ಕನ್ನಡಪ್ರಭ ವಾರ್ತೆ ಮೇಲುಕೋಟೆ
10 ದಿನಗಳ ಕಾಲ ನಡೆಯುವ ಬ್ರಹ್ಮೋತ್ಸವದಲ್ಲಿ ಮಹಾವಿಷ್ಣುವಿನ ದರ್ಶನಕ್ಕೆ ಪ್ರಶಸ್ತವಾದ ಶನಿವಾರ 4ನೇ ದಿನವಾದ ನ.9ರಂದು ರಾತ್ರಿ 7ಗಂಟೆಗೆ ವಜ್ರಖಚಿತ ರಾಜಮುಡಿ ಉತ್ಸವ ನಡೆಯಲಿದೆ. 6ನೇ ದಿನ ನ.11ರಂದು ಮಕ್ಕಳಭಾಗ್ಯ ಕರುಣಿಸುವ ಚೆಲುವನಾರಾಯಣಸ್ವಾಮಿ ಉತ್ಸವ ಎಂದೇ ಪ್ರಖ್ಯಾತವಾದ ತೊಟ್ಟಿಲಮಡು ಜಾತ್ರೆ, ಅಷ್ಟತೀರ್ಥೋತ್ಸವ ನಡೆಯಲಿದೆ.
ವಿಶಿಷ್ಟ ಸಂಪ್ರದಾಯ, ಪರಂಪರೆ ಆಚರಣೆಯಲ್ಲಿ ಭಾಗಿಯಾದ ಭಕ್ತರಿಗೆ ಅಪೇಕ್ಷಿತ ಫಲ ದೊರೆಯುತ್ತಿರುವ ಕಾರಣ ಭಕ್ತರ ನಂಬಿಕೆಗೆ ಇಂಬು ದೊರೆಯುತಿದೆ. ವೈದ್ಯರೂ ಸಹ ಕೈಚೆಲ್ಲಿದ ಎಷ್ಟೋ ಪ್ರಕರಣಗಳ ದಂಪತಿಗಳಿಗೆ ತೊಟ್ಟಿಲಭಾಗ್ಯ ದೊರೆತಿರುವುದು ಉತ್ಸವದಲ್ಲಿ ಭಾಗಿಯಾದ ದಂಪತಿಗಳಿಗೆ ಅನುಭವಕ್ಕೆ ಬರುತ್ತಿರುವ ಕಾರಣ ಮಹೋತ್ಸವದಲ್ಲಿ ಹರಕೆ ಕಟ್ಟಿಕೊಂಡು ಭಾಗವಹಿಸುವ ದಂಪತಿಗಳ ಸಂಖ್ಯೆ ಹೆಚ್ಚುತ್ತಿದೆ.ಬಹುಕಾಲ ಮಕ್ಕಳಾಗದ ದಂಪತಿಗಳು ಮತ್ತು ಮುದ್ದಾದ ಆರೋಗ್ಯಕರ ಕಂದಮ್ಮ ಅಪೇಕ್ಷಿಸುವ ನವದಂಪತಿಗಳು ಅನುರೂಪ ಜೋಡಿ ಬಯಸುವವರು ವಿಶೇಷವಾಗಿ ಹರಕೆ ಕಟ್ಟಿಕೊಂಡು ಮಡಿಲು ತುಂಬಿ ಮಹೋತ್ಸವದಲ್ಲಿ ಭಾಗಿಯಾಗುವುದು ತೊಟ್ಟಿಲಮಡು ಜಾತ್ರೆಯ ವಿಶೇಷವಾಗಿದೆ.
ಉತ್ಸವದ ಮಧ್ಯೆ ಸಾಗುತ್ತಿದ್ದರೆ ಈ ಶ್ರಮ ಗಣನೆಗೆ ಬರುವುದಿಲ್ಲ. ನಡೆಯಲು ಸಾಧ್ಯವಾಗದ ದಂಪತಿಗಳು ಪಂಚಕಲ್ಯಾಣಿ ಮತ್ತು ವೈಕುಂಠ ಗಂಗೆಯಲ್ಲಿ ಸ್ನಾನಮಾಡಿ ಅಲ್ಲಿರುವ ತೊಟ್ಟಿಲಿಗೆ ಪೂಜೆ ಮಾಡಿ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎನ್ನುತ್ತಾರೆ ಧಾರ್ಮಿಕ ಚಿಂತಕರು.
ಬೆಟ್ಟ ಗುಡ್ಡಗಳ ಮಧ್ಯೆ ಅಷ್ಟ ತೀರ್ಥಗಳು:
ತೊಟ್ಟಿಲಮಡು ಜಾತ್ರಾ ವಿಶೇಷಗಳು:
ಋಷಿಮುನಿಗಳು ಭಗವಂತನನ್ನು ಧ್ಯಾನಮಾಡಿ ಸಾಕ್ಷಾತ್ಕಾರ ಪಡೆದ ಎಂಟು ಪವಿತ್ರ ತೀರ್ಥಗಳಲ್ಲಿ ಸ್ವಾಮಿ ಪಾದುಕೆಗೆ ಅಭಿಷೇಕ ನೆರವೇರುವ ಆಚರಣೆಯೇ ಅಷ್ಟ ತೀರ್ಥೋತ್ಸವವಾಗಿದೆ. ಉತ್ಸವ ಆರಂಭದವೇಳೆ ಕಲ್ಯಾಣಿಯಲ್ಲಿ ಪ್ರಥಮ ಅಭಿಷೇಕ ನೆರವೇರಿದರೆ ಸಂಜೆ ವೈಕುಂಠ ಗಂಗೆಯಲ್ಲಿ ಕೊನೆ ಅಭಿಷೇಕ ನಡೆಯುತ್ತದೆ. ನಂತರ ಶ್ರೀಯೋಗಾನರಸಿಂಹಸ್ವಾಮಿ ಬೆಟ್ಟದ ಗಿರಿಪ್ರದಕ್ಷಿಣೆಯೊಂದಿಗೆ ಅಷ್ಟತೀರ್ಥೋತ್ಸವ ಮುಕ್ತಾಯವಾಗಲಿದೆ.
ಇಲ್ಲಿ ಬರುವ ಸಾವಿರಾರು ಭಕ್ತರಿಗೆ ಮೇಲುಕೋಟೆಯ ಬ್ರ್ಯಾಂಡ್ ಕದಂಬ ಮತ್ತು ದದಿಯೋದನ ಪ್ರಸಾದ ನೀಡಲಾಗುತ್ತದೆ. ದೇವಾಲಯ ಹಾಗೂ ವಿವಿಧ ಜನಾಂಗದವರು ಈ ಪ್ರಸಾದ ತಯಾರಿಸಿ ಭಕ್ತರಿಗೆ ನೀಡುತ್ತಾರೆ. ಹೆಬ್ಬಂಡೆಗಳ ಮೇಲೆ ಕುಳಿತು ಪ್ರಸಾದ ಸವಿಯುವುದೇ ವಿಶೇಷ ಅನುಭವ ನೀಡುತ್ತದೆ.