ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಬಿ.ಜಿ ನಗರದ ಆದಿಚುಂಚನಗಿರಿ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಮಾತನಾಡಿ, ಇಲ್ಲಿಯವರೆಗೆ ನಿಮ್ಮ ಬದುಕಿನ ಧಿಕ್ಕೆ ಬೇರೆ ಇತ್ತು. ಪದವೀಧರರಾದ ನಿಮಗೆ ಇಂದಿನಿಂದ ಖಾಸಗಿ ಹಾಗೂ ವೃತ್ತಿಪರ ಬದುಕು ತೆರೆದುಕೊಳ್ಳುತ್ತಾ ಹೋಗುತ್ತದೆ. ಇಂದಿನಿಂದ ನಿಮ್ಮಲ್ಲಿನ ಜ್ಞಾನದ ಜೊತೆಗೆ ಕೌಶಲ್ಯವನ್ನು ಬಳಸಿಕೊಂಡು ಸಾಧನೆಯತ್ತ ಮುಖಮಾಡಬೇಕು ಎಂದು ಕಿವಿಮಾತು ಹೇಳಿದರು.
ಇಂದು ಭಾರತೀಯರು ಮಂಗಳಯಾನ ಮತ್ತು ಚಂದ್ರಯಾನ- 3 ಯಶಸ್ವಿಯಾಗುವ ಮೂಲಕ ಜಗತ್ತೇ ನಿಬ್ಬೆರಗಾಗುವಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆಯ ಉತ್ತುಂಗದಲ್ಲಿದ್ದಾರೆ. ಇಂದು ಅನೇಕ ಸಮಸ್ಯೆಗಳನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನ ಮೂಲಕ ಬಗೆಹರಿಸಲು ಸಾಧ್ಯವಾಗುತ್ತಿದೆ ಎಂದರು.ಇಂದು ಬಾಹ್ಯಾಕಾಶ ಸೇರಿ ಆರೋಗ್ಯ, ಔಷಧ ಕ್ಷೇತ್ರದಲ್ಲೂ ಅನೇಕ ಬದಲಾವಣೆಗಳಾಗಿವೆ. ನಾವು ಗರ್ವ ಪಡುವಂತಹ ಸನ್ನಿವೇಶವನ್ನು ಇಂದು ವಿಶ್ವಕ್ಕೆ ಕೊಡುಗೆಯಾಗಿ ನೀಡಿದ್ದೇವೆ. ಹಣಕಾಸು ನಿಯಂತ್ರಣಕ್ಕೆ ಬ್ಲಾಕ್ ಚೈನ್ ಸಿಸ್ಟಂ ತಯಾರಾಗಿದೆ ಎಂದು ತಿಳಿಸಿದರು.
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಪದವೀಧರರು ದೇಶದ ಆಸ್ತಿ. ಎಲ್ಲಾ ವಿಶ್ವವಿದ್ಯಾಲಯದ ಘಟಿಕೋತ್ಸವ ಒಂದೆಡೆಯಾದರೆ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಘಟಿಕೋತ್ಸವದ ಬೆಲೆಯೇ ಬೇರೆ. ಬಾಲಗಂಗಾಧರನಾಥ ಮಹಾ ಸ್ವಾಮೀಜಿಯವರ ಕನಸನ್ನು ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ನನಸು ಮಾಡುತ್ತಿದ್ದಾರೆ ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಚಿನ್ನದ ಪದಕ ವಿಜೇತರಿಗೆ, ರ್‍ಯಾಂಕ್ ಪಡೆದವರಿಗೆ ಹಾಗೂ ಪಿಎಚ್ ಡಿ ಪಡೆದ ಸಾಧಕರಿಗೆ ಶುಭಾಶಯ ಕೋರಿ ಆಶೀರ್ವದಿಸಿದರು.
ಮೆಡಿಸಿನ್ ವಿಭಾಗದಲ್ಲಿ ರೇಖಾ ಎಸ್. ಅವರಿಗೆ ಕಣಗಲ್ ಎಲ್. ಸತ್ಯನಾರಾಯಣ ದತ್ತಿ ಪುರಸ್ಕಾರ. ನರ್ಸಿಂಗ್ ವಿಭಾಗದಲ್ಲಿ ಮಂಪಿ ಡೈಗೆ ಚಂದ್ರಶೇಖರ್ ಶೆಟ್ಟಿ ದತ್ತಿ ಪುರಸ್ಕಾರ, ಒಬಿಜಿ ವಿಭಾಗದಿಂದ ದೀಕ್ಷಿತ ಕೆ. ಅಯ್ಯರ್ ಗೆ ನಂಜಮ್ಮ ಲಕ್ಷ್ಮೇಗೌಡ ದತ್ತಿ ಪುರಸ್ಕಾರ, ಮೆಡಿಸಿನ್ ವಿಭಾಗದಿಂದ ದರ್ಶನ್ ಎಚ್. ಅವರಿಗೆ ದೇವಮ್ಮ ಪುಟ್ಟಚ್ಚಿ ಸಿದ್ದೇಗೌಡ ಮತ್ತು ಸುಶೀಲ ಜಯರಾಮ್ ದತ್ತಿ ಪುರಸ್ಕಾರ, ಜಯಪ್ರಕಾಶ್ ನಾಯರ್ ಸಂಶೋಧನಾ ಶ್ರೇಷ್ಠ ಪ್ರಶಸ್ತಿಯನ್ನು ಪ್ರೊ.ಪ್ರಕಾಶ್ ಎನ್ ಗೌಂಡಣ್ಣ ನವರು ಮುಡಿಗೇರಿಸಿಕೊಂಡರು.
ಮೆಡಿಸಿನ್ ವಿಭಾಗ: ಡಾ.ದೀಕ್ಷಿತ ಕೆ. ಅಯ್ಯರ್, ಇಂಜಿನಿಯರಿಂಗ್ ವಿಭಾಗ: ಡಾ.ಬಿ.ವರ್ಷ, ಲಿಖಿತ್ ಆರ್., ಅರ್ಬಿಯ ಮುಸ್ಕಾನ್ ಬಿಂದು ವಿ.ಆರ್., ಪ್ರೀತಿ ಕೆ.ಡಿ., ರೇಖಾರಾಣಿ, ನಿತ್ಯಶ್ರೀ ಎಸ್. ಜೈನ್, ಮನೋಜ್ ಗೌಡ ಡಿ.ಕೆ., ಪುನೀತ್ ಕುಮಾರ್, ಉಲ್ಲಾಸ್ ಎಸ್., ಜೀವಿತ ಆರ್., ಜ್ಞಾನ ಡಿ.ಎನ್ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಕಾಲೇಜು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎನ್.ಎಸ್.ರಾಮೇಗೌಡ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎನ್.ಶ್ರೀಧರ, ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ, ರಿಜಿಸ್ಟ್ರಾರ್ ಡಾ.ನಾಗರಾಜ್, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಂ.ಜಿ.ಶಿವರಾಮು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.