ಕೆಜಿಐಎಸ್ 2.0 ವ್ಯವಸ್ಥೆಯ ಬಳಕೆ, ಅನುಷ್ಠಾನ ಕುರಿತು ಕಾರ್ಯಾಗಾರ ಮೂಲಕ ವಿವಿಧ ಮಟ್ಟಗಳಲ್ಲಿ ಸಮನ್ವಯ ಬಲಪಡಿಸಿ, ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಕೆಎಸ್ ಆರ್ ಎಸ್ಎಸಿ, ಡಿಪಿಎಆರ್ ನಿರ್ದೇಶಕ ರಾಜೇಶ ಎನ್.ಎಲ್. ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕೆಜಿಐಎಸ್ 2.0 ವ್ಯವಸ್ಥೆಯ ಬಳಕೆ, ಅನುಷ್ಠಾನ ಕುರಿತು ಕಾರ್ಯಾಗಾರ ಮೂಲಕ ವಿವಿಧ ಮಟ್ಟಗಳಲ್ಲಿ ಸಮನ್ವಯ ಬಲಪಡಿಸಿ, ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವುದು ಮುಖ್ಯ ಉದ್ದೇಶವಾಗಿದೆ ಎಂದು ಕೆಎಸ್ ಆರ್ ಎಸ್ಎಸಿ, ಡಿಪಿಎಆರ್ ನಿರ್ದೇಶಕ ರಾಜೇಶ ಎನ್.ಎಲ್. ಹೇಳಿದರು.ನಗರದ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕೆಜಿಐಎಸ್ 2.0 ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ದೇಶಿಸಿ ಅವರು ಮಾತನಾಡಿದರು.
ಈ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳ ಸಮನ್ವಯತೆ ಮುಖ್ಯವಾಗಿದ್ದು, ಎಲ್ಲ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದು ಹೇಳಿದರು.ಇದು ಜಿಐಎಸ್ ಆಧಾರಿತ ನೈಜ-ಸಮಯದ ದತ್ತಾಂಶ, ಆಧುನಿಕ ವಿಶ್ಲೇಷಣೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಸಂಯೋಜಿಸುವ ಗುರಿಯೊಂದಿಗೆ ತ್ವರಿತವಾಗಿ ನಾಗರಿಕರು ಮತ್ತು ಇಲಾಖಾ-ಅಧಿಕಾರಿಗಳು, ಭೂಶಿಕ ಮಾಹಿತಿಯೊಂದಿಗೆ ವ್ಯವಹಾರ ನಡೆಸಲು ಸುಧಾರಿತ ಅನ್ವಯಿಕೆ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಿದೆ. ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿಗಳ ಸ್ಥಳೀಯ ಸಮಸ್ಯೆಗಳಿಗೆ ಜಿಐಎಸ್ ಮೂಲಕ ಒದಗಿಸಬಹುದಾದ ತಾಂತ್ರಿಕ ಪರಿಹಾರ ಅಳವಡಿಸಲು, ಜಿಲ್ಲಾಮಟ್ಟದ ಇಲಾಖೆಗಳಿಗೆ ಅವಶ್ಯವಿರುವ ಜಿಐಎಸ್ ತಂತ್ರಾಂಶ ಮತ್ತು ದತ್ತಾಂಶ ಅಭಿವೃದ್ಧಿಪಡಿಸುವ ಅಗತ್ಯವಿದೆ. ಸದ್ಯ ಒಟ್ಟು 251 ಆಪ್ಲಿಕೇಶನ್ ಇದ್ದು, ಅದರಲ್ಲಿ 101 ಆಪ್ಲಿಕೇಶನ್ ಚಾಲತಿಯಲ್ಲಿವೆ. ಅದರಲ್ಲಿ 41 ಆಪ್ಲಿಕೇಶನ್ ಮೊಬೈಲ್ ಬಳಕೆಗೆ ಮತ್ತು 61 ಆಪ್ಲಿಕೇಶನ್ ವೆಬ್ ಸೈಟ್ ಉಪಯೋಗ ಮಾಡಬಹುದು ಎಂದರು.
ಜಿಲ್ಲಾಧಿಕಾರಿ ಡಾ.ಆನಂದ.ಕೆ ಮಾತನಾಡಿ, ಕೆಜಿಐಎಸ್ 2.0 ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮಾಹಿತಿ ಅರಿತುಕೊಳ್ಳಬೇಕು. ಈ ಯೋಜನೆಯಿಂದ ಸುಗಮ ಕಾರ್ಯನಿರ್ವಹಣೆಗೆ ಸಹಕಾರಿಯಾಗಿದೆ. ಅನುಷ್ಠಾನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.ಜಿಪಂ ಕಾರ್ಯನಿರ್ಹಣಾಧಿಕಾರಿ ರಿಷಿ ಆನಂದ ಮಾತನಾಡಿ, ಕೆಜಿಐಎಸ್-2 ಸದ್ಭಳಕೆ ಮಾಡಿಕೊಳ್ಳಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದು ತಂತ್ರಜ್ಞಾನ ಯುಗವಾಗಿದೆ. ನಮ್ಮ ರಾಜ್ಯ ಮಾಹಿತಿ ತಂತ್ರಜ್ಞಾನಕ್ಕೆ ಹೆಸರುವಾಸಿ. ಕಾಲಕಾಲಕ್ಕೆ ಅಭಿವೃದ್ಧಿ ಪಡಿಸುವ ತಂತ್ರಜ್ಞಾನ ಮೈಗೂಡಿಸಿಕೊಳ್ಳುವ ಮೂಲಕ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ತ್ವರಿತಗತಿಯಲ್ಲಿ ತಲುಪಿಸಲು ಕಾರ್ಯನಿರ್ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ, ಚೆಕ್ ಡ್ಯಾಂ, ಗ್ರಾಪಂ ಮಟ್ಟದ ಆಸ್ತಿ ಮಾಹಿತಿ, ಅಂಗನವಾಡಿ ಕೇಂದ್ರ ನಾನಾ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಈ ಕಾರ್ಯಾಗಾರ ನಮ್ಮ ಜಿಲ್ಲೆಯಿಂದ ಆರಂಭವಾಗಿದ್ದು, ಸಾರ್ವಜನಿಕ ರ ಹಿತದೃಷ್ಟಿಯಿಂದ ಈ ತಂತ್ರಾಂಶ ಬಳಸಿಕೊಳ್ಳುವಂತೆ ಅವರು ಹೇಳಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಅವರು ಸ್ವಾಗತಿಸಿ, ವಂದಿಸಿದರು. ಕ್ರೀಡಾಧಿಕಾರಿ ರಾಜಶೇಖರ ದೈವಾಡಿ ನಿರೂಪಿಸಿದರು. ಸಂಬಂಧಿತ ಇಲಾಖೆಗಳ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಾಗೂ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.ಈ ತಂತ್ರಾಶ ಬಳಕೆಯಿಂದ ಶೀಘ್ರ, ಸುಲಲಿತ ಹಾಗೂ ತುರ್ತು ನಿರ್ಣಯ ಕೈಗೊಳ್ಳಲು ಅತ್ಯಂತ ಸಹಕಾರಿಯಾಗಿದೆ. ಇಂತಹ ಮಹತ್ವದ ಯೋಜನೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಅತ್ಯಂತ ಆಸ್ಥೆ ವಹಿಸಿ ಇಂತಹ ಮಹತ್ವಪೂರ್ಣ ಕಾರ್ಯ ಅನುಷ್ಠಾನಗೊಳ್ಳಲು ಮುತುವರ್ಜಿ ವಹಿಸಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಈ ತಂತ್ರಾಂಶದ ಬಳಕೆ ಮಾಡಿ, ಸಮಸ್ಯೆ ಸರಳವಾಗಿ ಪರಿಹರಿಸಿಕೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ನಡೆಯುವ ಈ ಶಿಬಿರದ ಸದುಪಯೋಗಪಡಿಸಿಕೊಳ್ಳಬೇಕು.
-ಡಾ.ರಾಜಕುಮಾರ ಕತ್ರಿ ನಿವೃತ್ತ ಐಎಎಸ್ ಅಧಿಕಾರಿ