ಮುಂಗಾರು ಪೂರ್ವ ಮಳೆಗೆ ಕಾಫಿನಾಡಿನಲ್ಲಿ ಭಾರೀ ಹಾನಿ

KannadaprabhaNewsNetwork |  
Published : Jul 02, 2026, 02:00 AM IST
ಸಸಸಸ | Kannada Prabha

ಸಾರಾಂಶ

ಚಿಕ್ಕಮಗಳೂರುಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಆರಂಭಕ್ಕೂ ಮುನ್ನಾಸುರಿದ ಧಾರಾಕಾರ ಮಳೆ-ಗಾಳಿಗೆ ಬರೋಬ್ಬರಿ 37.54 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಡಕೆ, ತೆಂಗು, ಬಾಳೆ, ಪಪ್ಪಾಯಿ, ಮಾವು ಸೇರಿದಂತೆ ವಿವಿಧ ತರಕಾರಿ ಬೆಳೆ ನಾಶವಾಗಿ ಸುಮಾರು ₹21.37 ಲಕ್ಷ ದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಏಪ್ರಿಲ್‌- ಮೇ ತಿಂಗಳಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ-ಗಾಳಿ

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಆರಂಭಕ್ಕೂ ಮುನ್ನಾಸುರಿದ ಧಾರಾಕಾರ ಮಳೆ-ಗಾಳಿಗೆ ಬರೋಬ್ಬರಿ 37.54 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಡಕೆ, ತೆಂಗು, ಬಾಳೆ, ಪಪ್ಪಾಯಿ, ಮಾವು ಸೇರಿದಂತೆ ವಿವಿಧ ತರಕಾರಿ ಬೆಳೆ ನಾಶವಾಗಿ ಸುಮಾರು ₹21.37 ಲಕ್ಷ ದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸದ್ಯಕ್ಕೆ ಮುಂಗಾರು ಕೈಕೊಟ್ಟಿದೆ. ನಿರೀಕ್ಷೆ ಮಟ್ಟದಲ್ಲಿ ಮಳೆಯಾಗುತ್ತಿಲ್ಲ. ಆದರೆ, ಏಪ್ರಿಲ್‌- ಮೇ ತಿಂಗಳಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆ-ಗಾಳಿಯಿಂದ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ತೋಟಗಾರಿಕೆ ಬೆಳೆಗಳು ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಈ ಕುರಿತು ಜಿಲ್ಲಾ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿ ಪರಿಶೀಲನೆ ನಡೆಸಿ ವರದಿ ಸಿದ್ದಪಡಿಸಿದ್ದಾರೆ.

ಒಟ್ಟಾರೆ ಮೇ 30ರ ವರೆಗೆ ಜಿಲ್ಲೆಯಲ್ಲಿ ಸುರಿದ ಮಳೆ ಗಾಳಿಗೆ ಸುಮಾರು ₹21.37 ಲಕ್ಷ ಮೌಲ್ಯದ ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ₹7. 09 ಲಕ್ಷ ನಷ್ಟು ಪರಿಹಾರ ನೀಡಬಹುದಾಗಿದೆ ಎಂದು ತೋಟ ಗಾರಿಕೆ ಇಲಾಖೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.

86 ರೈತರ ಬೆಳೆ ಹಾನಿ:

ಒಟ್ಟು 86 ರೈತರಿಗೆ ಸೇರಿದ ವಿವಿಧ ಬೆಳೆ ಹಾನಿಯಾಗಿದೆ. 8 ಅಡಕೆ, 10 ಬಾಳೆ, 27 ತೆಂಗು, 2 ಪಪ್ಪಾಯ, ತಲಾ ಒಬ್ಬ ಮಾವು ಹಾಗೂ ಕಲ್ಲಂಗಡಿ ರೈತ ಮತ್ತು ವಿವಿಧ ತರಕಾರಿ ಬೆಳೆದ 37 ರೈತರ ಬೆಳೆ ಹಾನಿಯಾಗಿದೆ. ಈ ರೈತರ ಪೈಕಿ ಚಿಕ್ಕಮಗಳೂರು ತಾಲೂಕಿನ 50 ರೈತರು, ಕಡೂರಿನ 25, ಎನ್‌,ಆರ್‌,ಪುರದ 9 ಹಾಗೂ ಅಜ್ಜಂಪುರದ 2 ರೈತರ ಬೆಳೆ ಹಾನಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

₹3.23 ಕೋಟಿಯಷ್ಟು ಕಟ್ಟಡ, ವಿದ್ಯುತ್‌ ತಂತಿ, ಕಂಬಕ್ಕೆ ಹಾನಿ

ಪೂರ್ವ ಮುಂಗಾರು ಅವಧಿಯಲ್ಲಿ ಸುರಿದ ಮಳೆ-ಗಾಳಿಗೆ ತೋಟಗಾರಿಕೆ ಬೆಳೆಗಳೊಂದಿಗೆ ವಿದ್ಯುತ್‌ ಕಂಬ, ವಿದ್ಯುತ್‌ ತಂತಿ, ಶಾಲೆ ಮತ್ತು ಅಂಗನವಾಡಿ ಕಟ್ಟಡಗಳಿಗೂ ಹಾನಿಯಾಗಿದೆ. ಮಳೆಯಿಂದ 1870 ವಿದ್ಯುತ್‌ ಕಂಬ ಧರೆಗುರುಳಿ ₹2.91 ಕೋಟಿ ನಷ್ಟವಾಗಿದೆ. 37.40 ಕಿ.ಮೀ ಉದ್ದದ ವಿದ್ಯುತ್‌ ತಂತಿ ಮಾರ್ಗ ಹಾಳಾಗಿದ್ದು, ಸುಮಾರು ₹27.95 ಲಕ್ಷ ನಷ್ಟು ನಷ್ಟವಾಗಿದೆ. 2 ಶಾಲಾ/ಅಂಗನವಾಡಿ ಕಟ್ಟಡಗಳು ಹಾನಿಗೆ ಒಳಾಗಿದ್ದು, ₹4 ಲಕ್ಷ ನಷ್ಟವಾಗಿದೆ. ಒಟ್ಟು ₹3.23 ಕೋಟಿ ನಷ್ಟು ಹಾನಿಯಾಗಿದೆ ಎಂದು ತಿಳಿದು ಬಂದಿದೆ.

---ಬಾಕ್ಸ್‌--

51 ಮನೆಗಳಿಗೆ ಭಾಗಶಃ ಹಾನಿಮಳೆ ಅನಾಹುತದಿಂದ ಜಿಲ್ಲೆಯ ಒಟ್ಟು 51 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 34, ಮೂಡಿಗೆರೆ 7,ಕೊಪ್ಪ 3, ಕಡೂರು 4 ಹಾಗೂ ಎನ್‌.ಆರ್‌.ಪುರ,ತರೀಕೆರೆ ಮತ್ತು ಶೃಂಗೇರಿಯಲ್ಲಿ ತಲಾ 1 ಮನೆಗೆ ಭಾಗಶಃ ಹಾನಿಯಾಗಿದೆ. ಎನ್‌.ಆರ್‌.ಪುರ ತಾಲೂಕಿನ ಒಂದು ಮನೆ ಸಂಪೂರ್ಣವಾಗಿ ಹಾನಿಗೆ ಒಳಗಾಗಿದೆ. ಸಂಪೂರ್ಣ ಹಾನಿಯಾದ ಮನೆಗಳಿಗೆ ₹1.20 ಲಕ್ಷ ಹಾಗೂ ಭಾಗಶಃ ಹಾನಿಯಾದ ಮನೆಗೆ ₹6,500 ಪರಿಹಾರ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

-- ಬಾಕ್ಸ್‌---

ತಾಲೂಕುವಾರು ತೋಟಗಾರಿಕೆ ಬೆಳೆಹಾನಿ ವಿವರ

ತಾಲೂಕು ಬೆಳೆ ಹಾನಿ ಪ್ರದೇಶ (ಹೆಕ್ಟೇರ್‌)ರೈತರ ಸಂಖ್ಯೆಹಾನಿ ಮೊತ್ತ (ಲಕ್ಷ ರು)ಎನ್‌ಡಿಆರ್‌ಎಫ್‌ ಪ್ರಕಾರ(ಲಕ್ಷ ರು) ಚಿಕ್ಕಮಗಳೂರು21.93509.993.86

ಅಜ್ಜಂಪುರ1.2821.310.23

ಎನ್‌ಆರ್‌ಪುರ2.5792.640.47

ಕಡೂರು11.76257.412.51

ಒಟ್ಟು37.548621.377.09---ಕೋಟ್‌----

ಪೂರ್ವ ಮುಂಗಾರು ಅವಧಿಯಲ್ಲಿ ಮಳೆ ಹಾನಿಯಿಂದ ತೋಟಗಾರಿಕೆ ಬೆಳೆ ಹಾಗೂ ಮನೆಗಳಿಗೆ ಹಾನಿ ಸಂಬಂದ ಈಗಾಗಲೇ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗಿದೆ. ಶೀಘ್ರದಲ್ಲಿ ರೈತರಿಗೆ ಡಿಬಿಟಿ ಮೂಲಕ, ಮನೆ ಹಾನಿ ಸಂತ್ರಸ್ತರಿಗೆ ಚಕ್‌ ಮೂಲಕ ಪರಿಹಾರ ವಿತರಿಸಲಾಗುವುದು.

- ಭನ್ವರ್‌ ಸಿಂಗ್‌ ಮೀನಾ, ಜಿಲ್ಲಾಧಿಕಾರಿ, ಚಿಕ್ಕಮಗಳೂರು

(ತೋಟಗಾರಿಕೆ ಬೆಳೆ ಹಾನಿಗೆ ಸಂಬಂಧಿಸಿದಂತೆ ಫೋಟೋ ಬಳಸಿ)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಲಪತಿ ನೇಮಕಾತಿ ಶೋಧನಾ ಸಮಿತಿ ರದ್ದುಗೊಳಿಸಲು ಆಗ್ರಹ
ವರದಕ್ಷಿಣೆ ಕಿರುಕುಳ, ದಪ್ಪವಾಗಿದ್ದೀಯಾ ಎಂದು ಹಂಗಿಸಿ ಪತ್ನಿ ಹತ್ಯೆಗೈದ ಪತಿ