30ರಂದು ವೃತ್ತಿಪರ ಸಾಮಾಜಿಕ ಕಾರ್ಯಕರ್ತರ ಪತ್ರ ಚಳವಳಿ

KannadaprabhaNewsNetwork |  
Published : Sep 24, 2024, 02:01 AM IST
ಕ್ಯಾಪ್ಷನಃ23ಕೆಡಿವಿಜಿ31ಃದಾವಣಗೆರೆಯಲ್ಲಿ ಕರ್ನಾಟಕ ರಾಜ್ಯ ಪ್ರೊಫೇಷನಲ್ ಸೊಶಿಯಲ್ ವರ್ಕರ್ಸ್‌  ವೆಲ್‌ಫೇರ್ ಅಸೊಸಿಯೇಷನ್ ರಾಜ್ಯ ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ವೃತ್ತಿಪರ ಸಾಮಾಜಿಕ ಕಾರ್ಯಕರ್ತರಾದ ನಾವು ಮಾಸ್ಟರ್ ಆಫ್ ಸೋಶಿಯಲ್ ವರ್ಕರ್ (ಎಂಎಸ್‌ಡಬ್ಲ್ಯೂ) ಸ್ನಾತಕೋತ್ತರ ಪದವಿಯನ್ನು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ 2 ವರ್ಷಗಳವರೆಗೂ ಅಭ್ಯಾಸ ಮಾಡಿ ಪಡೆದಿರುತ್ತೇವೆ. ಜೊತೆಗೆ ಕಾರ್ಯಕ್ಷೇತ್ರದಲ್ಲೂ ಹೋಗಿ ಅಭ್ಯಾಸ ಮಾಡಿರುತ್ತೇವೆ. ಆದರೆ, ಇದುವರೆಗೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಕರ್ನಾಟಕ ರಾಜ್ಯ ವೃತ್ತಿಪರ ಸಾಮಾಜಿಕ ಕಾರ್ಯಕರ್ತರ ಸಂಘ ರಾಜ್ಯಾಧ್ಯಕ್ಷ ಡಾ. ಎಂ.ಸಂತೋಷಕುಮಾರ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಸರ್ಕಾರ ಸೇವೆ ಕಾಯಂಗೊಳಿಸಿ, ವೇತನ ಹೆಚ್ಚಿಸಬೇಕು: ಸಭೆಯಲ್ಲಿ ರಾಜ್ಯಾಧ್ಯಕ್ಷ - - -ಕನ್ನಡಪ್ರಭ ವಾರ್ತೆ, ದಾವಣಗೆರೆ

ವೃತ್ತಿಪರ ಸಾಮಾಜಿಕ ಕಾರ್ಯಕರ್ತರಾದ ನಾವು ಮಾಸ್ಟರ್ ಆಫ್ ಸೋಶಿಯಲ್ ವರ್ಕರ್ (ಎಂಎಸ್‌ಡಬ್ಲ್ಯೂ) ಸ್ನಾತಕೋತ್ತರ ಪದವಿಯನ್ನು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ 2 ವರ್ಷಗಳವರೆಗೂ ಅಭ್ಯಾಸ ಮಾಡಿ ಪಡೆದಿರುತ್ತೇವೆ. ಜೊತೆಗೆ ಕಾರ್ಯಕ್ಷೇತ್ರದಲ್ಲೂ ಹೋಗಿ ಅಭ್ಯಾಸ ಮಾಡಿರುತ್ತೇವೆ. ಆದರೆ, ಇದುವರೆಗೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಕರ್ನಾಟಕ ರಾಜ್ಯ ವೃತ್ತಿಪರ ಸಾಮಾಜಿಕ ಕಾರ್ಯಕರ್ತರ ಸಂಘ ರಾಜ್ಯಾಧ್ಯಕ್ಷ ಡಾ. ಎಂ.ಸಂತೋಷಕುಮಾರ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಸೋಮವಾರ ರಾಜ್ಯ ಪ್ರೊಫೆಶನಲ್ ಸೋಶಿಯಲ್ ವರ್ಕರ್ಸ್‌ ವೆಲ್‌ಫೇರ್ ಅಸೋಸಿಯೇಷನ್ ರಾಜ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಸರ್ಕಾರ ಸ್ಪಂದಿಸದ ಹಿನ್ನೆಲೆ ಸೆ.30ರಂದು ರಾಜ್ಯ ಸಮಿತಿಯಿಂದ ಸುಮಾರು 10 ಸಾವಿರಕ್ಕೂ ಹೆಚ್ಚು ವೃತ್ತಿಪರ ಸಾಮಾಜಿಕ ಕಾರ್ಯಕರ್ತರಿಂದ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ಕಾರದ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಪಂಚಾಯತ್‌ರಾಜ್ ಇನ್ನಿತರ ಇಲಾಖೆಗಳು ಸೇರಿದಂತೆ ನಾವುಗಳು ಮಾನಸಿಕ ಆರೋಗ್ಯ ಕಾರ್ಯಕ್ರಮದಲ್ಲಿ ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್, ತಂಬಾಕು ನಿಯಂತ್ರಣ ಕಾರ್ಯಕ್ರಮದಲ್ಲಿ ಸೋಶಿಯಲ್ ವರ್ಕರ್ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. 15 ವರ್ಷಗಳಿಂದ ಗುತ್ತಿಗೆ, ಹೊರಗುತ್ತಿಗೆ, ಗೌರವಧನದ ಆಧಾರದ ಮೇಲೆ ಯಾವುದೇ ರಕ್ಷಣೆ ಇಲ್ಲದೇ ದುಡಿಯುತ್ತಿದ್ದೇವೆ ಎಂದು ತಿಳಿಸಿದರು.

ಈ ಕೂಡಲೇ ಸರ್ಕಾರ ಎಚ್ಚೆತ್ತು ನಮ್ಮ ಮನವಿಗೆ ಸ್ಪಂದಿಸಬೇಕು. ಎಲ್ಲ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರ ಸಾಮಾಜಿಕ ಕಾರ್ಯಕರ್ತರುಗಳನ್ನು ಗುತ್ತಿಗೆ, ಹೊರಗುತ್ತಿಗೆ, ಗೌರವಧನದಿಂದ ಮುಕ್ತಗೊಳಿಸಬೆಕು. ಶೀಘ್ರ ಎಲ್ಲರ ಸೇವೆಯನ್ನು ಕಾಯಂಗೊಳಿಸಿ, ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ಅಸೊಸಿಯೇಶನ್ ರಾಜ್ಯ ಉಪಾಧ್ಯಕ್ಷ ಮಹಾಲಿಂಗಪ್ಪ, ರಾಜ್ಯ ಕಾರ್ಯದರ್ಶಿ ಸಿ.ಚಂದನ್, ರಾಜ್ಯ ನಿರ್ದೇಶಕರಾದ ಪ್ರತಿಭಾ, ಶ್ರುತಿ ರೆಡ್ಡಿ, ಅಂಜಿನಪ್ಪ, ಶ್ವೇತಾ, ರಕ್ಷಿತ್‌ ಗೌಡ, ಪಿ.ಮಧು ಇನ್ನಿತರರು ಹಾಜರಿದ್ದರು.

- - - -23ಕೆಡಿವಿಜಿ31ಃ:

ದಾವಣಗೆರೆಯಲ್ಲಿ ರಾಜ್ಯ ಪ್ರೊಫೇಷನಲ್ ಸೋಶಿಯಲ್ ವರ್ಕರ್ಸ್‌ ವೆಲ್‌ಫೇರ್ ಅಸೋಸಿಯೇಶನ್ ರಾಜ್ಯ ಸಮಿತಿ ಸಭೆ ನಡೆಯಿತು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ