ಮಳೆಗಾಲದಲ್ಲೇ ಲೋಡ್ ಶೆಡ್ಡಿಂಗ್‌ ಶುರು

KannadaprabhaNewsNetwork |  
Published : Sep 12, 2026, 01:45 AM IST
ಸಾಂದರ್ಭಿಕ ಚಿತ್ರ | Kannada Prabha

ಸಾರಾಂಶ

ಮಳೆ ಬೀಳದೆ ಬರಗಾಲ ಎದುರಾಗಿದೆ.ಮಳೆ ಬೀಳದೆ ಅಂತರ್ಜಲ ಮಟ್ಟ ಕುಸಿದು ರೈತ ಹಾಗೂ ಜನ ಸಾಮಾನ್ಯರು ಮಳೆ ಗಾಲದಲ್ಲೇ ಕಂಗಾಲಾಗಿದ್ದಾರೆ.ಹೇಳಿ ಕೇಳಿ ಈದೀಗ ಮಳೆಗಾಲದ ಸಮಯದಲ್ಲಿದ್ದೇವೆ,ಇನ್ನೂ ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ಮಳೆಗಾಲದಲ್ಲೇ ವಿದ್ಯುತ್‌ ಲೋಡ್‌ ಶೆಡ್ಡಿಂಗ್ ಅನಿರೀಕ್ಷಿತವಾಗಿ ಜಾರಿಗೆ ಯಾರಿಗೂ ಗೊತ್ತಿಲ್ಲದಂತೆ ಬರ ಸಿಡಿಲಿನಂತೆ ಕಳೆದ ಗುರುವಾರ ಸಂಜೆಯಿಂದಲೇ ದಿಢೀರ್‌ ಬಡಿದು ರೈತರು ಹಾಗೂ ಜನರಿಗೆ ಆತಂಕ ಶುರುವಾಗಿದೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಮಳೆ ಬೀಳದೆ ಬರಗಾಲ ಎದುರಾಗಿದೆ.ಮಳೆ ಬೀಳದೆ ಅಂತರ್ಜಲ ಮಟ್ಟ ಕುಸಿದು ರೈತ ಹಾಗೂ ಜನ ಸಾಮಾನ್ಯರು ಮಳೆ ಗಾಲದಲ್ಲೇ ಕಂಗಾಲಾಗಿದ್ದಾರೆ.ಹೇಳಿ ಕೇಳಿ ಈದೀಗ ಮಳೆಗಾಲದ ಸಮಯದಲ್ಲಿದ್ದೇವೆ,ಇನ್ನೂ ಬೇಸಿಗೆ ಕಾಲ ಆರಂಭಕ್ಕೂ ಮುನ್ನವೇ ಮಳೆಗಾಲದಲ್ಲೇ ವಿದ್ಯುತ್‌ ಲೋಡ್‌ ಶೆಡ್ಡಿಂಗ್ ಅನಿರೀಕ್ಷಿತವಾಗಿ ಜಾರಿಗೆ ಯಾರಿಗೂ ಗೊತ್ತಿಲ್ಲದಂತೆ ಬರ ಸಿಡಿಲಿನಂತೆ ಕಳೆದ ಗುರುವಾರ ಸಂಜೆಯಿಂದಲೇ ದಿಢೀರ್‌ ಬಡಿದು ರೈತರು ಹಾಗೂ ಜನರಿಗೆ ಆತಂಕ ಶುರುವಾಗಿದೆ.

ರಾಜ್ಯದ ಎರಡು ಪ್ರಮುಖ ವಿದ್ಯುತ್ ಆಧಾರ ಸ್ತಂಭಗಳಾದ ರಾಯಚೂರಿನ ಆರ್‌ಟಿಪಿಎಸ್‌ ಮತ್ತು ಬಳ್ಳಾರಿಯ ಬಿಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನೆ ಗಣನೀಯವಾಗಿ ಕುಸಿದಿರುವ ಕಾರಣ ಅನಿರೀಕ್ಷಿತ ಲೋಡ್ ಶೆಡ್ಡಿಂಗ್ ಆರಂಭವಾಗಿದೆ.

ಮೂಲಗಳ ಪ್ರಕಾರ ಬೇಸಿಗೆಯಲ್ಲಿ ವಿದ್ಯುತ್ ಬಳಕೆ ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದೆ.ಇದೇ ಸಮಯಕ್ಕೆ ಕಳೆದ ಗುರುವಾರದಿಂದ ಆರ್‌ಟಿಪಿಎಸ್‌ ಮತ್ತು ಬಿಟಿಪಿಎಸ್‌ನಲ್ಲಿ ತಾಂತ್ರಿಕ ಕಾರಣಗಳಿಂದ ಉಷ್ಣ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ.

ಈ ಕೊರತೆಯನ್ನು ನೀಗಿಸಲು ಇಲಾಖೆ ಹರ ಸಾಹಸ ಪಡುತ್ತಿದೆ.ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲು ಇನ್ನೂ ೧೦ ರಿಂದ ೧೫ ದಿನಗಳು ಬೇಕಾಗಬಹುದು ಎಂದು ಸೆಸ್ಕಾಂನ ಇಲಾಖೆಯ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ.

ಕಳೆದ ಗುರುವಾರ ಸಂಜೆ ೬.೩೦ ರಿಂದ ರಾತ್ರಿ ೮.೩೦ ಗಂಟೆ ತನಕ ತಾಲೂಕಿನಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿದೆ.ಈ ದಿಡೀರ್‌ ಲೋಡ್‌ ಶೆಡ್ಡಿಂಗ್‌ನಿಂದ ಜನರು ಕಂಗಾಲಾಗಿ ಹೋಗಿದ್ದಂತು ಸತ್ಯ.ಇದು ಗುಂಡ್ಲುಪೇಟೆ ಅಥವಾ ಜಿಲ್ಲೆಗೆ ಸೀಮಿತವಾದ ಸ್ಥಳೀಯ ಸಮಸ್ಯೆಯಲ್ಲ, ರಾಜ್ಯವ್ಯಾಪಿ ಬಿಕ್ಕಟ್ಟು ಎಂದು ಇಲಾಖೆ ಮೂಲಗಳಿಂದ ತಿಳಿದು ಬಂದಿದೆ.

ಮತ್ತೊಂದೆಡೆ ಜಲಾಶಯಗಳಲ್ಲಿ ನೀರಿನ ಮಟ್ಟ ಇನ್ನೂ ನಿರೀಕ್ಷಿತ ಮಟ್ಟ ತಲುಪಿಲ್ಲ.ರಾಜ್ಯದ ಯಾವುದೇ ಒಂದು ಭಾಗದಲ್ಲಿ ಉತ್ತಮ ಮಳೆಯಾಗಿ,ಜಲವಿದ್ಯುತ್ ಉತ್ಪಾದನೆ ಚೇತರಿಸಿಕೊಂಡರೆ ಮಾತ್ರ ಈ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗಲಿದೆ ಎಂಬ ಮಾತಿದೆ.

ಈ ಲೋಡ್‌ ಶೆಡ್ಡಿಂಗ್‌ ಕಷ್ಟದ ಸಮಯದಲ್ಲಿ ಗ್ರಾಹಕರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಸಹಕರಿಸಬೇಕು. ಪೀಕ್ ಅವರ್ ನಲ್ಲಿ ಎಸಿ,ಹೀಟರ್,ಅನಗತ್ಯ ದೀಪಗಳ ಬಳಕೆ ಕಡಿಮೆ ಮಾಡಿ ಸೆಸ್ಕಾಂನೊಂದಿಗೆ ಕೈ ಜೋಡಿಸಬೇಕೆಂದು ಎಂಬುದು ಕನ್ನಡಪ್ರಭ ಕಳಕಳಿ.

ವಿದ್ಯುತ್‌ ಕಡಿತದ ಮಾಹಿತಿ ಟಿವಿ, ಪತ್ರಿಕೆಯಲ್ಲಿ ಪ್ರಕಟಿಸಿ:

ಅನಿರೀಕ್ಷಿತ ವಿದ್ಯುತ್‌ ಲೋಡ್ ಶೆಡ್ಡಿಂಗ್ ಬಗ್ಗೆ ಸೆಸ್ಕಾಂ ವೇಳಾಪಟ್ಟಿಯನ್ನು ಪತ್ರಿಕೆ, ಟಿವಿ ಮೂಲಕ ಅಧಿಕೃತವಾಗಿ ಪ್ರಕಟಿಸಬೇಕು. ಸೆಸ್ಕಾಂ ಕೇವಲ ವಾಟ್ಸಾಪ್‌ನ ಸ್ಟೇಟಸ್ ಅಲ್ಲ ಎಂದು ಸಾರ್ವಜನಿಕರು ಹೇಳಿದ್ದಾರೆ. ತಾಲೂಕಿನ ಆಸ್ಪತ್ರೆ, ಕುಡಿಯುವ ನೀರು,ವಿದ್ಯಾರ್ಥಿಗಳ ಓದಿನ ಸಮಯದಲ್ಲಿ ತುರ್ತು ವಿದ್ಯುತ್ ಪೂರೈಕೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಶಾಲಾ,ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಲೋಡ್‌ ಶೆಡ್ಡಿಂಗ್‌ನಿಂದ ತೊಂದರೆಯಾಗುತ್ತಿದೆ.ಅಲ್ಲದೆ ರೈತರು ಪಂಪ್‌ ಸೆಟ್ ಗಳಿಗೂ ವಿದ್ಯುತ್‌ ಇಲ್ಲದೆ ತೊಂದರೆಯಾಗುತ್ತದೆ. ಈ ದಿಢೀರ್‌ ವಿದ್ಯುತ್‌ ಲೋಡ್‌ ಶೆಡ್ಡಿಂಗ್‌ನಿಂದ ರೈತರು, ಜನರು ಹಾಗೂ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ವಿದ್ಯುತ್‌ ಕಡಿತ ಮಾಡುವ ಸಮಯದ ಬಗ್ಗೆ ತಿಳಿಸುವ ಕೆಲಸ ಇನ್ನಾದರೂ ಸೆಸ್ಕಾಂ ಮಾಡಲಿ ಎಂದು ಅಗತಗೌಡನಹಳ್ಳಿ ರೈತ ಪ್ರಕಾಶ್ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಣೇಶೋತ್ಸವದಲ್ಲಿ ಪಿಒಪಿ ಮೂರ್ತಿಗೆ ಅವಕಾಶವಿಲ್ಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಕುಂಭಾಭಿಷೇಕ