ಗಣೇಶಪುರ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

KannadaprabhaNewsNetwork |  
Published : Jul 05, 2026, 02:45 AM IST
ಲಯನ್ಸ್ ಸಂಸ್ತೆಯಿಂದ  ಗಣೇಶಪುರ ಪ್ರಯಾಣಿಕರ ತಂದುದಾನ ಲೋಕಾರ್ಪಣೆ | Kannada Prabha

ಸಾರಾಂಶ

ಸಮಾಜಮುಖಿ ಕೆಲಸಕ್ಕೆ ಜನರ ಮನ್ನಣೆ ದೊರೆಯುತ್ತದೆ ಎಂದು ಲಯನ್ಸ್ ಸಂಸ್ಥೆಯ ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಹೇಳಿದರು.ಲಯನ್ಸ್ ಪ್ರಾಂತ್ಯ 9 ರ ಪ್ರಾಂತ್ಯ ಸಮ್ಮೇಳನ ದೀಕ್ಷಾದ ಸವಿನೆನಪಿಗಾಗಿ ಲಯನ್ಸ್ ಸಂಸ್ಥೆ ವತಿಯಿಂದ ಗಣೇಶಪುರ ಕೈಕಂಬ ವೃತ್ತದ ಬಳಿ ನೂತನವಾಗಿ ನಿರ್ಮಾಣಗೊಂಡ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆಗೈದು ಅವರು ಮಾತನಾಡಿದರು.

ಮೂಲ್ಕಿ: ಸಮಾಜಮುಖಿ ಕೆಲಸಕ್ಕೆ ಜನರ ಮನ್ನಣೆ ದೊರೆಯುತ್ತದೆ ಎಂದು ಲಯನ್ಸ್ ಸಂಸ್ಥೆಯ ನಿಕಟಪೂರ್ವ ಜಿಲ್ಲಾ ರಾಜ್ಯಪಾಲ ಕುಡ್ಪಿ ಅರವಿಂದ ಶೆಣೈ ಹೇಳಿದರು.ಲಯನ್ಸ್ ಪ್ರಾಂತ್ಯ 9 ರ ಪ್ರಾಂತ್ಯ ಸಮ್ಮೇಳನ ದೀಕ್ಷಾದ ಸವಿನೆನಪಿಗಾಗಿ ಲಯನ್ಸ್ ಸಂಸ್ಥೆ ವತಿಯಿಂದ ಗಣೇಶಪುರ ಕೈಕಂಬ ವೃತ್ತದ ಬಳಿ ನೂತನವಾಗಿ ನಿರ್ಮಾಣಗೊಂಡ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆಗೈದು ಅವರು ಮಾತನಾಡಿದರು.

ಲಯನ್ಸ್ ಪ್ರಾಂತ್ಯ 9 ರ ನಿಕಟಪೂರ್ವ ಪ್ರಾಂತ್ಯ ಅಧ್ಯಕ್ಷ ಮಾಧವ ಎಸ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು ಪ್ರಾಂತ್ಯದ ನಿಕಟಪೂರ್ವ ಪ್ರಥಮ ಮಹಿಳೆ ಮೀರಾವಾಣಿ ಎಂ. ಶೆಟ್ಟಿ, ಲಯನ್ಸ್ ಜಿಲ್ಲಾ ಸಂಪುಟದ ನಿಕಟಪೂರ್ವ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ದೀಕ್ಷಾ ಪ್ರಾಂತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ದೀಪಕ್ ಪೆರ್ಮುದೆ, ಕಾರ್ಯದರ್ಶಿ ರಮೇಶ್ ರಾಥೋಡ್, ಜೊತೆ ಕಾರ್ಯದರ್ಶಿ ಯತಿರಾಜ್ ಸಾಲ್ಯಾನ್, ಕಾಟಿಪಳ್ಳ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ. ದಯಕರ, ಸುರತ್ಕಲ್ ಲಯನ್ಸ್ ಕ್ಲಬ್ ಅಧ್ಯಕ್ಷ ಜಯೇಶ್ ಗೋವಿಂದ, ಗಣೇಶಪುರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಮನಪಾ ಮಾಜಿ ಕಾರ್ಪರೇಟ್ ಲೋಕೇಶ್ ಬೊಳ್ಳಾಜೆ, ಕೋರ್ದಬ್ಬು ದೇವಸ್ಥಾನದ ಅಧ್ಯಕ್ಷ ದಿನೇಶ್ ಶೆಟ್ಟಿ, ನಿತ್ಯಾನಂದ ಭಜನಾ ಮಂಡಳಿಯ ಶಶಿಧರ್ ಶೆಟ್ಟಿ, ಬಾಳ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪದ್ಮನಾಭ ಸಾಲ್ಯಾನ್, ಕಾಟಿಪಳ್ಳ ಲಯನ್ಸ್ ಕ್ಲಬ್ ಕಾರ್ಯದರ್ಶಿ ಗಣೇಶ್ ಶೆಟ್ಟಿ, ಕೋಶಾಧಿಕಾರಿ ವಿನೋದ್ ಕುಮಾರ್, ಮಾಜಿ ಅಧ್ಯಕ್ಷ ಶಿವಪ್ರಸಾದ್ ಬಾಳ, ವಿಶ್ವನಾಥ್ ಭಂಡಾರಿ, ಸದಸ್ಯರು ಮತ್ತಿತರರು ಉಪಸ್ತಿತರಿದ್ದರು. ಕಾಟಿಪಳ್ಳ ಕೃಷ್ಣಾಪುರ ಲಯನ್ಸ್ ಕ್ಲಬ್ ನ ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಕುರುವನ ಸ್ವಾಗತಿಸಿದರು, ಕೋಶಾಧಿಕಾರಿ ವಿನೋದ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಮಾಜಿ ಅಧ್ಯಕ್ಷ ಉಮಾನಾಥ ಅಮೀನ್ ವಂದಿಸಿದರು. ಈ ಸಂದರ್ಭದಲ್ಲಿ ಕಾಟಿಪಳ್ಳ ಲಯನ್ಸ್ ಕ್ಲಬ್ ವತಿಯಿಂದ ಕಾಟಿಪಳ್ಳ 3 ನೇ ವಿಭಾಗದ ದ.ಕ. ಜಿ.ಪ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 35 ಸಾವಿರ ವೆಚ್ಚದ ಧ್ವನಿವರ್ಧಕ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಳಿಕೋಟೆ ಪುರಸಭೆಯಿಂದ ಭೀಮನಬಾವಿ ಸ್ವಚ್ಛತಾ ಕಾರ್ಯ
ಪ್ರಸ್ತುತ ದಿನದಲ್ಲಿ ಸಂಸ್ಕಾರಯುತ ಶಿಕ್ಷಣ ಅತ್ಯವಶ್ಯಕ