ಕೊಪ್ಪಳ: ಸಾವಯುವ ಕೃಷಿ ಪದ್ಧತಿ ಅಳವಡಿಸಿಕೊಂಡು ಅಧಿಕ ಲಾಭ ಪಡೆಯುವಂತೆ ಮತ್ತು ಹೈನುಗಾರಿಕೆ ಉದ್ಯಮದಿಂದ ಆರ್ಥಿಕ ಸ್ವಾವಲಂಬನೆ ಹೊಂದುವಂತೆ ಕೊಪ್ಪಳ ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ ಕೆ. ರೈತರಿಗೆ ಸಲಹೆ ನೀಡಿದರು.
ತೋಟಗಾರಿಕೆ, ಕೃಷಿ, ರೇಷ್ಮೆ, ಅರಣ್ಯ ಇಲಾಖೆಗಳಿಂದ ಸಿಗುವ ಸೌಲಭ್ಯಗಳನ್ನು ಪಡೆಯವುದರ ಜೊತೆಗೆ ಮಣ್ಣು, ನೀರು ಸಂರಕ್ಷಣೆ ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಂಡು ಅಧಿಕ ಫಲವತ್ತತೆ ಹೊಂದುವಂತೆ ಕರೆ ನೀಡಿದರು.
ಎಫ್‌ಇಎಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ವಾಸುದೇವಮೂರ್ತಿ ಮಾತನಾಡಿ, ಮಣ್ಣಿನಿಂದ ನಮಗೆ ಅನೇಕ ಲಾಭ ಇದೆ. ಸಸ್ಯ ಸಂಪತ್ತು, ಜಲಸಂಪತ್ತು ಮಾನವ ಸಂಪತ್ತು ಬಳಸಿ, ಉಳಿಸಿಕೊಂಡು ಹೋಗುವದು ಪ್ರತಿಯೊಬ್ಬ ನಾಗರಿಕನ ಗುರುತರ ಜವಾಬ್ದಾರಿಯಾಗಿದೆ. ಹಿಂದಿನ ಕಾಲದಲ್ಲಿ ಪ್ರತಿಯೊಂದು ಕುಟುಂಬದಲ್ಲಿ ಜಾನುವಾರು ಸಾಕುತ್ತಿದ್ದರು. ಜಾನುವಾರಗಳ ಸಗಣಿಯನ್ನು ಜಮೀನಿನ ಬೆಳೆಗಳಿಗೆ ಬಳಕೆ ಮಾಡುತ್ತಿದ್ದರು. ಇದರಿಂದ ರಾಸಾಯನಿಕ ಗೊಬ್ಬರ ಬಳಕೆಯ ಮೇಲೆ ಅವಲಂಬನೆ ಕಡಿಮೆ ಇರುತ್ತಿತ್ತು. ಆದರೀಗ, ಜಾನುವಾರಗಳ ಸಂಖ್ಯೆ ಕಡಿಮೆಯಾಗಿರುವುದರಿಂದ ನಾವು ರಾಸಾಯನಿಕ ಗೊಬ್ಬರದ ಮೇಲೆ ಅತಿಯಾಗಿ ಅವಲಂಬಿತರಾಗಿದ್ದೇವೆ. ಪ್ರತಿ ಮನೆ ಮುಂದೆ ಒಂದು ಮರ ನೆಡುವದು, ಜಾನುವಾರು ಸಾಕಾಣಿಕೆ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.ಪಂಚಾಯತ್ ಅಭಿವೃದ್ದಿ ಅಧಿಕಾರಿ ಪರಮೇಶ್ವರಯ್ಯ ತೆಳಗಡೆಮಠ ಪ್ರಾಸ್ತವಿಕವಾಗಿ ಮಾತನಾಡಿ, ರೈತ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೇ ಪ್ರತಿದಿನ ಕಾಯಕದಲ್ಲಿ ನಿರತರಾದಾಗ ಮಾತ್ರ ರೈತ ದಿನಾಚರಣೆಗೆ ಒಂದು ಅರ್ಥ ಬರುತ್ತದೆ ಎಂದರು.
ಸಹಾಯಕ ತೋಟಗಾರಿಕೆ ಅಧಿಕಾರಿ ವಿಜಯ ಮಹಾಂತೇಶ ಹೊಟ್ಟಿನ, ಪ್ರಾದೇಶಿಕ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಜಡಿಯಪ್ಪ ಮಾತನಾಡಿದರು. ಕಳೆದ ಹಲವು ವರ್ಷಗಳಿಂದ ಸಾವಯವ ಕೃಷಿ ಅಳವಡಿಸಿಕೊಂಡು ಬಂದಿರುವ ಯಲಮಗೇರಿ ಗ್ರಾಮದ ಸ ಮಂಜುನಾಥ ಸಂಗಟಿ ಅವರನ್ನು ಸತ್ಕರಿಸಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷೆ ಶಿವಮ್ಮ ಶೇಖರಪ್ಪ ನಾಯಕ್, ಕೃಷಿ ಅಧಿಕಾರಿ ಎಚ್.ಎ. ಲಮಾಣಿ, ಸಾಮಾಜಿಕ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಅಂದಪ್ಪ ಕುರಿ, ತಾಲೂಕು ಐಇಸಿ ಸಂಯೋಜಕ ದೇವರಾಜ ಪತ್ತಾರ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಮಣ್ಣ ಗೋಸಲದೊಡ್ಡಿ, ಮರಿಯಪ್ಪ ಪಿನ್ನಿ, ವೀರಭದ್ರಯ್ಯ ಕಲ್ಮಠ, ರೇವಣಸಿದ್ದಯ್ಯ ಹಿರೇಮಠ, ಶ್ರೀಶೈಲ, ದ್ಯಾಮಣ್ಣ ದೇಸಾಯಿ, ಕಾರ್ಯದರ್ಶಿ ಪೂರ್ಣೇಂದ್ರಸ್ವಾಮಿ, ಸಂಜಿವಿನಿ ಯೋಜನೆಯ ಮಹಿಳಾ ಸಂಘದ ಪ್ರತಿನಿಧಿ ಕವಿತಾ ಹಿರೇಮಠ, ಕರವಸೂಲಿಗಾರ ಕೊಟ್ರೇಶ್, ಕೃಷಿ ಸಖಿ ಶೋಭಾ ಉಪ್ಪಾರ, ಡಿಇಒ ಮೌನೇಶ್, ಗ್ರಾಮ ಕಾಯಕ ಮಿತ್ರ ಶ್ರೀದೇವಿ, ರೈತರು, ಸಂಜಿವಿನಿ ಒಕ್ಕೂಟದ ಮಹಿಳೆಯರು, ಪ್ರಗತಿ ಪರ ರೈತರು, ಗಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು