ಕನ್ನಡಪ್ರಭ ವಾರ್ತೆ ಹಳಿಯಾಳ
ಇತ್ತೀಚೆಗೆ ತಾಲೂಕಿನ ತತ್ವಣಗಿ ಗ್ರಾಮಸ್ಥರು ಆಯೋಜಿಸಿದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಪಕಿ ವಿದ್ಯಾ ತಿಮ್ಮಣ್ಣ ನಾಯಕರ ಬೀಳ್ಕೂಡುಗೆ ಸಮಾರಂಭದಲ್ಲಿ ಮಾತನಾಡಿದರು.
ಗುಣಮಟ್ಟದ ಶಿಕ್ಷಣವನ್ನು ಬಯಸುವ ಸರ್ಕಾರ ಇನ್ನೊಂದೆಡೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರಿಗೆ ಅವಕಾಶ ಒದಗಿಸಬೇಕು. ಶಿಕ್ಷಣ ಇಲಾಖೆಯ ಸೇವೆ ಜೊತೆಯಲ್ಲಿ ನೀಡಲಾಗುತ್ತಿರುವ ಹೆಚ್ಚುವರಿ ಕೆಲಸಗಳ ಒತ್ತಡದಿಂದ ಸಮಸ್ತ ಶಿಕ್ಷಕ ವೃಂದವು ಬೇಸತ್ತು ಹೋಗಿದೆ. ಹೀಗಿರುವಾಗ ಕೇವಲ ಶಿಕ್ಷಣ ಬೋಧನೆ ನೀಡಲು ಅವಕಾಶ ಮಾಡಿಕೊಟ್ಟರೇ ಗುಣಮಟ್ಟದ ಶಿಕ್ಷಣ ಸಾಧ್ಯ ಎಂದರು.ಶಿಕ್ಷಕರ ಸಂಘದ ಪ್ರಮುಖ ಪ್ರಶಾಂತ ನಾಯಕ, ಬಿಆರ್‌ಸಿ ಕೇಂದ್ರದ ಸಮನ್ವಯಾಧಿಕಾರಿ ಮಹಾದೇವಿ ಚೌಗಲೆ ಹಾಗೂ ತಾಲೂಕು ದೈಹಿಕ ಪರಿವೀಕ್ಷಕರಾದ ಜ್ಯೋತಿ ಪ್ರಭಾ ಹಾಗೂ ಮಠಪತಿ, ಪ್ರಭಾರಿ ಮುಖ್ಯ ಶಿಕ್ಷಕಿ ಡೇಸಿ ಮಸ್ಕರೆನ್ಸ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋನು ದೊಡ್ಮಣಿ, ಗ್ರಾಮದ ಹಿರಿಯರಾದ ಬೇಗೂರ ಹಾಗೂ ಶಾಲೆಯ ಹಿರಿಯ ಶಿಕ್ಷಕ ಆರ್.ಸಿದ್ದಲಿಂಗಪ್ಪ, ಸಹನಾ ನಾಯಕ್ ಮಾತನಾಡಿದರು.
ಶಿಕ್ಷಕಿ ರಾಧಾ ಬೂದಪ್ಪನವರ, ಯುವ ಉದ್ಯಮಿ ವಿವೇಕ ನಾಯಕ, ತಾಲೂಕಿನೆಲ್ಲೆಡೆಯಿದ ಆಗಮಿಸಿದ ಶಿಕ್ಷಕ ವೃಂದದವರು ಹಾಗೂ ಅವರ ಕುಟುಂಬದವರು ಇದ್ದರು. ಶಿಕ್ಷಕಿ ನಂದಾ ನರಗುಂದ ಕಾರ್ಯಕ್ರಮ ನಿರ್ವಹಿಸಿದರು.