ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ಮ್ಯಾರಥಾನ್ ಓಟ 21 ಕಿ.ಮೀ. ಹಾಲ್ಫ್ ಓಟ, 10 ಕಿ.ಮೀ., 5 ಕಿ.ಮೀ. ಹಾಗೂ 3 ಕಿ.ಮೀ. ಎಂಬ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಈ ಪೈಕಿ 21 ಕಿ.ಮೀ. 18ವರ್ಷ ಮೇಲ್ಪಟ್ಟವರಿಗೆ ಹಾಗೂ 10, 5, 3 ಕಿ.ಮೀ. 15 ವರ್ಷ ಮೇಲ್ಪಟ್ಟವರಿಗೆ ನಡೆಯಲಿದೆ. ಒಟ್ಟು ಮ್ಯಾರಥಾನ್ ಓಟಕ್ಕೆ ಬಹುಮಾನವಾಗಿ ರೂ. 3.40 ಲಕ್ಷ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್ ಹಾಗೂ ಮೆಡಲ್ ನೀಡಲಾಗುವುದು.
ಕನ್ನಡಪ್ರಭವಾರ್ತೆ ಪುತ್ತೂರು
ಪುತ್ತೂರನ್ನು ರನ್ನಿಂಗ್ ಮ್ಯಾಪ್‌ನಲ್ಲಿ ಗುರುತಿಸುವ ಉದ್ದೇಶದಿಂದ ದ ಪುತ್ತೂರು ಕ್ಲಬ್ ವತಿಯಿಂದ ಬಾಬ್ ಕರ‍್ಡ್ ಸಹಕಾರದೊಂದಿಗೆ ಆಯೋಜಿಸಲಾದ ಮಿನಿ ಮ್ಯಾರಥಾನ್ ಓಟ `ಬಲೆ ಬಲಿಪುಗ ಜುಲೈ 6 ರಂದು ಪುತ್ತೂರಿನಲ್ಲಿ ನಡೆಯಲಿದೆ ಎಂದು ದ ಪುತ್ತೂರು ಕ್ಲಬ್ ಅಧ್ಯಕ್ಷ ಡಾ.ದೀಪಕ್ ರೈ ತಿಳಿಸಿದ್ದಾರೆ.ಅವರು ಶುಕ್ರವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆಯುವ ಮ್ಯಾರಥಾನ್ ಓಟ 21 ಕಿ.ಮೀ. ಹಾಲ್ಫ್ ಓಟ, 10 ಕಿ.ಮೀ., 5 ಕಿ.ಮೀ. ಹಾಗೂ 3 ಕಿ.ಮೀ. ಎಂಬ ನಾಲ್ಕು ವಿಭಾಗಗಳಲ್ಲಿ ನಡೆಯಲಿದೆ. ಈ ಪೈಕಿ 21 ಕಿ.ಮೀ. 18ವರ್ಷ ಮೇಲ್ಪಟ್ಟವರಿಗೆ ಹಾಗೂ 10, 5, 3 ಕಿ.ಮೀ. 15 ವರ್ಷ ಮೇಲ್ಪಟ್ಟವರಿಗೆ ನಡೆಯಲಿದೆ. ಒಟ್ಟು ಮ್ಯಾರಥಾನ್ ಓಟಕ್ಕೆ ಬಹುಮಾನವಾಗಿ ರೂ. 3.40 ಲಕ್ಷ ಬಹುಮಾನ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಸರ್ಟಿಫಿಕೇಟ್ ಹಾಗೂ ಮೆಡಲ್ ನೀಡಲಾಗುವುದು. ಮ್ಯಾರಥಾನ್ ಓಟದಲ್ಲಿ ಜಿಲ್ಲೆ, ರಾಜ್ಯ, ದೇಶದಿಂದ ಸುಮಾರು 1000- 1500 ಅಥ್ಲಿಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಓಟದಲ್ಲಿ ಪಾಲ್ಗೊಳ್ಳುವವರಿಗೆ ಸಂಪೂರ್ಣ ಆನ್‌ಲೈನ್ ನಲ್ಲಿ ನೋಂದಾವಣೆ ಪ್ರಕ್ರಿಯೆ ನಡೆಯಲಿದೆ. ಓಟ ನಡೆಯುವ ರಸ್ತೆಯುದ್ದಕ್ಕೂ ಇಲೆಕ್ಟ್ರಿಕಲ್ ಟೈಮರ್ ಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.ಮ್ಯಾರಥಾನ್ ಓಟ ಬೆಳಗ್ಗೆ 6 ಗಂಟೆಗೆ 21 ಕಿ.ಮೀ. ಓಟ ದ ಪುತ್ತೂರು ಕ್ಲಬ್ ನಿಂದ ಆರಂಭಗೊಂಡು ರೈಲ್ವೇ-ಬೈಪಾಸ್-ದರ್ಬೆ-ಬೊಳುವಾರು-ಉಪ್ಪಿನಂಗಡಿ ರಸ್ತೆ ಮೂಲಕ ತೆರಳಿ ಸೇಡಿಯಾಪು ತಲುಪಿ ಅಲ್ಲಿಂದ ಪುತ್ತೂರು ಕ್ಲಬ್ ಗೆ ಪುನಃ ಹಿಂತಿರುಗಲಿದೆ. ಪ್ರತಿ 15ನಿಮಿಷ ಬಿಟ್ಟು ಉಳಿದ ವಿಭಾಗ ಆರಂಭಗೊಳ್ಳಲಿದೆ. ಎಲ್ಲಾ ವಿಭಾಗಗಳಿಗೂ ಇದೇ ಮಾರ್ಗಸೂಚಿ ನೀಡಲಾಗಿದೆ. 3 ಕಿ.ಮೀ. ವಿಭಾಗದಲ್ಲಿ ಮೊದಲ 300 ಮಂದಿಗೆ ಉಚಿತವಾಗಿ ಅವಕಾಶ ನೀಡಲಾಗಿದೆ. ಉಳಿದಂತೆ ಸ್ಪರ್ಧಿಗಳಿಗೆ ನೋಂದಾವಣೆ ಶುಲ್ಕ ವಿಧಿಸಲಾಗಿದೆ. ಓಟಕ್ಕಾಗಿ ಈಗಾಗಲೇ 125 ಮಂದಿ ಸ್ವಯಂ ಸೇವಕರನ್ನು ನೇಮಿಸಲಾಗಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ವೆಬ್ ಪೀಪಲ್‌ನ ಶರತ್, ಬಿಂದು ಕಂಪೆನಿಯ ಮಾರುಕಟ್ಟೆ ವಿಭಾಗದ ಹರಿಪ್ರಸಾದ್, ಪುತ್ತೂರು ಕ್ಲಬ್ ಉಪಾಧ್ಯಕ್ಷ ದೀಪಕ್ ಕೆ.ಪಿ., ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಕ ಎಲಿಯಾಸ್ ಪಿಂಟೋ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.