ಮಂಗಳೂರು ದಸರಾ ವಿಶೇಷ: ಇಂದು ಹಾಫ್‌ ಮ್ಯಾರಥಾನ್‌

KannadaprabhaNewsNetwork | Published : Oct 6, 2024 1:19 AM

ಸಾರಾಂಶ

21 ಕಿ.ಮೀ. ಹಾಫ್‌ ಮ್ಯಾರಥಾನ್‌ ಬೆಳಗ್ಗೆ 5 ಗಂಟೆಗೆ ಕುದ್ರೋಳಿ ಕ್ಷೇತ್ರದಿಂದ ಆರಂಭಗೊಳ್ಳಲಿದ್ದು, ನಾರಾಯಣ ಗುರು ಸರ್ಕಲ್‌, ಚಿಲಿಂಬಿ, ದೇರೆಬೈಲ್‌, ಕರ್ನಾಟಕ ಬ್ಯಾಂಕ್‌, ಭಾರತ್‌ ಮಾಲ್‌, ಬಿಜೈ ಮೂಲಕ ಕದ್ರಿ ದೇವಸ್ಥಾನ ರಸ್ತೆ ಮಾರ್ಗವಾಗಿ, ಭಾರತ್‌ ಬೀಡಿ, ಕಂಕನಾಡಿ, ವೆಲೆನ್ಸಿಯಾ, ಮಂಗಳಾದೇವಿ, ಫಾರಂ ಮಾಲ್‌, ಕ್ಲಾಕ್‌ ಟವರ್‌ ಆಗಿ ರಥಬೀದಿ ವೆಂಕಟರಮಣ ದೇವಸ್ಥಾನದ ಬಳಿಯಿಂದ ಕ್ಷೇತ್ರಕ್ಕೆ ಹಿಂತಿರುಗಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದ ನೇತೃತ್ವದಲ್ಲಿ ನಡೆಯುತ್ತಿರುವ ಮಂಗಳೂರು ದಸರಾದ ಈ ವರ್ಷದ ವಿಶೇಷ ಕಾರ್ಯಕ್ರಮವಾಗಿ ಹಾಫ್‌ ಮ್ಯಾರಥಾನ್‌ನ್ನು ಅ.6ರಂದು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕುದ್ರೋಳಿ ದೇವಾಲಯ ಆಡಳಿತ ಸಮಿತಿ ಕೋಶಾಧಿಕಾರಿ ಪದ್ಮರಾಜ್‌ ಆರ್‌., ಒನ್‌ ಸಿಟಿ ವನ್‌ ಸ್ಪಿರಿಟ್‌ ಎಂಬ ಧ್ಯೇಯದೊಂದಿಗೆ ದ.ಕ. ಜಿಲ್ಲೆಯನ್ನು ವ್ಯಸನ ಮುಕ್ತವನ್ನಾಗಿಸುವ ಪ್ರಯತ್ನವಾಗಿ ಈ ಮ್ಯಾರಥಾನ್ ಆಯೋಜಿಸಲಾಗಿದೆ ಎಂದು ತಿಳಿಸಿದರು.

21 ಕಿ.ಮೀ. ಹಾಫ್‌ ಮ್ಯಾರಥಾನ್‌ ಬೆಳಗ್ಗೆ 5 ಗಂಟೆಗೆ ಕುದ್ರೋಳಿ ಕ್ಷೇತ್ರದಿಂದ ಆರಂಭಗೊಳ್ಳಲಿದ್ದು, ನಾರಾಯಣ ಗುರು ಸರ್ಕಲ್‌, ಚಿಲಿಂಬಿ, ದೇರೆಬೈಲ್‌, ಕರ್ನಾಟಕ ಬ್ಯಾಂಕ್‌, ಭಾರತ್‌ ಮಾಲ್‌, ಬಿಜೈ ಮೂಲಕ ಕದ್ರಿ ದೇವಸ್ಥಾನ ರಸ್ತೆ ಮಾರ್ಗವಾಗಿ, ಭಾರತ್‌ ಬೀಡಿ, ಕಂಕನಾಡಿ, ವೆಲೆನ್ಸಿಯಾ, ಮಂಗಳಾದೇವಿ, ಫಾರಂ ಮಾಲ್‌, ಕ್ಲಾಕ್‌ ಟವರ್‌ ಆಗಿ ರಥಬೀದಿ ವೆಂಕಟರಮಣ ದೇವಸ್ಥಾನದ ಬಳಿಯಿಂದ ಕ್ಷೇತ್ರಕ್ಕೆ ಹಿಂತಿರುಗಲಿದೆ. ಮ್ಯಾರಥಾನ್‌ ಉದ್ದಕ್ಕೂ ಸ್ವಯಂ ಸೇವಕರು ಇರುತ್ತಾರೆ. ಜತೆಗೆ ಫಿಸಿಯೋಥೆರಪಿಸ್ಟ್‌ಗಳು, ಐದು ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗುವುದು. ಮ್ಯಾರಥಾನ್‌ನಲ್ಲಿ ಭಾಗವಹಿಸುವವರು ದಾರಿ ತಪ್ಪದಂತೆ ಮೈಕ್ರೋ ಚಿಪ್‌ಗಳನ್ನು ನೀಡಲಾಗುತ್ತದೆ ಎಂದು ಪದ್ಮರಾಜ್‌ ಹೇಳಿದರು.

ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ರಕ್ಷಿತ್‌, ಜಯರಾಂ ,ಶಾಂ ಸುಂದರ್‌, ರಾಜೇಶ್‌, ರವಿ, ಧನರಾಜ್‌, ರಕ್ಷಿತ್‌ ಇದ್ದರು.

----ಇಂದು ಮಂಗಳೂರಿನಲ್ಲಿ ದಸರಾ ಗೊಂಬೆ,

ಪಾರಂಪರಿಕ ವಸ್ತು ಪ್ರದರ್ಶನ ಆರಂಭಮಂಗಳೂರು: ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಆಯೋಜಕತ್ವದಲ್ಲಿ ದಸರಾ ಗೊಂಬೆ ಪ್ರದರ್ಶನ ಮತ್ತು ಪ್ರಾಚ್ಯ ಪಾರಂಪರಿಕ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿದೆ. ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಅ.6ರಂದು ಮಧ್ಯಾಹ್ನ ೨.೧೫ ಗಂಟೆಗೆ ಮಂಗಳೂರು ಕದ್ರಿ ಕಂಬಳದ ‘ವಿಶ್ವೇಶತೀರ್ಥ ವೇದಿಕೆ’ ವಾದಿರಾಜ ಮಂಟಪ, ‘ಮಂಜು ಪ್ರಾಸಾದ’ದಲ್ಲಿ ಉದ್ಘಾಟಿಸಿ ದಸರಾ (ನವರಾತ್ರಿ) ಸಂದೇಶವನ್ನು ನೀಡಲಿರುವರು.ಹರಿಪಾದಗೈದಿರುವ ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಸಂಸ್ಮರಣೆಯೊಂದಿಗೆ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಟ್ಯಬ್ದಪೂರ್ತಿ ಸರಣಿ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಂಡ ದಸರಾ ಗೊಂಬೆ ಪ್ರದರ್ಶನ ಅ.12ರ ವರೆಗೆ ಸಾರ್ವಜನಿಕ ವೀಕ್ಷಣೆಗೆ ಇರಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.--------------

Share this article