ಕನ್ನಡಪ್ರಭ ವಾರ್ತೆ ಗೋಕಾಕ: ಮಹಾರಾಷ್ಟ್ರ ಸೋಲಾಪೂರದ ರಾಯಲ್ ಸಿ.ಸಿ ಕ್ರಿಕೆಟ್ ತಂಡ ರಾಹುಲ್ ಟ್ರೋಫಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಸಿಜನ್ -2 ಪೈನಲ್ ಪಂದ್ಯದಲ್ಲಿ ಜಯಭೇರಿ ಬಾರಿಸಿದೆ.ಪಾಂಡುರಂಗ.ಸಿ.ಸಿ ರಾಯಗಡ್ ಉಸಮಾನ ಪಟೇಲ ನೇತೃತ್ವದ ತಂಡದ ಎದುರು 2 ರನ್ ಅಂತರದಿಂದ ಗೆಲುವು ಸಾಧಿಸಿದೆ. ಇಲ್ಲಿನ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆದ ರಾಹುಲ್ ಟ್ರೋಫಿ ಸಿಜನ್-2 ಫೈನಲ್ ಪಂದ್ಯದಲ್ಲಿ ರಾಯಗಡ್ ತಂಡವನ್ನು ಬಗ್ಗುಬಡಿಯುವ ಮೂಲಕ ಚೊಚ್ಚಲ ಬಾರಿಗೆ ರಾಹುಲ್ ಟ್ರೋಫಿ ಜಯಿಸಿದೆ. ಗೆಲ್ಲಲು 73 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ರಾಯಗಡ್ ತಂಡಕ್ಕೆ ಸೋಲಾಪೂರ ತಂಡದ ಬೌಲರ್‌ಗಳಾದ ಸಮೀರ ಬಿರಾದಾರ, ಪ್ರತಮೇಶ, ಅಶೀಶ ದಾಸ ಉತ್ತಮ ಬೌಲಿಂಗ್ ಪ್ರದರ್ಶನ ಕಟ್ಟಿ ಹಾಕಿತು. ಪಂದ್ಯದ ಕೊನೆಯ ಓವರ್‌ನ ಕೊನೆಯ ಚಂಡಿನಲ್ಲಿ 3 ರನ್ ಬೇಕಿರುವಾಗ ಕೇವಲ ಒಂದು ರನ ಪಡೆಯಲು ಮಾತ್ರ ಸಾಧ್ಯವಾಯಿತು. ಅತ್ಯಂತ ರೋಮಾಂಚನಕಾರಿ ಪಂದ್ಯದಲ್ಲಿ ಸೋಲಾಪೂರ ತಂಡ 2 ರನ್‌ಗಳಿಂದ ಪಂದ್ಯ ಗೆದ್ದು ಟ್ರೋಫಿ ತನ್ನದಾಗಿಸಿಕೊಂಡಿತು. ವಿಜೇತ ತಂಡಕ್ಕೆ ಸಚಿವ ಸತೀಶ ಜಾರಕಿಹೊಳಿ ಮತ್ತು ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಪ್ರಶಸ್ತಿ ವಿತರಿಸಿ ಶುಭ ಕೋರಿದರು. ಪೈನಲ್ ಪಂದ್ಯ ಗೆದ್ದ ತಂಡಕ್ಕೆ ಪ್ರಥಮ ಬಹುಮಾನ ₹ 3 ಲಕ್ಷ ನಗದು ಮತ್ತು ಟ್ರೋಫಿ ಮತ್ತು ಎರಡನೇ ಬಹುಮಾನ ಪಾಂಡುರಂಗ.ಸಿ.ಸಿ ರಾಯಗಡ ತಂಡಕ್ಕೆ ₹ 2 ಲಕ್ಷ ನಗದು ಮತ್ತು ಟ್ರೋಫಿ ನೀಡಲಾಯಿತು. ಉತ್ತಮ ಬ್ಯಾಟ್ಸಮನ್, ಬೌಲರ್, ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ ಸೇರಿದಂತೆ ಅನೇಕ ವೈಯಕ್ತಿಕ ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಸಾಬ ಕುಲಗೋಡೆ, ಸಂಘಟಕ ರಿಯಾಜ ಚೌಗಲಾ, ಡಾ.ಘೋಡಗೇರಿ, ಡಾ.ಗಿರೀಶ್ ಸೋನವಾಲಕರ, ಹನೀಫ ಶಾಬಾಶಖಾನ, ಸಂತೋಷ ಭಟ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಸೋಲಾಪೂರದ ರಾಯಲ್ ಸಿ.ಸಿ ಜಯಭೇರಿ
ಕನ್ನಡಪ್ರಭ ವಾರ್ತೆ ಗೋಕಾಕ: ಮಹಾರಾಷ್ಟ್ರ ಸೋಲಾಪೂರದ ರಾಯಲ್ ಸಿ.ಸಿ ಕ್ರಿಕೆಟ್ ತಂಡ ರಾಹುಲ್ ಟ್ರೋಫಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿಯ ಸಿಜನ್ -2 ಪೈನಲ್ ಪಂದ್ಯದಲ್ಲಿ ಜಯಭೇರಿ ಬಾರಿಸಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.