ಹೊನ್ನಾಳಿ: ಸಾಮೂಹಿಕ ವಿವಾಹಗಳಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ತಾಲೂಕಿನ ಕೂಲಂಬಿ ಗ್ರಾಮದ ಶ್ರೀ ಗುರು ಗದ್ದಿಗೇಶ್ವರ ಸ್ವಾಮಿ ಕಾರ್ತಿಕೋತ್ಸವ, ರಥೋತ್ಸವದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ವಧು-ವರರಿಗೆ ಅಕ್ಷತೆ ಹಾಕಿ, ಆಶೀರ್ವದಿಸಿದ ಬಳಿಕ ಅವರು ಮಾತನಾಡಿದರು.ಗಂಡ-ಹೆಂಡತಿಯರು ದೇವರನ್ನು ಒಂದೇ ಮನಸ್ಸಿನಿಂದ ಆರಾಧಿಸಬೇಕು. ಅಂಥ ಭಕ್ತಿ ಶಿವನಿಗೆ ಪ್ರಿಯವಾಗುತ್ತದೆ. ಸಂಸಾರ ಬಂಧನದ ನಡುವೆಯೂ ಸಾಧನೆ ಮಾಡಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳಬೇಕು. ಇದಕ್ಕೆ ಅನೇಕ ಮಹಾನೀಯರು ದೇಶದ ಇತಿಹಾಸದಲ್ಲಿ ಕಾಣಸಿಗುತ್ತಾರೆ ಎಂದು ತಿಳಿಸಿದರು.
ಸಾಧು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎ.ಗದ್ದಿಗೇಶ್, ಶಾಂತರಾಜ್ ಪಾಟೀಲ್, ಎಂ.ಪಿ.ರಾಜು, ತಾಲೂಕು ಮಕ್ಕಳ ಸಹಾಯವಾಣಿ ಅಧಿಕಾರಿ ಪಿ.ಸ್ವಾಮಿ ಇತರರು ಮಾತನಾಡಿದರು.
ಕೂಲಂಬಿ ಗ್ರಾ.ಪಂ. ಅಧ್ಯಕ್ಷ ಎಚ್.ಎ.ಪುನಿತ್‌ಕುಮಾರ್, ಶ್ರೀ ಗದ್ದಿಗೇಶ್ವರ, ಬಸವಣ್ಣ, ರಾಮೇಶ್ವರ ಕಮಿಟಿ ಉಪಾಧ್ಯಕ್ಷ ಜಿ.ಟಿ.ಮುರಿಗೆಪ್ಪ, ಕಾರ್ಯದರ್ಶಿ ವೈ.ಎಂ.ಬಸವಲಿಂಗಪ್ಪ, ಸಹ ಕಾರ್ಯದರ್ಶಿ ಜಿ.ಹೇಮಂತರಾಜ್, ಖಜಾಂಚಿ ಕೆ.ಬಿ.ಬಸವರಾಜಪ್ಪ, ಸಹ ಖಜಾಂಚಿ ಕೆ.ಎಂ.ಬಸವಲಿಂಗಪ್ಪ, ನಿರ್ದೇಶಕರಾದ ಸಿ.ಮಹಾದೇವಪ್ಪ, ಜಿ.ಶಂಕರಮೂರ್ತಿ, ಕೆ.ಜಿ.ಶಿವನಗೌಡ, ಎಂ.ಪಿ.ಯೋಗೇಂದ್ರಪ್ಪ, ಬಿ.ಎಸ್.ಅಜ್ಜಯ್ಯ, ಬಿ.ಎಸ್.ಲಿಂಗರಾಜ್, ಎಚ್.ಎಸ್.ಬಸವಲಿಂಗಪ್ಪ, ಕೆ.ಎಸ್.ಹಾಲಪ್ಪ, ಬಸವಲಿಂಗಪ್ಪ ಪೂಜಾರ್, ಆರ್.ಮಲ್ಲಿಕಾರ್ಜುನ್, ಕೆ.ಎಂ.ನಾಗರಾಜಪ್ಪ, ಜಿ.ಎ.ನಾಗರಾಜ್, ಎಂ.ಎನ್.ರೇವಣಸಿದ್ಧಪ್ಪ, ಎಸ್.ಕರಿಬಸಪ್ಪ, ಕೆ.ಎಂ.ರೇವಣಸಿದ್ಧಪ್ಪ, ಎ.ಕೆ.ಮುರಿಗೇಂದ್ರಪ್ಪ, ಶಿವ ಬ್ಯಾಂಕ್ ಉಪಾಧ್ಯಕ್ಷ ಎಂ.ಜಿ.ಲೋಕೇಶ್ ಪಾಟೀಲ್, ಕೂಲಂಬಿ ಗ್ರಾಪಂ ಮಾಜಿ ಅಧ್ಯಕ್ಷ ರೇವಣಸಿದ್ಧಪ್ಪ, ಕೆ.ಬಿ.ಸಿದ್ಧನಗೌಡ, ಟಿ.ಎಸ್.ಬಸವರಾಜ್ ಇತರರಿದ್ದರು.ಸಾಮೂಹಿಕ ವಿವಾಹ ಸಮಾರಂಭದಲ್ಲಿ 21 ಜೋಡಿಗಳು ನವ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಸಾಮೂಹಿಕ ವಿವಾಹದ ಹಿಂದಿನ ದಿನ ಗುರುವಾರ ಹುಣ್ಣಿಮೆಯ ದಿನದಂತು ಬೆಳಗ್ಗೆ ಸ್ವಾಮಿಯ ಸನ್ನಿಧಿಯಲ್ಲಿ ನೂರಾರು ಭಕ್ತರು ಉರುಳು ಸೇವೆ, ಜವಳ ಕಾರ್ಯಕ್ರಮ, ನಂತರ ಅದೇ ದಿನ ರಾತ್ರಿ ಕಾರ್ತಿಕೋತ್ಸವ, ದೀಪ ರಥೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದವು.