ಫೋಚೋ 22 ಎಂವೈಎಸ್ 3ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ, ನವ ವಿಶ್ವಮಾನವ ಟ್ರಸ್ಟ್ ವತಿಯಿಂದ ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಅನಿಟ ವಿಮ್ಲ ಬ್ರ್ಯಾಗ್ಸ್ ಅವರಿಗೆ ಬೀಳ್ಕೊಡುಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೋಮವಾರ ನಡೆಯಿತು. ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ವಿವಿ ಹಣಕಾಸು ಅಧಿಕಾರಿ ಕೆ.ಎಸ್. ರೇಖಾ, ಸಿಂಡಿಕೇಟ್ ಸದಸ್ಯರಾದ ಸಿ. ಮಹದೇಶು, ಕ್ಯಾತನಹಳ್ಳಿ ನಾಗರಾಜ್, ಪ್ರೊ.ಎಸ್. ಶಿವರಾಜಪ್ಪ, ಡಾ.ಎಂ.ಎಸ್. ಸಪ್ನಾ, ಡಾ.ಎಚ್.ಪಿ. ಜ್ಯೋತಿ, ಆರ್. ವಾಸುದೇವ ಮೊದಲಾದವರು ಇದ್ದರು.---ಕನ್ನಡಪ್ರಭ ವಾರ್ತೆ ಮೈಸೂರುಎಲ್ಲಾ ಕ್ಷೇತ್ರಗಳಲ್ಲೂ ಮೈಸೂರಿನವರು ಹಾಗೂ ರಾಜ್ಯದವರು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಆಶಿಸಿದರು.ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆ, ನವ ವಿಶ್ವಮಾನವ ಟ್ರಸ್ಟ್ ವತಿಯಿಂದ ಮಾನಸ ಗಂಗೋತ್ರಿ ಇಎಂಆರ್‌ಸಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಅನಿಟ ವಿಮಲ ಬ್ರ್ಯಾಗ್ಸ್ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಸಾಕಷ್ಟು ಸೌಲಭ್ಯಗಳಿವೆ. ಅದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.ಸಾಧಕರನ್ನು ಗುರುತಿಸಿ, ಗೌರವಿಸುವುದು ಒಳ್ಳೆಯದು. ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಲು ಇದರಿಂದ ಉತ್ತೇಜನ ಸಿಗುತ್ತದೆ ಎಂದು ಅವರು ಹೇಳಿದರು.ವಯೋನಿವೃತ್ತಿ ಹೊಂದುತ್ತಿರುವ ಪ್ರೊ.ಅನಿಟ ವಿಮಲ ಬ್ರ್ಯಾಗ್ಸ್ ಅವರು ಮಹಾರಾಜ, ಲಲಿತಕಲಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ. ಅದರಲ್ಲೂ ಇಂಗ್ಲಿಷ್ ಪ್ರಾಧ್ಯಾಪಕರಾಗಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ, ಸಹಸ್ರಾರು ವಿದ್ಯಾರ್ಥಿಗಳನ್ನು ತಯಾರು ಮಾಡಿದ್ದಾರೆ ಎಂಬುದನ್ನು ತಿಳಿದು ಸಂತಸವಾಯಿತು ಅವರ ನಿವೃತ್ತಿಯ ಜೀವನ ಆರೋಗ್ಯದಿಂದ ಕೂಡಿರಲಿ. ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.ಪ್ರೊ.ಅನಿಟ ವಿಮಲ ಬ್ರ್ಯಾಗ್ಸ್ ಮಾತನಾಡಿ, ನಾನು ಮಹಾರಾಜ, ವಿವಿ ಸಂಜೆ ಕಾಲೇಜು ಹಾಗೂ ಲಲಿತಕಲಾ ಕಾಲೇಜಿನ ಪ್ರಾಂಶುಪಾಲೆಯಾಗಿ ಕೆಲಸ ಮಾಡಿದ್ದೇನೆ. ಆಂಗ್ಲ ಭಾಷೆಯ ಪ್ರಾಧ್ಯಾಪಕಿಯಾಗಿ ಈ ಮೂರರ ಜೊತೆಗೆ ಯುವರಾಜ ಕಾಲೇಜಿನಲ್ಲಿ ಕೂಡ ಕೆಲಸ ಮಾಡಿದ್ದೇನೆ. ಭಾಷಾ ಅಧ್ಯಾಪಕರಿಗೆ ಇದೊಂದು ರೀತಿಯ ವರ ಎಂದರು.ನಾನು ನನ್ನ ಸೇವಾವಧಿಯಲ್ಲಿ ಸದ್ದಿಲ್ಲದೇ ಕೆಲಸ ಮಾಡಿದ್ದೇನೆ. ಆದರೆ ನಾನು ಕಲಿಸಿದ್ದಕ್ಕಿಂತ ವಿದ್ಯಾರ್ಥಿಗಳಿಂದ ಕಲಿತಿದ್ದೇ ಹೆಚ್ಚು ಎಂದು ವಿನಮ್ರವಾಗಿ ಹೇಳಿದರು.ವಿಶ್ವವಿದ್ಯಾನಿಲಯದಲ್ಲಿ ಮಹಿಳೆಯರಿಗೆ ಹೆಚ್ಚಿನ ಉತ್ತೇಜನ ಸಿಗುವುದಿಲ್ಲ. ಆದರೂ ನನ್ನ ವಿದ್ಯಾರ್ಥಿಗಳೂ ಈಗ ಪ್ರಾಧ್ಯಾಪಕರಾದ ಆದ ಎಂ.ಎಸ್. ಸಪ್ನಾ ಹಾಗೂ ಎಚ್.ಪಿ. ಜ್ಯೋತಿ ಮುನ್ನುಗಿ ತಾವು ಅಂದುಕೊಂಡಿದ್ದನ್ನು ಸಾಧಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ನಾನು ಬೇಡ ಬೇಡ ಎಂದರೂ ವಿಶ್ವಮಾನವ ವೇದಿಕೆಯ ವಾಸುದೇವ ಮತ್ತು ಪದಾಧಿಕಾರಿಗಳು ಈ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಾಟು ಮಾಡಿದ್ದಾರೆ. ಹಿಂದೆ ಮಹಾರಾಜ ಕಾಲೇಜಿನ ಪ್ರಾಂಶುರಾಗಿದ್ದ ಪ್ರೊ.ಸಿ.ಪಿ. ಸುನೀತಾ ಅವರಂತೆ ನಾನು ಕೂಡ ವಿದ್ಯಾರ್ಥಿವೇತನ ನೀಡಲು ಟ್ರಸ್ಟ್‌ಗೆ ಸಹಾಯ ಮಾಡುತ್ತೇನೆ ಎಂದು ಸ್ಥಳದಲ್ಲಿಯೇ ಚೆಕ್ ನೀಡಿದರು.ವಿವಿ ಹಣಕಾಸು ಅಧಿಕಾರಿ ಕೆ.ಎಸ್. ರೇಖಾ, ಗಾಂಧಿ ಭವನ ಹಾಗೂ ಪ್ರಾಚ್ಯ ವಿದ್ಯಾ ಸಂಶೋಧನಾಲಯ ನಿವೃತ್ತ ನಿರ್ದೇಶಕ ಪ್ರೊ.ಎಸ್. ಶಿವರಾಜಪ್ಪ, ಸಿಂಡಿಕೇಟ್ ಸದಸ್ಯ ಮಹದೇಶು, ಪ್ರಾಧ್ಯಾಪಕರಾದ ಡಾ.ಎಂ.ಎಸ್. ಸಪ್ನಾ, ಡಾ.ಎಚ್.ಪಿ. ಜ್ಯೋತಿ ಮಾತನಾಡಿದರು. ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜು, ವೇದಿಕೆ ಅಧ್ಯಕ್ಷ ಆರ್. ವಾಸುದೇವ, ಕಾರ್ಯದರ್ಶಿ ವಿನೋದ್ ಸೇರಿದಂತೆ ಎಲ್ಲ ಪದಾಧಿಕಾರಿಗಳು ಇದ್ದರು.ಅಮ್ಮ ರಾಮಚಂದ್ರ ಗೀತಗಾಯನ ನಡೆಸಿಕೊಟ್ಟರು. ಡಾ.ಬಿ.ಎಸ್. ದಿನಮಣಿ ಸ್ವಾಗತಿಸಿದರು. ಮಲೈ ಮಹದೇಶ್ವರಸ್ವಾಮಿ ವಂದಿಸಿದರು. ಮಂಜುನಾಥ್ ಸುಬೇದಾರ್ ಕಾರ್ಯಕ್ರಮ ನಿರೂಪಿಸಿದರು. -- ಬಾಕ್ಸ್-- ಸನ್ಮಾನಿತರುಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ವಿಜ್ಞಾನಿ ಡಾ.ಎಸ್. ಶ್ರೀಕಂಠಸ್ವಾಮಿ, ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ.ಎಂ.ಬಿ. ಸುರೇಶ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ವಿಜಯಲಕ್ಷ್ಮೀ ಮನಾಪುರ, ಡಾ.ಬಿ.ಕೆ. ಜ್ಞಾನಪ್ರಕಾಶ್, ಶಿಕ್ಷಣ ಮಂಡಳಿ ಸದಸ್ಯ ಸುರೇಶ್ ಪಾಳ್ಯ, ತಿಮ್ಮಯ್ಯ ಹಾಗೂ ಮೈವಿವಿ ಕ್ರೀಡಾ ವಿಭಾಗದ ಅದಿಕಾರಿ ಬಿ.ಎಸ್. ರವಿ ಅವರನ್ನು ಸನ್ಮಾನಿಸಲಾಯಿತು.ವಿವಿಧ ಕ್ರೀಡಾ ಸ್ಪರ್ಧೆ ವಿಜೇತರಾದ ಪಿ. ಶಶಿಧರ್, ಎನ್. ಪ್ರಜ್ವಲ್, ಎಚ್.ಎನ್. ಚರಣ್, ದರ್ಶನ್ ಎಸ್. ಬೆಳಕೇರಿ, ಎಸ್.ಕೆ. ಚಲುವರಾಜು, ಆರ್. ಮಹೇಶ್,. ಎಸ್.ಸಿ. ಸಾತ್ವಿಕ್, ಪ್ರತೀಕ್ ಎಸ್. ಪಾಟೀಲ್, ಟಿ.ಎಸ್. ಪವನ್, ಸಿ. ಆದಿತ್ಯ, ವೈ. ಪೃಥ್ವಿರಾಜ್, ಕೆ.ಆರ್. ಸುಭಾಷ್, ಕೆ.ಎಸ್. ರಕ್ಷಿತಾ, ಎಂ. ಅಮೂಲ್ಯ, ಎಸ್. ನಾಗಶ್ರೀ, ಎಂ. ಹಂಸ, ಚಂದನ ಗದ್ದಿ, ಎಸ್.ಎಂ. ನಂದಿನಿ, ಎ. ಪೃಥಿವ್, ಎನ್.ಸಿ. ಕೀರ್ತನಾ, ಐಶ್ವರ್ಯ, ಬಿ.ಸಿ. ನಯನಾ ಅವರನ್ನು ಸನ್ಮಾನಿಸಲಾಯಿತು. ಇದಲ್ಲದೇ ಯುವರಾಜ ಕಾಲೇಜಿನ ಎನ್‌ಎಸ್‌ಎಸ್, ಎನ್‌ಸಿಸಿ ಕೆಡೆಟ್‌ಗಳನ್ನು ಕೂಡ ಅಭಿನಂದಿಸಲಾಯಿತು.