ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಬೆಳಗಾವಿ-ಬಾಗಲಕೋಟೆ ಜಿಲ್ಲೆ ಬೆಸುಗೆ ಮಾಡುವಲ್ಲಿ ಮಹತ್ತರ ಯೋಜನೆಯಾಗಿರುವ ರಬಕವಿ-ಬನಹಟ್ಟಿ ಜಾಕವೆಲ್‌ನ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಮಹಿಷವಾಡಗಿ ಸೇತುವೆ ಕಾಮಗಾರಿ ಮಂದಗತಿಯಿಂದ ಸಾಗಿತ್ತು, ಇದೀಗ ಮತ್ತೆ ವೇಗ ಪಡೆದುಕೊಂಡಿದೆ.
ಸುಮಾರು ೮ ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ಶೇ.೫೦ರಷ್ಟೂ ಕಾಮಗಾರಿಯಾಗಿಲ್ಲ. ಇದರಿಂದ ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಜನತೆ ಸರ್ಕಾರದ ವಿರುದ್ಧ ಹಿಡಿಶಾಪ ಹಾಕಿದ್ದಾಗಿದೆ. ಪೂರ್ವನಿಯೋಜಿತವಾಗಿ ಟೆಂಡರ್ ಕರೆಯದೆ ನದಿಯೊಳಗಿನ ಕಾರ್ಯ ನಡೆಯುವಲ್ಲಿ ವಿಳಂಬಕ್ಕೆ ಕಾರಣವೆನ್ನಲಾಗಿದೆ. ಮತ್ತೊಂದೆಡೆ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯ ನಿರ್ಲಕ್ಷ್ಯವೂ ವಿಳಂಬಕ್ಕೆ ಕಾರಣವಾಗಿದೆ.ಪುನರ್ ಕಾಮಗಾರಿ ಪ್ರಾರಂಭಗೊಂಡಿದ್ದು ಸ್ವಾಗತ. ಇದೇ ವೇಗ ಪಡೆದಲ್ಲಿ ವರ್ಷದ ಕೊನೆಯಲ್ಲಿ ಲೋಕಾರ್ಪಣೆಗೊಳ್ಳಲಿದೆ.
-ಡಾ. ರವಿ ಜಮಖಂಡಿ, ಅಧ್ಯಕ್ಷ, ಹೋರಾಟ ಸಮಿತಿ, ರಬಕವಿ-ಬನಹಟ್ಟಿ.ಸುಮಾರು ೮ ವರ್ಷಗಳಿಂದ ವಿಳಂಬ ಕಾರ್ಯ ಇದಾಗಿದೆ. ಶೀಘ್ರವೇ ಸೇತುವೆ ನಿರ್ಮಿಸಿ ಬೆಳಗಾವಿ-ಬಾಗಲಕೋಟೆ ಜಿಲ್ಲೆಯ ಗಡಿ ಜನತೆಗೆ ಅನುಕೂಲ ಕಲ್ಪಿಸಬೇಕು-ಗಣಪತರಾವ್ ಹಜಾರೆ, ಉದ್ಯಮಿ ರಬಕವಿ.