ಕನ್ನಡಪ್ರಭ ವಾರ್ತೆ ಮುಗಳಖೋಡ ನಮ್ಮ ದೇಶದಲ್ಲಿ ಹುಟ್ಟಿ ಬೆಳೆದಿರುವ ಅಪ್ಪಟ ದೇಶಿಯ ಸೊಗಡಿನ ಕ್ರೀಡೆ ಕುಸ್ತಿ. ಪ್ರತಿಯೊಬ್ಬರು ದೇಶಿಯ ಕ್ರೀಡೆ ಕುಸ್ತಿಯನ್ನು ಉಳಿಸಿ ಬೆಳೆಸಬೇಕು. ಇಂದಿನ ಯುವಕರು ಮೊಬೈಲ್ ಹಾಗೂ ದುಶ್ಚಟಗಳ ಗೀಳನ್ನು ಬಿಟ್ಟು ಕುಸ್ತಿ, ಕಬಡ್ಡಿಗಳಂತಹ ಆಟವಾಡಿ ದೇಶಿಯ ಸೊಗಡನ್ನು ಬೆಳೆಸಬೇಕೆಂದು ಶ್ರೀಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಮುಗಳಖೋಡ

ನಮ್ಮ ದೇಶದಲ್ಲಿ ಹುಟ್ಟಿ ಬೆಳೆದಿರುವ ಅಪ್ಪಟ ದೇಶಿಯ ಸೊಗಡಿನ ಕ್ರೀಡೆ ಕುಸ್ತಿ. ಪ್ರತಿಯೊಬ್ಬರು ದೇಶಿಯ ಕ್ರೀಡೆ ಕುಸ್ತಿಯನ್ನು ಉಳಿಸಿ ಬೆಳೆಸಬೇಕು. ಇಂದಿನ ಯುವಕರು ಮೊಬೈಲ್ ಹಾಗೂ ದುಶ್ಚಟಗಳ ಗೀಳನ್ನು ಬಿಟ್ಟು ಕುಸ್ತಿ, ಕಬಡ್ಡಿಗಳಂತಹ ಆಟವಾಡಿ ದೇಶಿಯ ಸೊಗಡನ್ನು ಬೆಳೆಸಬೇಕೆಂದು ಶ್ರೀಮಠದ ಪೀಠಾಧಿಪತಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಶ್ರೀ ಸಿದ್ಧಲಿಂಗೇಶ್ವರ ಮಹಾರಾಜರ ಜಾತ್ರಾ ಮಹೋತ್ಸವದ ಪ್ರಯುಕ್ತ ಮಾ.27 ಶುಕ್ರವಾರ ನಡೆದ ಜಂಗಿ ನಿಕಾಲಿ ಕುಸ್ತಿ ಪಂದ್ಯಾವಳಿಗೆ ಚಾಲನೆ ನಿಡಿ ಆಶೀರ್ವಚನ ನೀಡಿದರು. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಉತ್ತರ ಪ್ರದೇಶ, ಹರಿಯಾಣ, ಜಾರ್ಖಂಡ್ ಹಾಗೂ ನೇಪಾಳ ಪೈಲ್ವಾನರು ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು. ಮನರಂಜನಾ ಕುಸ್ತಿಗೆ ಹೆಸರಾದ ನೇಪಾಳದ ಪೈಲ್ವಾನ ದೇವತಾಂಬಾ, ಹರಿಯಾಣದ ಅಮಿತ ಕುಮಾರ್ ಪೈಲ್ವಾನ್‌ ಜೊತೆ ಸೆಣಸಾಡಿ, ವಿಜಯಶಾಲಿಯಾದರು.

ಬಳಿಕ ಪ್ರಥಮ ದರ್ಜೆಯ ಕುಸ್ತಿಯಲ್ಲಿ ಮಹಾರಾಷ್ಟ್ರದ ಡಬಲ್ ಕೇಸರಿ ಖ್ಯಾತಿಯ ಶಿವರಾಜ ರಕ್ಷೆ ಪೈಲ್ವಾನ್ ಹರಿಯಾಣಾದ ನೇಹರುಕುಮಾರ ಗುಜ್ಜರ ಪೈಲ್ವಾನ್‌ ಜೊತೆಗೆ ಸೆನಸಾಡಿ ₹ 2.5 ಲಕ್ಷ ಬಹುಮಾನ ಪಡೆದುಕೊಂಡರು. ಈ ಪಂದ್ಯಾವಳಿಯಲ್ಲಿ ಒಟ್ಟು 45 ಜೊಡಿ ಕುಸ್ತಿಪಟುಗಳು ಭಾಗವಹಿಸಿ, ಸುಮಾರು ₹ 9 ಲಕ್ಷಕ್ಕೂ ಅಧಿಕ ಬಹುಮಾನ ಪಡೆಕೊಂಡರು.

ಪಂದ್ಯಾವಳಿಯಲ್ಲಿ ಮುತ್ತಪ್ಪ ಬಾಳೋಜಿ, ಪರಪ್ಪಗೌಡ ಖೇತಗೌಡರ, ಹಾಲಪ್ಪ ಶೇಗುಣಶಿ, ಭೀಮಶಿ ತಳವಾರ, ಹಾಲಪ್ಪ ಮೆಕ್ಕಳಕಿ, ಸಿದ್ಧರಾಮ ಅಳಗೋಡಿ, ವಿಠ್ಠಲ ಕಾಮಾಣಿ, ಮುಖ್ಯಶಿಕ್ಷಕ ಮಾರುತಿ ಕಳ್ಳಿಗುದ್ದಿ, ಶ್ರೀಶೈಲ ಅಂಗಡಿ, ಮಹಾದೇವ ಸಂಗಾನಟ್ಟಿ, ಮಲ್ಲಪ್ಪ ಹೊನ್ನೂರ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.

ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ರಾಜುಗೌಡ ನಾಯಕ, ಮಹಾಂತೇಶ ಯರಡೆತ್ತಿ, ಚೇತನ ಯಡವಣ್ಣವರ, ರಮೇಶ ಖೇತಗೌಡರ, ಗುರು ಮಠಪತಿ, ಅಣ್ಣಪ್ಪಗೌಡ ಪಾಟೀಲ, ರಾಯಗೌಡ ಖೇತಗೌಡರ, ಸಿದ್ದರಾಮ ಯರಡೆತ್ತಿ, ಗುತ್ತಿಗೆದಾರ ಲಕ್ಷ್ಮಣ ಗೋಕಾಕ, ಮಾಜಿ ಪೈಲ್ವಾನ್ ಮಾರುತಿ ಗೋಕಾಕ, ಕಾಮಾಣಿ, ಸತ್ಯಪ್ಪ ಮಂಟೂರ, ಭೀಮಪ್ಪ ಹಳಿಂಗಳಿ, ಈರಪ್ಪ ಗೋಕಾಕ, ಹನುಮಂತ ಬಾಬಣ್ಣವರ, ರಾವಸಾಬ ನಾಯಿಕ, ಗಂಗಪ್ಪ ಗೋಕಾಕ, ಶಿವಾನಂದ ಮೆಕ್ಕಳಕಿ, ಭೀಮಶಿ ಬನಶಂಕರಿ, ಕರೆಪ್ಪ ಮಂಟೂರ, ಗೋಪಾಲ ಯಡವಣ್ಣವರ, ಪಿಕೆಪಿಎಸ್ ಸಂಘದ ಅಧ್ಯಕ್ಷ ಶಿವಾನಂದ ಗೋಕಾಕ, ವಕೀಲ ಸೋಮು ಹೊರಟ್ಟಿ ಸೇರಿದಂತೆ ಸ್ಥಳೀಯ ಯುವಕರು, ಮುಖಂಡರು ಹಾಜರಿದ್ದರು.

ಹಾರೂಗೇರಿ ಠಾಣೆಯ ಸಿಪಿಐ ರತನಕುಮಾರ ಜೀರಗ್ಯಾಳ, ಪಿಎಸ್ಐ ಮಾಳಪ್ಪ ಪೂಜಾರಿ, ಕುಡಚಿ ಪಿಎಸ್ಐ ಪ್ರೀತಮ ನಾಯಿಕ ಹಾಗೂ ಸಿಬ್ಬಂದಿ ವರ್ಗ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಿದ್ದರು.