)
ಕನ್ನಡಪ್ರಭ ವಾರ್ತೆ ಯಾದಗಿರಿ
ಈ ಸಂದರ್ಭ 63 ಹಸುಗಳಿಗೆ ಜಂತುನಾಶಕ ಔಷಧಿ, 136 ಎತ್ತುಗಳಿಗೆ ಚಿಕಿತ್ಸೆ, 23 ಹಸುಗಳಿಗೆ ಗರ್ಭಧಾರಣಾ ಪರೀಕ್ಷೆ ಹಾಗೂ 138 ಕುರಿ ಮತ್ತು ಆಡುಗಳಿಗೆ ಚಿಕಿತ್ಸೆ ನೀಡಲಾಯಿತು. ಜತೆಗೆ, 200ಕ್ಕೂ ಹೆಚ್ಚು ಜಾನುವಾರುಗಳಿಗೆ ಮೇವು ತಿನ್ನುವ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಹಾಪುರ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ. ಅಣ್ಣಾರಾವ್ ಪಾಟೀಲ, ಜಾನುವಾರುಗಳಿಗೆ ಕಾಲಕಾಲಕ್ಕೆ ಅಗತ್ಯ ಲಸಿಕೆ ಹಾಗೂ ಜಂತುನಾಶಕ ಔಷಧಿಗಳನ್ನು ನೀಡುವುದು ಅತ್ಯಂತ ಮುಖ್ಯ. ಜಾನುವಾರುಗಳಿಗೆ ಪೌಷ್ಟಿಕ ಆಹಾರ, ಸರಿಯಾದ ಸಮಯಕ್ಕೆ ಮೇವು ಹಾಗೂ ಶುದ್ಧ ನೀರು ಒದಗಿಸುವ ಮೂಲಕ ಅವುಗಳ ಆರೋಗ್ಯ ಕಾಪಾಡಿಕೊಳ್ಳಬೇಕು. ಯಾವುದೇ ಕಾಯಿಲೆಯ ಲಕ್ಷಣಗಳು ಕಂಡುಬಂದ ಕೂಡಲೇ ಪಶುವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಶಹಾಪುರ ತಾಲೂಕು ಅಧ್ಯಕ್ಷ ಸಾಯಬಣ್ಣ ಎ. ಪುರ್ಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಜಾನುವಾರುಗಳು ರೈತರ ಜೀವನಾಡಿಗಳಾಗಿದ್ದು, ರೈತರ ಬದುಕಿನಲ್ಲಿ ಅವುಗಳ ಪಾತ್ರ ಅತ್ಯಂತ ಮಹತ್ವದ್ದು. ಎತ್ತು, ಹಸು, ಕರು, ಆಡು, ಕುರಿ ಸಹಿತ ಜಾನುವಾರುಗಳು ರೈತರ ಪಾಲಿನ ಅಮೂಲ್ಯ ಆಸ್ತಿಗಳು. ಆದ್ದರಿಂದ ಅವುಗಳ ಆರೋಗ್ಯದ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಕಾಲಕಾಲಕ್ಕೆ ಪಶುವೈದ್ಯರ ಸಂಪರ್ಕಿಸಿ ಆರೋಗ್ಯ ತಪಾಸಣೆ ಮಾಡಿಸುವುದು ಪ್ರತಿಯೊಬ್ಬ ರೈತನ ಜವಾಬ್ದಾರಿ. ಪಶುವೈದ್ಯಕೀಯ ಇಲಾಖೆಯಿಂದ ದೊರೆಯುವ ಸೇವೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ಪ್ರಸ್ತುತ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ಜಾನುವಾರುಗಳೇ ಅನೇಕ ರೈತ ಕುಟುಂಬಗಳಿಗೆ ಪ್ರಮುಖ ಆಸರೆಯಾಗಿವೆ. ಹೀಗಾಗಿ ಜಾನುವಾರುಗಳ ಆರೋಗ್ಯ ಮತ್ತು ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರೈತರಿಗೆ ಅಗತ್ಯವಿರುವ ಪಶುವೈದ್ಯಕೀಯ ಸೇವೆಗಳನ್ನು ತಲುಪಿಸುವಲ್ಲಿ ಇಲಾಖೆಯೊಂದಿಗೆ ಲಯನ್ಸ್ ಕ್ಲಬ್ ಸಹಕಾರ ಮುಂದುವರಿಸಲಿದೆ ಎಂದು ಸಾಯಬಣ್ಣ ಎ. ಪುರ್ಲೆ ತಿಳಿಸಿದರು.ಸಗರದ ಪಶುವೈದ್ಯಾಧಿಕಾರಿ ಡಾ. ಅಂಬ್ರೇಶ್ ಬಿರಾದಾರ, ಪಶುವೈದ್ಯಾಧಿಕಾರಿ ಡಾ. ರಾಜು ರಾಠೋಡ, ಹಿರಿಯ ಪಶುವೈದ್ಯಕೀಯ ಪರಿವೀಕ್ಷಕರಾದ ಶಂಕರ ಚವ್ಹಾಣ, ಮೋಸಿನ್ ಅನ್ಸಾರಿ, ರವಿಕುಮಾರ, ಸಹಾಯಕರಾದ ಗೋವಿಂದ, ಅಂಬರೀಷ, ಜಗದೀಶ ರಾಠೋಡ ಹಾಗೂ ಸಿದ್ದಣ್ಣ ಕುಡಲಗಿ ಸೇರಿದಂತೆ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದು ಜಾನುವಾರುಗಳಿಗೆ ಚಿಕಿತ್ಸೆ ಹಾಗೂ ಔಷಧೋಪಚಾರ ನೀಡಿದರು.