ಭೂ ಮಂಡಲದ ಉಷ್ಣಾಂಶ ಅಧಿಕವಾಗಿ ಪರಿಸರದಲ್ಲಿ ಆಮ್ಲಜನಕದ ಕೊರತೆ ಹೆಚ್ಚಾಗುತ್ತಿದೆ. ಮನೆಗೊಂದು ಮರ, ಊರಿಗೊಂದು ವನ ಎಂಬ ಸಂಕಲ್ಪ ಮಾಡಬೇಕು.
ಕುಕನೂರು:
ಭೂ ಮಂಡಲದ ಉಷ್ಣಾಂಶ ಅಧಿಕವಾಗಿ ಪರಿಸರದಲ್ಲಿ ಆಮ್ಲಜನಕದ ಕೊರತೆ ಹೆಚ್ಚಾಗುತ್ತಿದೆ. ಮನೆಗೊಂದು ಮರ, ಊರಿಗೊಂದು ವನ ಎಂಬ ಸಂಕಲ್ಪ ಮಾಡಬೇಕೆಂದು ತಾಲೂಕು ಶಿಕ್ಷಕರ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹಾವೀರ ಕಲ್ಭಾವಿ ಹೇಳಿದರು.
ತಾಲೂಕಿನ ಮಂಗಳೂರ ಗ್ರಾಮದಲ್ಲಿ ಕೆಪಿಎಸ್ ಶಾಲೆ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಆಶ್ರಯದಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಒಂದು ಮರ ಒಂದು ಮಗುವಿದ್ದಂತೆ. ಯುವಕರು ದುಶ್ಚಟಗಳಿಗೆ ಮಾರು ಹೋಗದೇ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಬೇಕು.
ನಮ್ಮ ಅಸ್ತಿತ್ವಕ್ಕೆ ಕಾರಣವಾದ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದರು.
ಉಪ ಪ್ರಾಂಶುಪಾಲ ಹನಮಂತಪ್ಪ ಆವಾರದಮನಿ, ಸಿಆರ್‌ಪಿ ರವಿ ಡಿ. ಮಳಗಿ, ಮುಖ್ಯೋಪಾಧ್ಯಾಯ ಸುರೇಶ ಮಾದಿನೂರ, ಪತ್ರಕರ್ತ ಅನಿಲಕುಮಾರ ಕಲ್ಭಾವಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಮೇಲ್ವಿಚಾರಕ ಶಿಲ್ಪಾ ಹೊಳಿಮಠ ಮಾತನಾಡಿದರು. ಧರ್ಮಸ್ಥಳ ಸಂಘದಿಂದ 50 ಸಸಿ ನೆಡಲಾಯಿತು.
ಗ್ರಾಪಂ ಅಧ್ಯಕ್ಷ ಸಕ್ರಪ್ಪ ಚಿನ್ನೂರ, ಮುಖ್ಯೋಪಾಧ್ಯಾಯರಾದ ಶಕುಂತಲಾ ಪಾಟೀಲ್, ನಾಗರಾಜ ಶಕ್ಕಿ, ಕೋಟ್ರಯ್ಯ, ಶಿಕ್ಷಕರಾದ ಸೋಮಪ್ಪ ನಾಯಕ, ಮಾರುತಿ ಬನಿಗೊಳ, ಧರ್ಮಸ್ಥಳ ಸಂಘದ ಸೇವಾ ಪ್ರತಿನಿಧಿಗಳಾದ ಕವಿತಾ, ವಿಜಯಲಕ್ಷ್ಮೀ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.