)
ಮಂಗಳೂರು: ಮಂಗಳೂರು ಪ್ರೆಸ್‌ಕ್ಲಬ್ ದಿನಾಚರಣೆ ಸಂದರ್ಭದಲ್ಲಿ ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ. 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.85 ಮತ್ತು ಅದಕ್ಕಿಂತ ಅಧಿಕ ಅಂಕ ಪಡೆದ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳನ್ನು ಗೌರವಿಸಲಾಗುವುದು. ಅರ್ಹ ವಿದ್ಯಾರ್ಥಿಗಳ ಬಗ್ಗೆ ಅಂಕಪಟ್ಟಿಯ ನಕಲು ಪ್ರತಿಯ ದಾಖಲೆ, ಬ್ಯಾಂಕ್ ಪಾಸ್ ಪುಸ್ತಕದ ವಿವರ ಸಹಿತ- ಪ್ರಧಾನ ಕಾರ್ಯದರ್ಶಿ, ಮಂಗಳೂರು ಪ್ರೆಸ್‌ಕ್ಲಬ್, ಪತ್ರಿಕಾ ಭವನ, ಲೇಡಿಹಿಲ್- ಉರ್ವ ಮಾರ್ಕೆಟ್ ರಸ್ತೆ, ಮಂಗಳೂರು-6. ಈ ವಿಳಾಸಕ್ಕೆ 2026ರ ಜ.5ರೊಳಗಾಗಿ ಕಳುಹಿಸುವಂತೆ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.