ಮಲೇರಿಯಾ ಪುರಾತನ ಕಾಯಿಲೆ: ಎಲ್.ಎಂ. ದರ್ಶನಾಥ

KannadaprabhaNewsNetwork |  
Published : May 16, 2025, 02:09 AM IST
ನರಸಿಂಹರಾಜಪುರ ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಬಸ್ಸು ನಿಲ್ದಾಣದಲ್ಲಿ ಕರಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿ ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಲಾಯಿತು. | Kannada Prabha

ಸಾರಾಂಶ

ನರಸಿಂಹರಾಜಪುರಮಲೇರಿಯಾ ಪುರಾತನ ಕಾಯಿಲೆಯಾಗಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್‌.ಎಂ.ದರ್ಶನಾಥ ತಿಳಿಸಿದರು.

ಜ್ವಾಲಾಮಾಲಿನಿ ಜೇಸಿ ಸಂಸ್ಥೆಯಿಂದ ವಿಶ್ವ ಮಲೇರಿಯ ದಿನಾಚರಣೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಮಲೇರಿಯಾ ಪುರಾತನ ಕಾಯಿಲೆಯಾಗಿದೆ ಎಂದು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್‌.ಎಂ.ದರ್ಶನಾಥ ತಿಳಿಸಿದರು.

ಬಸ್‌ ನಿಲ್ದಾಣದ ಆವರಣದಲ್ಲಿ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಏರ್ಪಡಿಸಿದ್ದ ವಿಶ್ವ ಮಲೇರಿಯಾ ದಿನಾಚರಣೆಯಲ್ಲಿ ಮಾತನಾಡಿ ಮಲೇರಿಯಾ ಪ್ಲಾಸ್ಮೋಡಿಯಂ ಎಂಬ ಹೆಣ್ಣು ಸೊಳ್ಳೆಯಿಂದ ಬರುತ್ತದೆ. ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಮಲೇರಿಯಾ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಚಳಿ ಜ್ವರ ಬರುವುದು, ಕಣ್ಣು ಕೆಂಪಾಗುವುದು ಈ ಕಾಯಿಲೆ ಲಕ್ಷಣ ಎಂದರು.

ಮುಖ್ಯ ಅತಿಥಿಯಾಗಿದ್ದ ಸೀನಿಯರ್‌ ಜೇಸಿ ಇಂಟರ್‌ ನ್ಯಾಶನಲ್ ತಾಲೂಕು ಅಧ್ಯಕ್ಷ ಎಸ್.ಎಸ್.ಜಗದೀಶ್ ಮಾತನಾಡಿ, ಮಲೇರಿಯಾವನ್ನು ದೇಶದಿಂದ ತೊಲಗಿಸಲು ಎಲ್ಲಾ ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ. ಎಲ್ಲರೂ ಒಟ್ಟಾಗಿ ಮಲೇರಿಯಾ ಬರದಂತೆ ಶ್ರಮಿಸೋಣ ಎಂದರು.

ಅತಿಥಿಯಾಗಿದ್ದ ಜೇಸಿ ಪೂರ್ವಾಧ್ಯಕ್ಷ ಅಭಿನವ ಗಿರಿರಾಜ್ ಮಾತನಾಡಿ, ಜೇಸಿ ಸಂಸ್ಥೆ ಆರೋಗ್ಯ ಸೇವೆಗಾಗಿ ಸದಾ ಮುಂದಿ ರುತ್ತದೆ. ಸ್ವಚ್ಛತೆ ಎಲ್ಲಿದೆಯೋ ಅಲ್ಲಿದೆ ಆರೋಗ್ಯ. ನಮ್ಮ ಆರೋಗ್ಯ ನಮ್ಮ ಕೈಲ್ಲಿದ್ದು ಸೊಳ್ಳೆಯಿಂದ ದೂರವಿದ್ದು ಮಲೇರಿಯಾ ವನ್ನು ದೂರ ಇಡುವ ಬಗ್ಗೆ ಗಮನ ಹರಿಸೋಣ ಎಂದರು.

ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಸಾರ್ಥಕ ಗೌಡ ಮಾತನಾಡಿ, ಈ ವರ್ಷ ವಿಶ್ವ ಮಲೇರಿಯಾ ದಿನಾಚರಣೆ ಧ್ಯೇಯ ವಾಕ್ಯ ಮಲೇರಿಯಾ ನಮ್ಮೊಂದಿಗೆ ಕೊನೆಕೊಳ್ಳುತ್ತದೆ. ಈ ವರ್ಷದ ಮಾನ್ಸೂನ್ ಎದುರಿಸುವ ಬಗ್ಗೆ ಎಲ್ಲರೂ ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳೋಣ. ಜೇಸಿ ಸಂಸ್ಥೆ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿ ಹಲವು ರೋಗ ನಿಯಂತ್ರಣಕ್ಕೆ ಸಹಕಾರ ನೀಡಿ ಎಂದರು.

ಮಲೇರಿಯಾಗ ರೋಗದ ಬಗ್ಗೆ ಜಾಗೃತಿ ಮೂಡಿಸುವ ಕರ ಪತ್ರಗಳನ್ನು ಸಾರ್ವಜನಿಕರಿಗೆ ಹಂಚಲಾಯಿತು.

ಸಭೆಯಲ್ಲಿ ಜೇಸಿ ಕಾರ್ಯದರ್ಶಿ ಮಿಥುನ್‌ ಗೌಡ, ಸಹ ಕಾರ್ಯದರ್ಶಿ ಜೀವನ್,ಆದರ್ಶ, ಉಪಾಧ್ಯಕ್ಷ ಅಪೂರ್ವ ರಾಘು, ಖಜಾಂಚಿ ಪವನಕರ್, ನಿರ್ದೇಶಕ ಪ್ರೀತಂ, ಸದಸ್ಯರಾದ ಜೋಯಿ, ಸುಹಾಸ್, ಜೂನಿಯರ್ ಜೇಸಿ ಪದಾಧಿಕಾರಿ ಗ್ರೀಷ್ಮ, ಸಾನಿಕ ಇದ್ದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ