ಉತ್ತಮ ಆಡಳಿತ ನೀಡಲು ಅಧಿಕಾರಿಗಳ ಗಮನ ನೀಡಲಿ

KannadaprabhaNewsNetwork |  
Published : Jun 21, 2026, 02:30 AM IST
ಹಾನಗಲ್ ಪುರಸಭೆಯಲ್ಲಿ ನಡೆದ ಪೌರಾಡಳಿತ ದಿನಾಚರಣೆಯನ್ನು ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಮಸ್ಯೆ, ಸವಾಲುಗಳು ಹೆಚ್ಚಿವೆ. ಜನರ ನಿರೀಕ್ಷೆಗಳು ಏರುತ್ತಿವೆ. ಇಂಥ ಸಂದರ್ಭದಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಅಧಿಕಾರಿಗಳು ಗಮನ ನೀಡಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಹಾನಗಲ್ಲ: ಸಮಸ್ಯೆ, ಸವಾಲುಗಳು ಹೆಚ್ಚಿವೆ. ಜನರ ನಿರೀಕ್ಷೆಗಳು ಏರುತ್ತಿವೆ. ಇಂಥ ಸಂದರ್ಭದಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಉತ್ತಮ ಆಡಳಿತ ನೀಡುವಲ್ಲಿ ಅಧಿಕಾರಿಗಳು ಗಮನ ನೀಡಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಶನಿವಾರ ಇಲ್ಲಿನ ಪುರಸಭೆಯ ಸಭಾಭವನದಲ್ಲಿ ನಡೆದ ಪೌರಾಡಳಿತ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಧಿಕಾರ ಎನ್ನುವುದು ಹುದ್ದೆಯಲ್ಲ, ಸೇವೆಗೆ ಲಭಿಸಿರುವ ಅವಕಾಶ. ಜನರ ವಿಶ್ವಾಸವೇ ಆಡಳಿತದ ನಿಜವಾದ ಬಲ. ನಾಗರಿಕರ ಸಹಭಾಗಿತ್ವದಿಂದ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯವಾಗಲಿದೆ. ಪಾರದರ್ಶಕತೆ, ಪ್ರಾಮಾಣಿಕತೆ, ಉತ್ತರದಾಯಿತ್ವ, ಸಮಯೋಚಿತ ಸೇವೆ, ಜನಸ್ನೇಹಿ ಆಡಳಿತಕ್ಕೆ ಸ್ಪಂದಿಸುವಂತೆ ಕರೆ ನೀಡಿದ ಅವರು ಕುಡಿಯುವ ನೀರು ಪೂರೈಕೆ, ಬೀದಿದೀಪ ಅಳವಡಿಕೆ, ನಗರದ ನೈರ್ಮಲ್ಯಕ್ಕೆ ಅಚ್ಚುಕಟ್ಟು ಆರ್ಥಿಕ ನಿರ್ವಹಣೆಯ ಅಗತ್ಯವಿದೆ. ನಿಯಮಿತವಾಗಿ ತೆರಿಗೆ ಭರಿಸುವಂತೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು.

ಮುಖ್ಯಾಧಿಕಾರಿ ವೈ.ಕೆ. ಜಗದೀಶ ಮಾತನಾಡಿ, ನಾಗರಿಕ ಸ್ನೇಹಿ ಆಡಳಿತದ ದೃಷ್ಟಿಯಿಂದ ಉತ್ತಮ ಸೇವೆ ನೀಡಲು ಕಾಳಜಿ ವಹಿಸಲಾಗಿದೆ. ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಎಲ್ಲವೂ ಪುರಸಭೆಯಿಂದ ಮಾತ್ರ ಸಾಧ್ಯವಿಲ್ಲ. ಹಾಗಾಗಿ ಜನರ ಸಹಭಾಗಿತ್ವದ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ಹೇಳಿದ ಅವರು ಕಸ ವಿಲೇವಾರಿಗೆ ಮತ್ತೆ ೨ ಹೊಸ ಟ್ರ್ಯಾಕ್ಟರ್ ಖರೀದಿಸಲಾಗುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವೀರಪ್ಪ ಬೈಲವಾಳ, ಪುರಸಭೆ ಮಾಜಿ ಅಧ್ಯಕ್ಷರಾದ ಯಲ್ಲಪ್ಪ ಕಿತ್ತೂರ, ರಾಧಿಕಾ ದೇಶಪಾಂಡೆ, ನಾಗಪ್ಪ ಸವದತ್ತಿ, ಪರಶುರಾಮ ಖಂಡೂನವರ, ವೀಣಾ ಗುಡಿ, ಖುರ್ಷಿದ್‌ಅಹ್ಮದ್ ಹುಲ್ಲತ್ತಿ, ನಗರ ಕಾಂಗ್ರೆಸ್ ಅಧ್ಯಕ್ಷ ಶಕೀಲ್ ಬಾಳೂರ, ಬಿಇಒ ಆರ್.ವಿ.ಚಿನ್ನಿಕಟ್ಟಿ, ಮೇಕಾಜಿ ಕಲಾಲ, ಬಾಬಾಜಾನ ಕೊಂಡವಾಡೆ, ಗನಿ ಪಾಳಾ, ಶಂಶಿಯಾ ಬಾಳೂರ, ಗೌಸ್‌ಮೋದೀನ್ ತಾಂಡೂರ, ಸುರೇಶ ನಾಗಣ್ಣನವರ, ಮುಖ್ಯಾಧಿಕಾರಿ ವೈ.ಕೆ.ಜಗದೀಶ ಸೇರಿದಂತೆ ಇನ್ನಿತರರು ಇದ್ದರು. ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ ನಿರೂಪಿಸಿದರು. ಹಾನಗಲ್ ನಗರದ ಆನಿಕೆರೆಗೆ ಮಳಗಿ ಧರ್ಮಾ ಜಲಾಶಯದಿಂದ ಪೈಪ್‌ಲೈನ್ ಮೂಲಕ ನೀರು ತರುವ ಮಹತ್ವಾಕಾಂಕ್ಷೆಯ ಕಾಮಗಾರಿ ಶೇ. ೬೦ರಷ್ಟು ಪೂರ್ಣಗೊಂಡಿದೆ. ವಿವಿಧ ಬಡಾವಣೆಗಳಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಗಮನ ನೀಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಪಯೋಗ ಮಾಡದೆ ಪಾಳಬಿದ್ದ ಶೌಚಾಲಯಗಳು
ಭಟ್ಕಳ ಜಲದುರಂತದ ಸಂತ್ರಸ್ತ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ