ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಸುರಪುರ ವತಿಯಿಂದ ನಡೆದ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಗೌರವಕ್ಕೆ ಭಾಜನರಾದ ಭಾಲ್ಕಿ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದೇವರು ಅವರ ಅಭಿನಂದನೆ ಸಮಾರಂಭ, ಪುಸ್ತಕಗಳ ಬಿಡುಗಡೆ, ಯುವ ಸಾಧಕರಿಗೆ ಸಗರನಾಡು ಯುವಚೇತನ ಪ್ರಶಸ್ತಿ ಪ್ರಧಾನ ಸಮಾರಂಭ, ಚಿತ್ರ ಕಲೆ ಹಾಗೂ ವಿಶಿಷ್ಟ ಕಲಾಕೃತಿಗಳು ಹಾಗೂ ಪುಸ್ತಕಗಳ ಪ್ರದರ್ಶನ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಸರಕಾರ ಇಂದು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸ್ವಾಗತರ್ಹ. ಯುವಜನರು ಶರಣ ತತ್ವ, ವಚನ ಸಾಹಿತ್ಯ, ಬಸವ ಪರಂಪರೆ ಅಧ್ಯಯನ ಮಾಡಬೇಕು. ಅದರೊಂದಿಗೆ ಹೆಚ್ಚು ಹೆಚ್ಚಾಗಿ ಸಾಹಿತ್ಯ, ಸಂಸ್ಕೃತಿ, ಕಲೆ, ಪರಂಪರೆ ಇವುಗಳ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕಳೆದ ಹಲವು ದಶಕಗಳ ಬಸವತತ್ವ ಪ್ರಸಾರದ ಕಾರ್ಯದಲ್ಲಿ ತೊಡಗಿರುವ ಭಾಲ್ಕಿ ಹಿರೆಮಠದ ಕಾಯಕವನ್ನು ಗುರುತಿಸಿ ಹಂಪಿ ವಿಶ್ವವಿಧ್ಯಾಲಯ ನಾಡೋಜ ಗೌರವನೀಡಿ ಗೌರವಿಸಿದೆ. ಆ ಪ್ರಯುಕ್ತ ಯಾದಗಿರಿ ಜಿಲ್ಲೆಯ ಎಲ್ಲಾ ಆತ್ಮಿಯ ಬಳಗ ಪ್ರೀತಿ ವಿಶ್ವಾಸ ತೋರಿ ಗೌರವಿಸುತ್ತಿರುವುದಕ್ಕೆ ಭಾಲ್ಕಿ ಹಿರೇಮಠ ಅಭಿನಂದಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಕಸಾಪ ಜಿಲ್ಲಾಧ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದಾಕಾಲ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದು, ಇದುವರೆಗೂ 38 ಪುಸ್ತಕಗಳನ್ನು ಪ್ರಕಟಿಸಿ ಬಿಡುಗಡೆಗೋಳಿಸಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ಕಲಾವಿಧರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರು, ಲೇಖಕರಾದ ಡಾ. ಅಶೋಕ ಮಟ್ಟಿ, ಡಾ. ಉಮಾದೇವಿ ಮಟ್ಟಿ ಪಾಲ್ಗೊಂಡಿದ್ದರು. ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಗುರುಪ್ರಸಾದ ವೈಧ್ಯ ನಿರೂಪಿಸಿದರು. ದಾವಲಸಾಬ ಅತ್ತಾರ ಪ್ರಾರ್ಥಿಸಿದರು. ಬಸವರಾಜ ಮೋಟ್ನಳ್ಳಿ ಸ್ವಾಗತಿಸಿದರು. ಶ್ರೀಕಾಂತ ರತ್ತಳ ವಂದಿಸಿದರು. ಪ್ರಮುಖರಾದ ಡಾ. ಸುಭಾಶ್ಚಂದ್ರ ಕೌಲಗಿ, ಡಾ. ಭೀಮರಾಯ ಲಿಂಗೇರಿ, ಅಯ್ಯಣ್ಣ ಹುಂಡೇಕಾರ, ಬಸವಂತರಾಯಗೌಡ ಪಾಟೀಲ್, ನಾಗೇಂದ್ರ ಜಾಜಿ, ಚನ್ನಪ್ಪ ಠಾಣಗುಂದಿ, ನಬಿಲಾಲ ಮಖಾಂದಾರ, ಶಿವಶರಣಪ್ಪ ಹೆಡಿಗಿನಾಳ, ದೇವರಾಜ ವರಕನಳ್ಳಿ, ಅಂಬ್ರೇಶ ಹಸಮಕಲ್, ಮಲ್ಲು ಬಾದ್ಯಾಪುರ, ಶಿವು ಬಳಿಚಕ್ರ ಸೇರಿದಂತೆ ಇತರರಿದ್ದರು.