ಕನ್ನಡಪ್ರಭ ವಾರ್ತೆ ಶಿರಹಟ್ಟಿ
ಪಟ್ಟಣದ ಅಂಬೇಡ್ಕರ್ ನಗರದ ಮರಿಯಮ್ಮ ದೇವಿ ಹಾಗೂ ಸ್ವಾರೆಮ್ಮ ದೇವಿಯ ೭೨ನೇ ವರ್ಷದ ಅಗೀನ ಕಾರ್ಯಕ್ರಮದ ನಿಮಿತ್ತ ಜರುಗಿದ ಧರ್ಮಸಭೆಯಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. ಡಾ. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಶೋಷಿತ, ಹಿಂದುಳಿದ ಹಾಗೂ ಬಡ ಸಮುದಾಯಗಳ ಜನರು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂಬ ಕನಸು ಕಂಡಿದ್ದರು. ಅವರ ಆಶಯದಂತೆ ಜಾತಿ, ಧರ್ಮ, ಬಡವ-ಶ್ರೀಮಂತ ಎಂಬ ಭೇದಭಾವವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣದ ಅವಕಾಶ ದೊರೆಯಬೇಕು ಎಂದರು.
ಧಾರ್ಮಿಕ ಆರಾಧನೆಯ ಜೊತೆಗೆ ಸಮಾಜವು ಶೈಕ್ಷಣಿಕವಾಗಿಯೂ ಪ್ರಗತಿ ಸಾಧಿಸುವುದು ಅತ್ಯಂತ ಅಗತ್ಯವಾಗಿದೆ. ನಾವೆಲ್ಲರೂ ನಮ್ಮಲ್ಲಿರುವ ಸ್ವಾರ್ಥ, ದ್ವೇಷ ಹಾಗೂ ಬಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸಂಘಟಿತರಾಗಿ ಜೀವನ ಸಾಗಿಸಿದಾಗ ಮಾತ್ರ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ. ಇಂತಹ ಜಾತ್ರಾ ಮಹೋತ್ಸವಗಳ ಸಂದರ್ಭದಲ್ಲಿ ಸಾಮೂಹಿಕ ವಿವಾಹಗಳನ್ನು ಆಯೋಜಿಸುವ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳ ನೆರವಿಗೆ ಜಾತ್ರಾ ಕಮಿಟಿ ಮುಂದಾಗಬೇಕು ಎಂದು ಕರೆ ನೀಡಿದರು.ಡಾ. ಪ್ರಕಾಶ ಹೊಸಮನಿ ಮಾತನಾಡಿ, ಸಮಾಜದ ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಮಾತ್ರ ವ್ಯಕ್ತಿಯಲ್ಲಿ ಜ್ಞಾನ, ಆತ್ಮವಿಶ್ವಾಸ, ಸ್ವಾಭಿಮಾನ ಹಾಗೂ ಸಾಮಾಜಿಕ ಜವಾಬ್ದಾರಿ ಬೆಳೆಯಲು ಸಾಧ್ಯ. ಶಿಕ್ಷಣದಿಂದ ಮೌಢ್ಯ, ಅಜ್ಞಾನ, ಅಸಮಾನತೆ ಹಾಗೂ ಶೋಷಣೆಯನ್ನು ದೂರ ಮಾಡಲು ಸಾಧ್ಯ ಎಂದು ತಿಳಿಸಿದರು.
ಹುಮಾಯೂನ ಮಾಗಡಿ, ನಾಗರಾಜ ಲಕ್ಕುಂಡಿ, ಚಂದ್ರು ಹರಿಜನ, ಗೂಳಪ್ಪ ಕರಿಗಾರ, ಬಸವರಾಜ ವಡವಿ ಮಾತನಾಡಿದರು. ದೇವಕ್ಕ ಗುಡಿಮನಿ, ಅಜ್ಜನಗೌಡ್ರ ಪಾಟೀಲ, ಮಂಜುನಾಥ ಘಂಟಿ, ದುರಗಪ್ಪ ಎಲ್.ಎಚ್., ಮುತ್ತು ಭಾವಿಮನಿ, ರಂಬಪ್ಪ ಗುಡಿಮನಿ, ರವಿ ಗುಡಿಮನಿ, ಸಂದೀಪ ಕಪ್ಪತ್ತನವರ, ಹೊನ್ನಪ್ಪ ಶಿರಹಟ್ಟಿ, ಫಕ್ಕೀರೇಶ ನಡುವಿನಕೇರಿ, ದೇವರಾಜ ಕಟ್ಟಿಮನಿ, ರಾಮು ಅಡಗಿಮನಿ, ಎಂ.ಕೆ. ಲಮಾಣಿ, ಉಡಚಪ್ಪ ನೀಲಣ್ಣವರ, ಮಹಾಂತೇಶ ದಶಮನಿ ಇತರರು ಇದ್ದರು.