ಜರುಗಿತು.
3ವೈಡಿಆರ್21: