ಹೊಸಗುಂದ ಕ್ಷೇತ್ರ ಭಕ್ತಿಯ ಶ್ರದ್ಧಾ ಕೇಂದ್ರವಾಗಿ ಬೆಳೆಯಲಿ: ಸಿ.ಎಂ.ಎನ್ ಶಾಸ್ತ್ರಿ

KannadaprabhaNewsNetwork |  
Published : Nov 19, 2025, 12:30 AM IST
ಫೋಟೋ 18 ಎ, ಎನ್, ಪಿ 2 ಆನಂದಪುರ ಇಲ್ಲಿಗೆ ಸಮೀಪದ ಹೊಸಗುಂದ ಕ್ಷೇತ್ರದಲ್ಲಿ ಸೋಮವಾರ ನಡೆದ ಲಕ್ಷದೀಪೋತ್ಸವ ಕಾರ್ಯಕ್ರಮವನ್ನ ಉಮಾಮಹೇಶ್ವರ ಸೇವಾ ಟ್ರಸ್ಟಿ ಗಳಾದ ಸಿ.ಎಂ. ಎನ್. ಶಾಸ್ತ್ರಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಹೊಸಗುಂದ ಕ್ಷೇತ್ರ ಭಾರತ ದೇಶದಲ್ಲಿ ಭಕ್ತಿಯ ಶ್ರದ್ಧಾ ಕೇಂದ್ರವಾಗಿ ಬೆಳೆಯಬೇಕು ಎಂದು ದೇವಸ್ಥಾನದ ಟ್ರಸ್ಟಿ, ಸಿ.ಎಂ.ಎನ್ ಶಾಸ್ತ್ರಿ ಅಭಿಮತ ವ್ಯಕ್ತಪಡಿಸಿದರು.

ಆನಂದಪುರ: ಹೊಸಗುಂದ ಕ್ಷೇತ್ರ ಭಾರತ ದೇಶದಲ್ಲಿ ಭಕ್ತಿಯ ಶ್ರದ್ಧಾ ಕೇಂದ್ರವಾಗಿ ಬೆಳೆಯಬೇಕು ಎಂದು ದೇವಸ್ಥಾನದ ಟ್ರಸ್ಟಿ, ಸಿ.ಎಂ.ಎನ್ ಶಾಸ್ತ್ರಿ ಅಭಿಮತ ವ್ಯಕ್ತಪಡಿಸಿದರು.

ಅವರು ಇಲ್ಲಿಗೆ ಸಮೀಪದ ಹೊಸಗುಂದ ಉಮಾಮಹೇಶ್ವರ ಕ್ಷೇತ್ರದಲ್ಲಿ ಸೋಮವಾರ ನಡೆದ ಹೊಸಗುಂದ ಉತ್ಸವ ಹಾಗೂ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಕಾರ್ತಿಕ ಮಾಸ ಕತ್ತಲೆಯಿಂದ ಬೆಳಕಿನೆಡೆಗೆ, ಬೆಳಕು ಅಭಿವೃದ್ಧಿಯ ಸಂಕೇತವಾಗಿದೆ. ಮನುಷ್ಯನ ಬದುಕಿನಲ್ಲಿರುವಂತಹ ಅಂಧಕಾರವನ್ನು ಹೋಗಲಾಡಿಸಿ ಒಳ್ಳೆಯ ಸತ್ಕಾರ ಜೀವನ ನಡೆಸುವಂತಹ ಶಕ್ತಿ ಭಗವಂತ ಎಲ್ಲರಿಗೂ ಕರುಣಿಸಲಿ ಎಂದರು. ಮನುಷ್ಯ ಸ್ವಾರ್ಥನಾಗಿ ಬದುಕಬಾರದು, ನಾವು ನಮ್ಮ ಜೀವನದ ಅವಧಿಯಲ್ಲಿ ಮಾಡುವಂತಹ ಕಾಯಕ ನಿಸ್ವಾರ್ಥವಾಗಿರಬೇಕು. ಕೆಳದಿ ಅರಸರ ಕಾಲದಲ್ಲಿ ಬಾರಿ ವೈಭವದಿಂದ ಮೆರೆದಂತಹ ಈ ಕ್ಷೇತ್ರ ಮತ್ತೆ ತನ್ನ ಗತಕಾಲವನ್ನು ನೆನಪಿಸುವಂತಿದೆ. ಇಂತಹ ಹೊಸಗುಂದ ಕ್ಷೇತ್ರ ಇತಿಹಾಸದ ಪುಟದಲ್ಲಿ ಸೇರುವಂಥೆ ಆಗಬೇಕು ಎಂದರು.

ಆನಂದಪುರ ವೀರಾಂಜನೇಯ ಮಹಿಳಾ ಭಜನಾ ಮಂಡಳಿಯಿಂದ ಭಜನೆ, ಸಾಗರ ನಾಟ್ಯಕಲಾ ತಂಡದಿಂದ ಭರತನಾಟ್ಯ ಪ್ರದರ್ಶನ, ಚನ್ನಶೆಟ್ಟಿ ಕೊಪ್ಪ ಬಸವೇಶ್ವರ ಯುವಕ ಸಂಘದ ಯುವಕರಿಂದ ಡೊಳ್ಳು ಕುಣಿತ ಪ್ರದರ್ಶನಗೊಂಡಿತು. ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಅಶ್ವಿನ್ ಸುಬ್ರಾವ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜ್ಯೋತಿ ಕೋವಿ, ರಾಜು ಕೋವಿ, ಸ್ವಾಮಿರಾವ್ ಕೋವಿ, ವೀರಾಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಕೆ.ಹಾಲಪ್ಪ, ಲತಾ, ಗಣಪತಿ ಶೆಟ್ರು, ವಿಜಯ್ ಭಟ್ರು,, ಕೆ.ಟಿ ರಮೇಶ್ ಹಾಗೂ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ