ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಅಧ್ಯಕ್ಷರ ರೇಸಿನಲ್ಲಿದ್ದ ಸಚಿವ ಡಾ.ಎಂ.ಸಿ.ಸುಧಾಕರ್ ರ ಆಪ್ತ ಊಲವಡಿ ಅಶ್ವತನಾರಾಯಣಬಾಬುಗೆ ನಂತರದ ಎರಡೂವರೇ ವರ್ಷದ ಅವಧಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಒಪ್ಪಂದದ ನಡುವೆ ಅವಿರೋಧ ಅಯ್ಕೆಗೆ ದಾರಿ ಸುಗಮವಾಗಿತ್ತು ಎನ್ನಲಾಗಿದೆ. ಎನ್‌ಡಿಎನ್ ಅಭ್ಯರ್ಥಿ ಕೆ.ವಿ. ನಾಗರಾಜ್ ತನ್ನ ಆಯ್ಕೆಗೆ ಅರ್ಜಿ ಸಲ್ಲಿಸಿದ್ದು ಕೊನೆ ಗಳಿಗೆಯಲ್ಲಿ ವಾಪಸ್ಸು ಪಡೆದಿದ್ದರಿಂದ ವಿ.ಮಂಜುನಾಥ ರೆಡ್ಡಿ ಅವಿರೋಧ ಆಯ್ಕೆಯಾದರು ಬಹಳ ಕುತೂಹಲವನ್ನು ಸೃಷ್ಟಿಸಿದ್ದ ಚಿಮುಲ್ ಚುನಾವಣೆ ನಿರ್ದೇಶಕರ ಆಯ್ಕೆ ಅನಂತರ ಅಧ್ಯಕ್ಷರ ಆಯ್ಕೆ ಸೋಮವಾರವಾದ ಇಂದಿಗೆ ಕೊನೆಗೊಂಡಿದೆ. ಬಾಗೇಪಲ್ಲಿ ಶಾಸಕ ಭವಿಷ್ಯ ನುಡಿದಿದ್ದಂತೆ ಅಧಿಕಾರವನ್ನು ಕಾಂಗ್ರೆಸ್ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಫೆಬ್ರವರಿ 1ರಂದು ನಡೆದ ನಿರ್ದೇಶಕರ ಚುನಾವಣೆ ಮುಗಿದ ಮೇಲೆ ಅಧ್ಯಕ್ಷರು ಯಾರಾಗುತ್ತಾರೆ ಎಂಬ ಕುತೂಹಲ ಜಿಲ್ಲೆಯ ಜನರಲ್ಲಿ ಇತ್ತು. ಮೂರು ಬಾರಿ ಗೆದ್ದ ಚಿಂತಾಮಣಿ ತಾಲೂಕು ಉಲ್ವಾಡಿ ಅಶ್ವತನಾರಾಯಣಬಾಬು ಈ ಬಾರಿ ಅಧ್ಯಕ್ಷರಾಗೋದು ಖಚಿತ ಎಂದುಕೊಂಡಿದ್ದರು. ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹಿಡಿದ ಪಟ್ಟು ಸಾಕರಗೊಂಡಿದೆ.
ಇನ್ನು ಈ ಇಬ್ಬರ ಜತೆಗೆ ತಮಗೂ ಅಧ್ಯಕ್ಷ ಸ್ಥಾನ ಬೇಕೆಂದು ಪಟ್ಟು ಹಿಡಿದಿದ್ದ ಚಿಕ್ಕಬಳ್ಳಾಪುರದ ಭರಣಿ ವೆಂಕಟೇಶ್ ಹಾಗೂ ಮಂಚೇನಹಳ್ಳಿ ತಾಲೂಕಿನ ಕಾಂತಾರಾಜಗೆ ಕೆಎಂಎಫ್ ನಿರ್ದೇಶಕ ಸ್ಥಾನವನ್ನು ಭರಣಿ ವೆಂಕಟೇಶ್ ಅವರಿಗೆ ಮೊದಲ ಎರಡೂವರೆ ವರ್ಷ ಆ ನಂತರ ಕಾಂತ ರಾಜುಗೆ ಬಿಟ್ಟು ಕೊಡಲು ಮೊನ್ನೆ ಉಸ್ತುವಾರಿ ಸಚಿವ ಡಾ .ಎಂ.ಸಿ.ಸುಧಾಕರ್ ಅವರು ಬೆಂಗಳೂರಲ್ಲಿ ಕರೆದಿದ್ದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇನ್ನು ಪೇರೆಂಸಂದ್ರ ಕ್ಷೇತ್ರದಲ್ಲಿ ಕೊನೆಯದಾಗಿ ಬಂದು ಕಾಂಗ್ರೆಸ್ ಬೆಂಬಲಿತ ಅಭ್ಯರ್ತಿಯಾಗಿ ಸ್ಪರ್ದಿಸಿ ಸೋತಿದ್ದ ಕಾಕಲಚಿಂತ ರಾಮಣ್ಣಗೂ ಸರ್ಕಾರಿ ನಾಮನಿರ್ದೇಶೀತ ನಿರ್ದೇಶಕನ್ನಾಗಿ ನೇಮಕ ಮಾಡಿಸಿ ಸಮಾಧಾನ ಪಡಿಸಿದ್ದಾರೆ.ಚುನಾವಣೆ ಅಧಿಕಾರಿಯಾಗಿ ಕೆಲಸ ಮಾಡಿದ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಹಾಗೂ ಡೈರಿ ಆಡಳಿತಾಧಿಕಾರಿ ಅಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್ ನೂತನ ಅಧ್ಯಕ್ಷರ ಅವಿರೋಧ ಆಯ್ಕೆ ಘೋಷಿಸಿದರು.
ಬಳಿಕ ಚಿಮುಲ್ ನೂತನ ಅಧ್ಯಕ್ಷ ವಿ.ಮಂಜುನಾಥರೆಡ್ಡಿ ಮಾತನಾಡಿ, ನಿರ್ದೇಶಕರ ಚುನಾವಣಾ ಸಮಯದಲ್ಲಿ ಮಾತ್ರ ನಾವು ಪಕ್ಷಗಳ ಬೆಂಬಲಿತರಾಗಿ ಗುರ್ತಿಸಿ ಕೊಂಡಿರುತ್ತೇವೆಯೇ ಹೊರತು, ಸಹಕಾರಿಗಳಾದ ನಾವುಗಳೆಲ್ಲರೂ ಒಂದೆ. ನಮ್ಮ ಗುರಿ ಸಹಕಾರಿ ಸಂಘದ ರೈತ ಉತ್ಪಾದಕರ ಜೀವನ ಮಟ್ಟ ಸುಧಾರಿಸುವ ಕೆಲಸ ಮಾಡುವುದು. ರೈತರ ಮತ್ತು ಚಿಮುಲ್ ಅಭಿವೃದ್ಧಿ ಎಲ್ಲಾ ನಿರ್ಧೇಶಕರ ಸಹಕಾರದೊಂದಿಗೆ ಮಾಡಲು ಪಾರದರ್ಶಕ ಆಡಳಿತ ನೀಡುತ್ತೇನೆ ಎಂದು ತಿಳಿಸಿದರು.
ಸಿಕೆಬಿ-5 ಚಿಮುಲ್‌ನ ಪ್ರಥಮ ಅಧ್ಯಕ್ಷ ವಿ.ಮಂಜುನಾಥರೆಡ್ಡಿ ಅವರನ್ನು ಅಪರ ಜಿಲ್ಲಾದಿಕಾರಿ ಹಾಗೂ ಚುನಾವಣಾಧಿಕಾರಿ ಡಾ.ಎನ್. ಭಾಸ್ಕರ್ ಅಭಿನಂದಿಸಿದರು.