ದ್ರೋಹ ಮಾಡಿಲ್ಲವೆಂದು ಸಿದ್ದರಾಮಯ್ಯ ಹೇಳಲಿ: ಯತ್ನಾಳ

KannadaprabhaNewsNetwork |  
Published : Sep 16, 2026, 03:00 AM IST
ಯಾದಗಿರಿ ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ತಾಲೂಕು ಮತ್ತು ಜಿಲ್ಲಾ ಮಟ್ಟದ ಯುವಸಂಸತ್ ಸ್ಪರ್ಧೆ ಕಾರ್ಯಕ್ರಮವನ್ನು ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಿದ್ದರಾಮಯ್ಯರಿಗೆ ದ್ರೋಹ ಮಾಡಿಲ್ಲ ಎಂದು ಎಂ.ಬಿ. ಪಾಟೀಲ ಹೇಳಿದ್ದರೆ ಮುಗಿದು ಹೋಗುತ್ತಿತ್ತು, ಆತ್ಮಸಾಕ್ಷಿಗೂ ದ್ರೋಹ ಮಾಡಿಲ್ಲ ಅನ್ನೋದಾದರೆ ಅದನ್ನು ಮಾತ್ರ ಹೇಳಬೇಕು. ನಾನು ಹೇಳಿದ್ದು ಸತ್ಯವೋ, ಸುಳ್ಳೋ ಅದನ್ನು ಹೇಳಬೇಕಾಗಿರೋದು ಸಿದ್ದರಾಮಯ್ಯ. ಎಂ.ಬಿ. ಪಾಟೀಲ, ಜಮೀರ್‌ಅಹ್ಮದ್ ನನಗೆ ದ್ರೋಹ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಲಿ. ಅವರು ಹೇಳಿದ ಮೇಲೆ ನಾನು ನನ್ನ ಮಾತು ವಾಪಸ್ ಪಡೆಯುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಿದ್ದರಾಮಯ್ಯರಿಗೆ ದ್ರೋಹ ಮಾಡಿಲ್ಲ ಎಂದು ಎಂ.ಬಿ. ಪಾಟೀಲ ಹೇಳಿದ್ದರೆ ಮುಗಿದು ಹೋಗುತ್ತಿತ್ತು, ಆತ್ಮಸಾಕ್ಷಿಗೂ ದ್ರೋಹ ಮಾಡಿಲ್ಲ ಅನ್ನೋದಾದರೆ ಅದನ್ನು ಮಾತ್ರ ಹೇಳಬೇಕು. ನಾನು ಹೇಳಿದ್ದು ಸತ್ಯವೋ, ಸುಳ್ಳೋ ಅದನ್ನು ಹೇಳಬೇಕಾಗಿರೋದು ಸಿದ್ದರಾಮಯ್ಯ. ಎಂ.ಬಿ. ಪಾಟೀಲ, ಜಮೀರ್‌ಅಹ್ಮದ್ ನನಗೆ ದ್ರೋಹ ಮಾಡಿಲ್ಲ ಎಂದು ಸಿದ್ದರಾಮಯ್ಯ ಹೇಳಲಿ. ಅವರು ಹೇಳಿದ ಮೇಲೆ ನಾನು ನನ್ನ ಮಾತು ವಾಪಸ್ ಪಡೆಯುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಸಚಿವ ಎಂ.ಬಿ. ಪಾಟೀಲ ಸೇರಿ 36 ಜನರು ಸಿದ್ದರಾಮಯ್ಯ ವಿರುದ್ಧ ಸಹಿ ಮಾಡಿದ್ದರು ಎಂಬ ಯತ್ನಾಳ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ ತರಾಟೆಗೆ ತೆಗೆದುಕೊಂಡ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ, ಸಿದ್ದರಾಮಯ್ಯ ಪರಿಸ್ಥಿತಿ ಈಗ ಏನಾಗಿದೆ?, ಅವರೇಕೆ ಬಾಯಿ ಮುಚ್ಚಿಕೊಂಡು ಕೂತಿದ್ದಾರೆ?. ಅವರದ್ದೇನಾದರೂ ಹಿಡಿದುಕೊಂಡು ಕೂತಿದ್ದಾರಾ?, ಏನೋ ಇದೆ. ಸಿದ್ದರಾಮಯ್ಯ ಎಂಥಹ ಸ್ಟ್ರಾಂಗ್ ಲೀಡರ್‌, ಪ್ರಧಾನಿ ಮೋದಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದವರು ಎಂದರು.

ಸಿದ್ದರಾಮಯ್ಯ ತಮ್ಮ ಬೆನ್ನಿಗೆ ಇಂಥವರು ಚೂರಿ ಹಾಕಿದ್ದಾರೆ ಎಂದು ಹೇಳಲಿ, ನನ್ನ ಹೇಳಿಕೆಗೆ ಎಂ.ಬಿ.ಪಾಟೀಲ ಟೆನ್ಶನ್ ಮಾಡಿಕೊಳ್ಳೋದು ಬೇಡ. ಸಿದ್ದರಾಮಯ್ಯ ಬಾಯಲ್ಲಿ ನೀವು ದ್ರೋಹ ಮಾಡಿಲ್ಲ ಎಂದು ಹೇಳಿಸಿ ಬಿಡಿ. ಎಂ.ಬಿ.ಪಾಟೀಲ ಹತಾಶೆಯಲ್ಲಿದ್ದಾರೆ. ನಾಳೆ‌ ಸಿದ್ದರಾಮಯ್ಯರಿಗೆ ಮಾಡಿದ ದ್ರೋಹ ಸ್ಫೋಟವಾದರೆ, ಕ್ಷೇತ್ರದಲ್ಲಿ ಹೇಗೆ ಎಂದು ಭಯ ಶುರುವಾಗಿದೆ. ಆ ಭಯಕ್ಕೆ ಸಿದ್ದರಾಮಯ್ಯ ಮನೆಗೆ ಹೋಗಿ ಟ್ರಿಟ್ಮೆಂಟ್ ಮಾಡಿಕೊಂಡು ಬರಲಿ. ಭಯಕ್ಕೆ ಸಿದ್ದರಾಮಯ್ಯ ಒಪಿನಿಯನ್ ಪಡೆಯಲಿ ಎಂದು ಟಾಂಗ್ ಕೊಟ್ಟರು.

ರಾಜ್ಯದಲ್ಲಿ ಜೆಸಿಬಿ ಅಧಿಕಾರಕ್ಕೆ ಬರಲಿದೆ:

ಮುಂದೆ ಹೇಗೆ ಎಂಎಲ್‌ಎ ಆಗ್ತೀರಿ ನೋಡ್ತಿನಿ ಎಂದು ಧಮ್ಕಿ ಕೊಟ್ರೆ ನಡೆಯಲ್ಲ, ನನ್ನನ್ನು ಎಂ.ಬಿ. ಪಾಟೀಲ ಎಂಎಲ್‌ಎ ಮಾಡಿಲ್ಲ, ವಿಜಯಪುರ ನಗರದ ಜನತೆ ಮಾಡಿದ್ದಾರೆ. ಮುಂದಿನ ಸಲ ವಿಧಾನಸಭೆಯಲ್ಲಿ ನೀವು ಇರ್ತಿರೋ ನಾನು ಇರ್ತಿನೋ ನೋಡೋಣ. ನಾನು ವಿಧಾನಸಭೆ ಮುಂದಿನ ಕುರ್ಚಿಯಲ್ಲಿ ಕೂತಿರುತ್ತೇನೆ. ಆಗ ನೀವು ಲೆಟರ್‌ ಹಿಡಿದು ನನ್ನ ಮುಂದೆ ಬಂದು ನಿಲ್ಲೋ ಪರಿಸ್ಥಿತಿ ಬರುತ್ತೊ ಯಾರಿಗೆ ಗೊತ್ತು. ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ ನಿಮಗೆ ಗೊತ್ತಿರಬೇಕು, ನನಗಲ್ಲ. ನನಗೆ ಬಿಜಾಪುರದ ಜನ ಮಾತ್ರ ಗೊತ್ತು ಎಂದು ಹೇಳಿದರು.ಸಿದ್ದರಾಮಯ್ಯ ಹಾಲುಮತ ಸಮಾಜಕ್ಕೆ ಏನೂ ಮಾಡಲಿಲ್ಲ:

ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನು ಕೆಳಗಿಳಿಸಿದ ಬಳಿಕ ಹಾಲುಮತ ಹಾಗೂ ಅಲ್ಪಸಂಖ್ಯಾತರು ಪ್ರತಿಭಟನೆ ಮಾಡಿಲ್ಲ. ಸಿದ್ದರಾಮಯ್ಯ ಪರವಾಗಿ ಯಾರೊಬ್ಬರೂ ಮಾತನಾಡಲಿಲ್ಲ. ಹಾಲುಮತ ಸಮಾಜದವರು ಸಿದ್ದರಾಮಯ್ಯ ಪರವಾಗಿ ಹೋರಾಟ ಮಾಡಲಿಲ್ಲ. 2023ರ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ವಿವಾದಿತ ಮುಸ್ಲಿಂ ಧರ್ಮಗುರುಗಳ ಮನೆಗೆ ತೆರಳಿದ್ದರು. ಮುಸ್ಲಿಂ ಧರ್ಮಗುರುಗೆ ಜತೆ ಐಎಸ್ಐ ಸಂಪರ್ಕವಿದೆ ಎಂಬ ಅನುಮಾನವಿದೆ ಎಂದು ಗೊತ್ತಿದ್ದರೂ ಹೋದರು. ನಂತರ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಇಳಿಸೋವಾಗ ಇದೇ ಧರ್ಮಗುರು ಒಂದು ಹೇಳಿಕೆ ನೀಡಿಲ್ಲ. ಇದೇ ಜಮೀರ್‌ಅಹ್ಮದ್ ಖಾನ್‌ಗೆ ಸಚಿವ ಸ್ಥಾನ ನೀಡದೇ ಇದ್ದಾಗ ಪ್ರಶ್ನೆ ಮಾಡಿದರು. ಸಿದ್ದರಾಮಯ್ಯ ವಿಚಾರದಲ್ಲಿ ಏನೂ ಮಾಡಲಿಲ್ಲ. ಹಾಲುಮತ ಸಮಾಜದವರಿಗೂ ಸಿದ್ದರಾಮಯ್ಯ ಏನೂ ಮಾಡಲಿಲ್ಲ, ಅಲ್ಪಸಂಖ್ಯಾತರಿಗೆ ಎಲ್ಲಾ ಮಾಡಿದರು. ಇತರೆ ಸಮಾಜ ಹಾಗೂ ಹಾಲುಮತ ಸಮಾಜದವರಿಗೆ ಏನೂ ಮಾಡಲಿಲ್ಲ. ಸತೀಶ ಜಾರಕಿಹೊಳಿ, ಎಚ್.ಸಿ.ಮಹಾದೇವಪ್ಪರನ್ನು ನಿರ್ಲಕ್ಷ್ಯ ಮಾಡಿದರು. ಜಮೀರ್‌.... ಜಮೀರ್‌ ಎಂದು ಸಿದ್ದರಾಮಯ್ಯ ಹೋದರು, ಅಂತಿಮವಾಗಿ ಯಾರೂ ಸಿದ್ದರಾಮಯ್ಯ ಹಿಂದೆ ನಿಲ್ಲಲಿಲ್ಲ ಎಂದು ಯತ್ನಾಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಘಾಟನೆಗೆ ಸಜ್ಜಾದ ಇಂದಿರಾ ಕ್ಯಾಂಟೀನ್‌
ಕೋಟಿ ಖರ್ಚಿನ ಸೂಪರ್‌ ಮಾರ್ಕೆಟ್‌ ಪಾಳು!