ವಿದ್ಯಾರ್ಥಿಗಳು ಸಮಾಜಮುಖಿಯಾಗಲಿ: ಡಾ. ಗಜಾನನ ಭಟ್

KannadaprabhaNewsNetwork |  
Published : Jul 05, 2026, 02:30 AM IST
ಖ್ಯಾತ ಮೂತ್ರಾಂಗ ತಜ್ಞ ವೈದ್ಯ ಡಾ.ಗಜಾನನ ಭಟ್  ಅವರು ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಎಸ್.ಡಿ.ಎಂ.ಪದವಿ ಕಾಲೇಜಿನ ಆರ್.ಎಸ್.ಹೆಗಡೆ ಸಭಾಭವನದಲ್ಲಿ ನಡೆದ ವೈದ್ಯರ ದಿನಾಚರಣೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಜಗತ್ತಿನಲ್ಲಿ ಭಾರತೀಯರನ್ನು ನೋಡುವ ರೀತಿ ಬದಲಾಗಿದೆ. ಜನ‌ಜಾಸ್ತಿ ಇದ್ದಲ್ಲಿ ರೋಗ ಹೆಚ್ಚು. ಭಾರತದಲ್ಲಿ ಜನಸಂಖ್ಯೆ ಜಾಸ್ತಿ ಇದೆ.

ಹೊನ್ನಾವರ ಎಸ್‌ಡಿಎಂ ಪದವಿ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ

ಕನ್ನಡಪ್ರಭ ವಾರ್ತೆ ಹೊನ್ನಾವರ

ವಿದ್ಯಾರ್ಥಿಗಳು ಸಮಾಜಮುಖಿಗಳಾಗಬೇಕು ಎಂದು ಮೂತ್ರಾಂಗ ತಜ್ಞ ವೈದ್ಯ ಡಾ. ಗಜಾನನ ಭಟ್ ಹೇಳಿದರು.

ಇಲ್ಲಿಯ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜಿನ ಆರ್.ಎಸ್. ಹೆಗಡೆ ಸಭಾಭವನದಲ್ಲಿ ನಡೆದ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜಗತ್ತಿನಲ್ಲಿ ಭಾರತೀಯರನ್ನು ನೋಡುವ ರೀತಿ ಬದಲಾಗಿದೆ. ಜನ‌ಜಾಸ್ತಿ ಇದ್ದಲ್ಲಿ ರೋಗ ಹೆಚ್ಚು. ಭಾರತದಲ್ಲಿ ಜನಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಇಲ್ಲಿ ರೋಗವು ಹೆಚ್ಚಿದೆ. ಆದರೆ ನಮ್ಮಲ್ಲಿ ಬಂದಿರುವ ರೋಗದ ಚಿಕಿತ್ಸೆಯ ಕುರಿತು ಮಾನದಂಡವನ್ನು ಹಾಕುವುದು ಪಾಶ್ಚಿಮಾತ್ಯರಾಗಿದ್ದಾರೆ ಎಂದು ಹೇಳಿದರು.

ಕಲಿತ ಜಾಗ, ಶಿಕ್ಷಕರನ್ನು ಮರೆಯಬೇಡಿ. ಯಾವುದೂ ಅಸಾಧ್ಯವಲ್ಲ. ನಮ್ಮ ಚಿಂತನೆಗಳು ಬದಲಾದರೆ ಜನರು ನೋಡುವ ರೀತಿ ಬದಲಾಗುತ್ತದೆ. ಯಾರೂ ನಡೆಯದ ಹಾದಿಯಲ್ಲಿ ನಡೆಯಲು ಪ್ರಯತ್ನಿಸಿ. ನೈಪುಣ್ಯ ಬೆಳೆಸಿಕೊಳ್ಳಿ. ಜೀವನದಲ್ಲಿ ತೊಂದರೆಗಳು ಬರುತ್ತದೆ, ಅದು ಸಾಮಾನ್ಯ. ಹೀಗಿದ್ದೂ ಗುರಿಯ ಕಡೆ ಗಮನ ಕೊಡಿ. ಕಾಲ ಯಾರಿಗೂ ಕಾಯುವುದಿಲ್ಲ. ಜೀವನ ಬಹಳ ದೊಡ್ಡದಿದೆ. ಚಿಂತನೆ ಚಿತ್ತ, ಲಕ್ಷ್ಯ ಒಂದೇ ಕಡೆ‌ ಇರಲಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ಪ್ರತಿಯೊಬ್ಬರೂ ವೈದ್ಯರ ಕಾರಣದಿಂದ ಬದುಕಿದ್ದೇವೆ. ಯಾರೂ ಔಷಧಿ ಇಲ್ಲದೆ ಬೆಳೆದಿಲ್ಲ. ವೈದ್ಯರ ಕೆಲಸ ಎನ್ನುವುದು ಥ್ಯಾಂಕ್‌ಲೆಸ್‌ ಜಾಬ್ ಎನ್ನುವಂತಾಗಿದೆ. ವೈದ್ಯರ ಮೇಲೆ ನಾವೆಲ್ಲರೂ ಗೌರವ ಇಟ್ಟುಕೊಳ್ಳಬೇಕು ಎಂದರು.

ಎಂ.ಪಿ.ಇ. ಸೊಸೈಟಿ ಪಿಆರ್‌ಒ ಡಾ. ಡಿ.ಎಲ್. ಹೆಬ್ಬಾರ್ ಅಭಿನಂದನಾ ನುಡಿಗಳನ್ನಾಡಿದರು. ಎಂ.ಪಿ.ಇ. ಸೊಸೈಟಿಯ ವತಿಯಿಂದ ಡಾ. ಗಜಾನನ ಭಟ್ ಅವರನ್ನು ಗೌರವಿಸಲಾಯಿತು. ಪದವಿ ಕಾಲೇಜು, ಕಾಲೇಜು ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ್ ಕಾಮತ್ ಉಪಸ್ಥಿತರಿದ್ದರು.

ಪದವಿಪೂರ್ವ ಕಾಲೇಜಿನ‌ ವಿದ್ಯಾರ್ಥಿನಿ ಪ್ರತೀಕ್ಷಾ ಹಾಗೂ ಶ್ರಾವಣಿ ಪ್ರಾರ್ಥಿಸಿದರು. ಪ.ಪೂ. ಕಾಲೇಜು ಪ್ರಾಚಾರ್ಯ ಡಾ. ರಾಜು ಮಾಳಗಿಮನಿ ಸ್ವಾಗತಿಸಿದರು. ಡಾ. ಎಂ.ಪಿ. ಕರ್ಕಿ ಇನ್‌ಸ್ಟಿಟ್ಯೂಟ್‌ ಆಫ್ ಎಕ್ಸಲೆನ್ಸ್ ಮತ್ತು ರಿಸರ್ಚ್‌ ನಿರ್ದೇಶಕ ಡಾ. ಶಿವರಾಮ್ ಶಾಸ್ತ್ರಿ ವಂದಿಸಿದರು. ಉಪನ್ಯಾಸಕ ವಿನಾಯಕ ಭಟ್ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಕ್ತದಾನ ಶಿಬಿರ, ಶಿಕ್ಷಣ ಧನ ಸಹಾಯ ವಿತರಣೆ
ವಿಶ್ವಾಸಾರ್ಹ ಮುದ್ರಣ ಮಾಧ್ಯಮ: ಅಮ್ಮಾಟಂಡ ಎ. ಜೋಯಪ್ಪ