ಮಾಚಿದೇವರ ಕಾಯಕ ನಿಷ್ಠೆ ನಮಗೆಲ್ಲ ಮಾದರಿಯಾಗಲಿ

KannadaprabhaNewsNetwork |  
Published : Feb 27, 2024, 01:34 AM IST
26ಕೆಪಿಎಲ್24 ಕೊಪ್ಪಳ ನಗರದ ಸಾಹಿತ್ಯಭವನದಲ್ಲಿ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ | Kannada Prabha

ಸಾರಾಂಶ

ಶರಣರಾದ ಮಡಿವಾಳ ಮಾಚಿದೇವರು ತಮ್ಮ ಕಾಯಕ ನಿಷ್ಠೆ, ನೇರ ನಡೆ ನುಡಿಗೆ ಹೆಸರಾದವರು.

ಕೊಪ್ಪಳ: ಶರಣರಾದ ಮಡಿವಾಳ ಮಾಚಿದೇವರು ತಮ್ಮ ಕಾಯಕ ನಿಷ್ಠೆ, ನೇರ ನಡೆ ನುಡಿಗೆ ಹೆಸರಾದವರು. ಅವರ ಕಾಯಕ ನಿಷ್ಠೆ ನಮ್ಮೆಲ್ಲರಿಗೂ ಮಾದರಿಯಾಗಲಿ ಎಂದು ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಸೋಮವಾರ ಆಯೋಜಿಸಲಾಗಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾಯಕನಿಷ್ಠೆ ಮತ್ತು ವೃತ್ತಿಪರತೆ ಎಲ್ಲರಿಗೂ ಇರಬೇಕಾದ ಮೂಲಭೂತ ಲಕ್ಷಣಗಳು. ನಮ್ಮ ಉದ್ಯೋಗ, ವೃತ್ತಿಯಲ್ಲಿ ಯಶಸ್ಸು ಸಾಧಿಸಬೇಕಾದರೆ ಇವೆರಡೂ ಪ್ರಮುಖ ಅಂಶಗಳಾಗಿರುತ್ತವೆ. ಮಾಚಿದೇವರು ತಮ್ಮ ವ್ಯಕ್ತಿತ್ವವನ್ನೇ ತಮ್ಮ ವಚನಗಳಲ್ಲಿ ಪದಗಳ ಮೂಲಕ ಪರಿಚಯಿಸಿದಂತೆ ಅವರ ಜೀವನವಿತ್ತು. ನಾವೆಲ್ಲರೂ ಅವರ ಜೀವನವನ್ನು ಆದರ್ಶವಾಗಿಟ್ಟುಕೊಂಡು, ನಮ್ಮ ನಿತ್ಯದ ಬದುಕಲ್ಲಿ ಅಳವಡಿಸಿಕೊಳ್ಳೋಣ ಎಂದು ಅವರು ಹೇಳಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಹೊಸಪೇಟೆಯ ವಿಜಯನಗರ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ, ಆಕಾಶವಾಣಿಯ ನಾಗರತ್ನ ಮಾತನಾಡಿ, ಮಡಿವಾಳ ಮಾಚಿದೇವರು ವೀರಭದ್ರ ದೇವರ ವಂಶಸ್ಥರಾಗಿದ್ದು, 11ನೇ ಶತಮಾನದಲ್ಲಿ ವಿಜಯಪುರದ ಸಿಂದಗಿ ತಾಲೂಕಿನ ದೇವರ ಹಿಪ್ಪರಗಿಯಲ್ಲಿ ಜನಿಸಿದರು. ನೇರ, ನಿಷ್ಠುರ ನಡೆ ನುಡಿ, ನಿಷ್ಠುರ ವಚನಗಳ ಮೂಲಕ 11ನೇ ಶತಮಾನದ ಶರಣರಲ್ಲಿ ಪ್ರಸಿದ್ಧರಾಗಿದ್ದರು. ಬಸವಣ್ಣನವರ ಕಡು ಅನುಯಾಯಿಯಾಗಿದ್ದ ಮಾಚಿದೇವರು, ಸಂದರ್ಭೋಚಿತವಾಗಿ ತಮಗೆ ಸರಿ ಎನಿಸಿದ ವಿಷಯಗಳ ಕುರಿತು ನೇರವಾಗಿ ಬಸವಣ್ಣನವರ ಜೊತೆ ವಾದಿಸುತ್ತಿದ್ದರು. ಅದರಂತೆ ತಮ್ಮ ಬದುಕಿಡೀ ತಮ್ಮ ನೇರ ವ್ಯಕ್ತಿತ್ವದ ಮೂಲಕ ಮಾರಿಯಾಗಿದ್ದರು. ಕಾಯಕನಿಷ್ಠೆಗೆ ಹೆಸರಾಗಿದ್ದರು ಎಂದು ಮಡಿವಾಳ ಮಾಚಿದೇವರು ಮತ್ತು ಅವರ ವಚನಗಳ ಕುರಿತು ವಿವರವಾಗಿ ಮಾತನಾಡಿದರು.

ಸದಾಶಿವ ಪಾಟೀಲ್ ಹಾಗೂ ಸಂಗಡಿಗರು ನಾಡಗೀತೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ನಿವೃತ್ತ ಪ್ರಾಚಾರ್ಯ ಸಿ.ವಿ. ಜಡಿಯವರ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ಉತ್ತರ ಕರ್ನಾಟಕ ಮಡಿವಾಳರ ಸಂಘದ ಅಧ್ಯಕ್ಷ ಎಂ.ಕೆ. ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ರಾಮಣ್ಣ ಮಡಿವಾಳರ, ಧಾರವಾಡ ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಬಾಬಣ್ಣ ಮಡಿವಾಳರ, ಯಲಬುರ್ಗಾದ ನಿವೃತ್ತ ಪ್ರಾಚಾರ್ಯ ಸಂಗಮೇಶ ನರೇಗಲ್, ಜಿಲ್ಲಾ ಸಂಘದ ಅಧ್ಯಕ್ಷ ದುರುಗೇಶ ಮಡಿವಾಳರ, ಸಮಾಜದ ಮುಖಂಡರಾದ ಗವಿಸಿದ್ದಪ್ಪ ಮಡಿವಾಳರ, ಮಲ್ಲಿಕಾರ್ಜುನ ಪಿ.ಮಡಿವಾಳರ, ಈರಣ್ಣ ಮಡಿವಾಳರ ಉಪಸ್ಥಿತರಿದ್ದರು.ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಅಕ್ಕಮಹಾದೇವಿ ದೇವಸ್ಥಾನದಿಂದ ಸಾಹಿತ್ಯ ಭವನದವರೆಗೆ ಕುಂಭ ಮೆರವಣಿಗೆ ಹಾಗೂ ಮಾಚಿದೇವರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಸಮಾಜದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕ್ಷೇತ್ರ ಘೋಷಿಸಿದ ನಿಖಿಲ್
ಬೆಂಬಲ ಬೆಲೆಯಡಿ ರಾಗಿ ಖರೀದಿಗೆ ಚುರುಕು