, ಪ್ರಸ್ತುತ ವರ್ಷ ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಅದರ ಸವಿನೆನಪಿನಲ್ಲಿ ಈ ವರ್ಷ ಅದ್ಧೂರಿಯಾಗಿ ಮುಂಡರಗಿ ಉತ್ಸವ ಆಚರಿಸೋಣ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಮುಂಡರಗಿ
ನಾಡು-ನುಡಿಗಾಗಿ ಸೇವೆ ಸಲ್ಲಿಸಿದವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮುಂಡರಗಿ ನಾಡ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು ಅವಶ್ಯವಾಗಿದ್ದು, ಪ್ರಸ್ತುತ ವರ್ಷ ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಅದರ ಸವಿನೆನಪಿನಲ್ಲಿ ಈ ವರ್ಷ ಅದ್ಧೂರಿಯಾಗಿ ಮುಂಡರಗಿ ಉತ್ಸವ ಆಚರಿಸೋಣ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ಸೋಮವಾರ ಬೆಳಗ್ಗೆ ಪಟ್ಟಣದ ಬೃಂದಾವಣ ವೃತ್ತದಲ್ಲಿ 14ನೇ ವರ್ಷದ ಮುಂಡರಗಿ ಉತ್ಸವ ಸಾಂಕೇತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಒಂದು ಬಾರಿ ಅದ್ಧೂರಿಯಾಗಿ ಮುಂಡರಗಿ ಉತ್ಸವ ಮಾಡಿದ್ದು, ಮತ್ತೆ ಮಾಡಿಲ್ಲ. ಆದ್ದರಿಂದ ಈ ವರ್ಷ ನಮ್ಮ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಅದರ ಅಂಗವಾಗಿ ಈ ಬಾರಿ ಎಲ್ಲರೂ ಸೇರಿ ಮುಂಡರಗಿ ಉತ್ಸವ ಆಚರಿಸಬೇಕು. ಇದರಿಂದ ಈ ನಾಡಿಗಾಗಿ ತ್ಯಾಗ, ಬದಲಿದಾನ ಮಾಡಿದವರನ್ನು ಶ್ರಮಿಸುವುದರ ಜತೆಗೆ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಅಧ್ಯಕ್ಷ ವಹಿಸಿದ್ದ ವೈ.ಎನ್. ಗೌಡರ ಮಾತನಾಡಿ, ಈ ಹಿಂದೆ ಶ್ರೀಗಳ ಆಶೀರ್ವಾದ ಹಾಗೂ ಪಟ್ಟಣದ ಅನೇಕರ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಮಾದರಿಯಾಗುವಂತೆ ಉತ್ಸವ ಮಾಡಿ ಯಶಸ್ವಿಯಾಗಿದ್ದೇವೆ. ನಂತರದಲ್ಲಿ ಅನೇಕ ಬಾರಿ ಅದ್ಧೂರಿ ಮುಂಡರಗಿ ಉತ್ಸವ ಮಾಡಬೇಕೆಂದಾಗಲೆಲ್ಲ ಒಂದಿಲ್ಲೊಂದು ವಿಘ್ನಗಳು ಬರುತ್ತಲೇ ಇವೆ. ಪ್ರಸ್ತುತ ವರ್ಷ ಲೋಕಸಭ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಯಿತು. ಆದರೆ ಮುಂಡರಗಿ ಪೂಜ್ಯರು ನುಡಿದಂತೆ ಪ್ರಸ್ತುತ ವರ್ಷ ಜ.ಅ.ವಿದ್ಯಾ ಸಮಿತಿ ಶತಮಾನೋತ್ಸವದ ಸವಿ ನೆನಪಿನಲ್ಲಿ ನವಂಬರ್ ತಿಂಗಳಿನಲ್ಲಿ ಅದ್ಧೂರಿ ಮುಂಡರಗಿ ಉತ್ಸವಕ್ಕೆ ನಾವು ಈಗಿನಿಂದಲೇ ಸನ್ನದ್ದರಾಗಿ ತಯಾರಿ ಮಾಡಿಕೊಳ್ಳುತ್ತೇವೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.