ಮ್ಯಾಪಿಂಗ್ ಶೇ 95.5ರಷ್ಟು ಮುಗಿದಿದೆ: ಕೆ. ಎಸ್. ಆನಂದ್

KannadaprabhaNewsNetwork |  
Published : Jul 02, 2026, 02:00 AM IST
29ಕೆಕೆಡಿಯು1ಎ. | Kannada Prabha

ಸಾರಾಂಶ

ಕಡೂರುಕ್ಷೇತ್ರದ ಕಾಂಗ್ರೆಸ್ ಪಕ್ಷದ ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಂತೆ ಮ್ಯಾಪಿಂಗ್ ಕಾರ್ಯ ಜನವರಿಯಲ್ಲಿ ಆರಂಭಗೊಂಡು ಜೂನ್ 20ಕ್ಕೆ ಶೇ 95.5ರಷ್ಟು ಮುಗಿದಿದೆ ಎಂದು ಶಾಸಕ ಕೆ. ಎಸ್. ಆನಂದ್ ತಿಳಿಸಿದರು.

ಕಡ್ಡಾಯ ಮತದಾನದ ದೃಷ್ಟಿಯಲ್ಲಿ ಚುನಾವಣಾ ಆಯೋಗ ಈ ಪ್ರಕ್ರಿಯೆ

ಕನ್ನಡಪ್ರಭ ವಾರ್ತೆ, ಕಡೂರು

ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಂತೆ ಮ್ಯಾಪಿಂಗ್ ಕಾರ್ಯ ಜನವರಿಯಲ್ಲಿ ಆರಂಭಗೊಂಡು ಜೂನ್ 20ಕ್ಕೆ ಶೇ 95.5ರಷ್ಟು ಮುಗಿದಿದೆ ಎಂದು ಶಾಸಕ ಕೆ. ಎಸ್. ಆನಂದ್ ತಿಳಿಸಿದರು.

ಕಡೂರು ಸಮೀಪದ ಮಲ್ಲೇಶ್ವರದ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಎಸ್ ಐ ಆರ್ ಪ್ರಕ್ರಿಯೆ ಮತ್ತು ಬರಲಿರುವ ಗ್ರಾಪಂ ಚುನಾವಣೆಗಳ ಕುರಿತು ಕಾರ್ಯಕರ್ತರು ಮತ್ತು ಮುಖಂಡರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ 2002ರ ಓಟರ್ ಲಿಸ್ಟಿನ ಎಸ್ ಐ ಆರ್ ಆಗಿದ್ದು ನಿಮ್ಮಲ್ಲಿಗೆ ಅಧಿಕಾರಿಗಳು ಬಂದಾಗ ಮಾಹಿತಿ ನೀಡಿ ಫಾರಂ ಭರ್ತಿ ಮಾಡಿ ಕೊಟ್ಟಲ್ಲಿ ಮತದಾನಕ್ಕೆ ಅವಕಾಶ ಸಿಗುತ್ತದೆ. ಜು.29 ರವರೆಗೆ ಈ ಕಾರ್ಯ ನಡೆಯಲಿದೆ.

ಹಿಂದೆ ಬಹಳಷ್ಟು ಮತಗಟ್ಟೆಗಳಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದರೂ ಶೇಕಡವಾರು ಮತದಾನ ಕಡಿಮೆ ಆಗುವುದನ್ನು ತಪ್ಪಿಸಿ ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂಬ ಹಿತದೃಷ್ಟಿಯಲ್ಲಿ ಚುನಾವಣಾ ಆಯೋಗ ಈ ಪ್ರಕ್ರಿಯೆ ನಡೆಸುತ್ತಿದೆ ಎಂದರು.

ಕಡೂರು ಕ್ಷೇತ್ರದಲ್ಲಿ ಇದುವರೆಗೆ 2. 26 ಲಕ್ಷ ಮತದಾರರು ಇದ್ದುಇದರಲ್ಲಿ 8400 ಬಿಟ್ಟು ಹೋಗಿದೆ. ಇದರಲ್ಲಿ ಕಡೂರು 4 ಸಾವಿರ, ಬೀರೂರಿನ 2400, ಇತರೆ 1500 ಇತರೆ ಸೇರಿವೆ. ಬಿಜೆಪಿ ಎಸ್ ಸಿ ಎಸ್ಟಿ ಮತ್ತು ಮುಸ್ಲಿಂ ಸಮಾಜವನ್ನು ಮತದಾರ ಪಟ್ಟಿಯಿಂದ ಕೈ ಬಿಡುವ ಹುನ್ನಾರ ನಡೆಸುತ್ತಿದೆ. ಎನ್ಯುಮರೇಶನ್ ಕಾರ್ಡಿನಲ್ಲಿ ಸರಿಯಾದ ಮಾಹಿತಿ ನೀಡಬೇಕು.

ಈ ನಿಟ್ಟಲ್ಲಿ ಬರುವ 2028 ರೊಳಗೆ ಗ್ರಾಪಂ, ಜಿಪ, ತಾಪಂ ಮತ್ತು ವಿಧಾನಸಭಾ ಚುನಾವಣೆ ಬರಲಿವೆ. ಪಕ್ಷದಿಂದ ಈ ಎಸ್ ಆರ್ ಐ ಕುರಿತು ತರಬೇತಿ ಪಡೆದಿದ್ದೇನೆ. ನಾನು ಕ್ಷೇತ್ರದ ಬಿಎಲ್ ಎ 1 ಆಗಿದ್ದು ಅಂತಿಮವಾಗಿ ಕ್ಷೇತ್ರದ ಶೇ 95.5 ಮ್ಯಾಪಿಂಗ್ ಮುಗಿದಿದೆ ಎಂದರು. ಬರುವ ಗಳಲ್ಲಿ ಎಲ್ಲ ಉದ್ದೇಶಗಳಿಗೆ ಮತದಾರರ ಕಾರ್ಡು ಮಾನ್ಯ ಆಗಲಿದೆ. ಈ ನಿಟ್ಟಲ್ಲಿ ಪಕ್ಷದ ಬಿಎಲ್ ಒ ಗಳು 1 ತಿಂಗಳು ಪಕ್ಷದ ಮತಗಳು ಬಿಟ್ಟು ಹೋಗದಂತೆ ಕ್ರಮ ವಹಿಸಬೇಕು.

ಜುಲೈ ನಲ್ಲಿ ಎಸ್ ಆರ್ ಐ ಮುಗಿದು ಸಪ್ಟೆಂಬರ್ ನಲ್ಲಿ ಮತಪಟ್ಟಿ ತಯಾರಿ ಆಗಲಿದೆ. ಪಕ್ಷ ಸಂಘಟನೆಗೂ ಆದ್ಯತೆ ನೀಡಿ ಬರುವ ಚುನಾವಣೆ ಎದುರಿಸೋಣ ಎಂದು ಕರೆ ನೀಡಿದರು. ಕಾಂಗ್ರೆಸ್ ಸರಕಾರ ಬಂದು 37 ತಿಂಗಳಾಗಿದ್ದು ಸಂಘಟನೆ ಮೂಲಕ 2028 ರಲ್ಲಿ ಮತ್ತೆ ಪಕ್ಷ ಗೆಲ್ಲಿಸಲು ಒಗ್ಗಟ್ಟಾಗಬೇಕು. ಆ ಮೂಲಕ ಕಾಂಗ್ರೆಸ್ ನ ಸುಮಾರು 400 ಗ್ರಾಪಂ ಸದಸ್ಯರನ್ನು ಗೆಲ್ಲಿಸಲು ಸಿದ್ಧ ವಾಗಬೇಕು ಎಂದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಸಭೆ ಉಧ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ ಪಕ್ಷ ಹರಿಪ್ರಸಾದ್ ಸಿದ್ದರಾಮಯ್ವ ನವರ ನೇತೃತ್ವದಲ್ಲಿ ಚುರುಕಾಗುತ್ತಿದೆ. ಮತದಾರ ಪಟ್ಟಿ 8 ಭಾರಿ ಪರಿಷ್ಕರಣೆ ಆಗಿದ್ದು ಇದು ಹೊಸ ಮತದಾರ ಪಟ್ಟಿ ಎಂಬು ದನ್ನು ಅರಿಯಬೇಕು. ಬಿಜೆಪಿ 2019 ರಲ್ಲಿ ಭಯೋತ್ಪಾದನೆ ಮುಂದಿಟ್ಟುಕೊಂಡು ಪಕ್ಷ ಒಡೆವ ಕೆಲಸ ಮಾಡಿದ್ದಾರೆ. ರಾಮನ ಹೆಸರು, ಫುಲ್ವಾಮ ಮತ್ತು ಧಾರ್ಮಿಕ ಭಾವನೆ ಕೆರಳಿಸುತ್ತಿದೆ. ರಾಮನ ಹಣ ಹೊಡೆದವರ ಬಗ್ಗೆ ಚಕಾರವೆತ್ತಿಲ್ಲ. ಇದೀಗ ಎಸ್ ಐ ಐರ್ ನಲ್ಲೂ ಕೈ ಬಿಡುವ ಕೆಲಸ ಆಗದಂತೆ ನಾವು ಕೆಲಸ ಮಾಡಬೇಕು ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎಂ.ಎಚ್. ಚಂದ್ರಪ್ಪ, ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ರಾಜ್ಯ ಇಂದಿರಾ ಕ್ಯಾಂಟೀನ್ ಸಮಿತಿ ಅಧ್ಯಕ್ಷ ಪಂಚನಹಳ್ಳಿ ಪ್ರಸನ್ನ,ಆಸಂದಿ ಕಲ್ಲೇಶ್, ಚಂದ್ರಮೌಳಿ, ಭಂಡಾರಿ ಶ್ರೀನಿವಾಸ್, ತೋಟದಮನೆ ಮೋಹನ್,ಈರಳ್ಳಿ ರಮೇಶ್, ಮರುಗುದ್ದಿ ಮನು, ಸುರ್ಜಿತ್ ಗೌಡ, ತಿಪ್ಪೇಶ್, ಸಾಣೇಹಳ್ಳಿ ಆರಾಧ್ಯ, ಡಿ ಎಸ್ ಉಮೇಶ್ , ಜಿಯಾವುಲ್ಲಾ,ತನ್ವೀರ್, ಕಂಸಾಗರ ಸೋಮಶೇಖರ್, ಹರ್ಷಿತ್, ರುದ್ರೇಗೌಡ, ಇಮ್ರಾನ್ ಖಾನ್, ಕುಮಾರನಾಯ್ಕ, ಮಾಣಿಕ್ ಭಾಷಾ, ನಾಗಮ್ಮ, ಎಂ.ಸೋಮಶೇಖರ್, ಕಲ್ಯಾಣ್ ತೇಜಸ್ ರೇಣುಕಾ ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.

29ಕೆಕೆಡಿಯು1.1ಎ.

ಕಡೂರು ವಿಧಾನಸಭಾ ಕ್ಷೇತ್ರದ ಎಸ್ ಆರ್ ಐ ತರಬೇತಿ ಮತ್ತು ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಯಿತು. ಶಾಸಕ ಕೆ.ಎಸ್. ಆನಂದ್ ಮತ್ತಿತರ ಮುಖಂಡರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಲಪತಿ ನೇಮಕಾತಿ ಶೋಧನಾ ಸಮಿತಿ ರದ್ದುಗೊಳಿಸಲು ಆಗ್ರಹ
ವರದಕ್ಷಿಣೆ ಕಿರುಕುಳ, ದಪ್ಪವಾಗಿದ್ದೀಯಾ ಎಂದು ಹಂಗಿಸಿ ಪತ್ನಿ ಹತ್ಯೆಗೈದ ಪತಿ