ಮಲ್ಲಮ್ಮಳ ಆದರ್ಶಗಳು ಎಂದಿಗೂ ಪ್ರಸ್ತುತ: ಜಿ.ಜಿ. ಗೌಡಪ್ಪಗೋಳ

KannadaprabhaNewsNetwork |  
Published : May 19, 2026, 04:15 AM IST
ಹೇಮರಡ್ಡಿ ಮಲ್ಲಮ್ಮ ಜಯಂತಿ ನಿಮಿತ್ತ ಗಣ್ಯರು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. | Kannada Prabha

ಸಾರಾಂಶ

ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುವಾಗಿವೆ. ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಅರ್ಥ ಬರುತ್ತದೆ ಎಂದು ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆಯ ವಿಶ್ರಾಂತ ಉಪ ಆಯುಕ್ತ ಜಿ.ಜಿ.ಗೌಡಪ್ಪಗೋಳ ಹೇಳಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುವಾಗಿವೆ. ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಅರ್ಥ ಬರುತ್ತದೆ ಎಂದು ಹುಬ್ಬಳ್ಳಿ ವಾಣಿಜ್ಯ ತೆರಿಗೆ ಇಲಾಖೆಯ ವಿಶ್ರಾಂತ ಉಪ ಆಯುಕ್ತ ಜಿ.ಜಿ.ಗೌಡಪ್ಪಗೋಳ ಹೇಳಿದರು.

ಭಾನುವಾರ ಪಟ್ಟಣದ ವಿದ್ಯಾನಗರದ ಹೇಮ ವೇಮ ಚಾರಿಟೇಬಲ್ ಸಂಸ್ಥೆ ವತಿಯಿಂದ ಹೇಮರಡ್ಡಿ ಮಲ್ಲಮ್ಮ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಮಹಾಸಾಧ್ವಿ ಶಿವಶರಣೆ ಶ್ರೀ ಹೇಮರಡ್ಡಿ ಮಲ್ಲಮ್ಮ ಇವರ ತಾಲೂಕಾಮಟ್ಟದ 604ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು. ತಾಳ್ಮೆ, ಸಹನೆ, ಸದಾಚಾರ, ಸಂತೃಪ್ತಿ, ದಾನ, ನಿಷ್ಕಲ್ಮಷ ಭಕ್ತಿ ಇವುಗಳನ್ನು ಅಳವಡಿಸಿಕೊಂಡು ಮಲ್ಲಮ್ಮ ಅವಳ ಜೀವನದಲ್ಲಿ ಬಹಳ ಕಷ್ಟ ಅನುಭವಿಸಿ ಶಿವಶರಣೆಯಾದಳು. ಇವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಡಿ.ಎಂ.ಪೈಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಮಾರಾಟ ಮಂಡಳಿಯ ನಿರ್ದೇಶಕ ಎಸ್.ಆರ್.ಮೆಳ್ಳಿ, ಹೇಮ ವೇಮ ಚಾರಿಟೇಬಲ್ ಸಂಸ್ಥೆಯ ಉಪಾಧ್ಯಕ್ಷ ಡಿ.ಪಿ.ಅಮಲಝರಿ, ಶ್ರೀಶೈಲ ಮಲ್ಲಿಕಾರ್ಜುನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ವಿ.ಎಸ್.ದೇಸಾಯಿ, ಶ್ರೀ ಹೇಮರಡ್ಡಿ ಮಲ್ಲಮ್ಮ ಮಹಿಳಾ ವೇದಿಕೆಯ ಅಧ್ಯಕ್ಷೆ ಲಕ್ಷ್ಮೀ ಕಟ್ಟಿ, ಉಪಾಧ್ಯಕ್ಷೆ ಪ್ರೇಮಾ ಪಾಟೀಲ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಅತಿ ಹೆಚ್ಚು ಅಂಕ ಪಡೆದ ರಡ್ಡಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಸೇವೆಯಿಂದ ನಿವೃತ್ತರಾದ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿವೃತ್ತ ನೌಕರರ ಪರವಾಗಿ ನಿವೃತ್ತ ಶಿಕ್ಷಣಾಧಿಕಾರಿ ಎಚ್.ಜಿ.ಮಿರ್ಜಿ ಮಾತನಾಡಿ ಅನುಭವಗಳನ್ನು ಹಂಚಿಕೊಂಡರು. ತಾಲೂಕಿನಲ್ಲಿ ರಡ್ಡಿ ಸಮಾಜದ ವತಿಯಿಂದ ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಪೂರ್ಣಿಮಾ ಗಂಗಲ್ ಸ್ವಾಗತಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎ.ಭರಮಗೌಡರ ಪ್ರಸ್ಥಾವಿಕವಾಗಿ ಮಾತನಾಡಿದರು. ಮಧುಮಾಲಾ ನಾಲತನಾಡ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರತಿಭಾ ಚನ್ನಪ್ಪಗೌಡರ ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಖಜಾಂಚಿ ಸಿ.ವಿ.ಚನವೀರಗೌಡರ, ಸಹಕಾರ್ಯದರ್ಶಿ ಎಸ್.ಎಂ.ಪಾಟೀಲ, ನಿರ್ದೇಶಕರಾದ ವಿ.ಆರ್.ಪಾಟೀಲ, ಎಸ್.ಎಂ.ಸುಂಕದ, ವಿ.ಎಸ್.ಪಾಟೀಲ, ಸಿ.ಎಸ್.ಹೊಸಗೌಡರ, ಡಾ.ಎಸ್.ಆರ್.ಉಗಲವಾಟ, ಎಂ.ಜಿ.ಗೋಪಾಲಪ್ಪನ್ನವರ, ಶ್ರೀನಿವಾಸ ಪಾಟೀಲ, ಕೆ.ಆರ್.ಪಾಟೀಲ, ಎಂ.ಎಸ್.ಚನ್ನಪ್ಪಗೌಡರ ಸೇರಿದಂತೆ ಸಂಸ್ಥೆಯ ಸರ್ವ ಸದಸ್ಯರು. ಮಹಿಳಾ ವೇದಿಕೆಯ ಸದಸ್ಯರು, ಸಾರ್ವಜನಿಕರು, ಸಮಾಜದ ಮುಖಂಡರು, ಮಹಿಳೆಯರು, ನೌಕರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಸವ ತತ್ವವೇ ಉಸಿರಾಗಿಸಿಕೊಂಡ ಡಾ.ಮಹಾಂತ ಶ್ರೀಗಳು: ಸಿದ್ದು ಯಾಪಲಪರ್ವಿ
ಸೋಲಾಪೂರದ ರಾಯಲ್ ಸಿ.ಸಿ ಜಯಭೇರಿ