ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ 2025–26ನೇ ಸಾಲಿನ ಮೂರನೇ ತ್ರೈಮಾಸಿಕ ಡಿಸಿಸಿ–ಡಿ.ಎಲ್.ಆರ್.ಸಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೈಲಹೊಂಗಲ ಮತ್ತು ಸವದತ್ತಿ ತಾಲೂಕುಗಳಲ್ಲಿ ಈ ಬಗ್ಗೆ ರೈತರಿಂದ ಬೇಡಿಕೆ ಇದೆ. ಇದರಿಂದ ರೈತರು ಬೆಳೆಯುವ ತರಕಾರಿ, ಹಣ್ಣುಗಳು ಹಾಗೂ ಬೆಳೆಗಳಿಗೆ ಅನುಕೂಲವಾಗಲಿದೆ. ಅಲ್ಲದೇ,
ಬೆಳಗಾವಿ ನಗರದ ಎಪಿಎಂಸಿ ಆವರಣದಲ್ಲಿ ಇತ್ತೀಚೆಗೆ ಪ್ರಾರಂಭಿಸಲಾಗಿರುವ ಕೋಲ್ಡ್ ಸ್ಟೋರೇಜ್‌ನಿಂದ ಉಂಟಾಗಿರುವ ಅನುಕೂಲಗಳ ಬಗ್ಗೆ ಮಾಹಿತಿ ಪಡೆದು, ಸಮರ್ಪಕವಾಗಿ ನಿರ್ವಹಿಸುವಂತೆ ಸೂಚಿಸಿದರು.ಬೀದಿ ಬದಿ ವ್ಯಾಪಾರಿಗಳಿಗೆ ನೇರವಾಗಿ ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುತ್ತಿದ್ದು, ಇದರಿಂದ ಅನೇಕ ವ್ಯಾಪಾರಸ್ಥರು ಪ್ರಯೋಜನ ಪಡೆದಿದ್ದಾರೆ. ಹೀಗಾಗಿ, ಅಗತ್ಯವಿರುವ ವ್ಯಾಪಾರಿಗಳಿಗೆ ಈ ಯೋಜನೆಯಡಿ ಸಾಲ ದೊರಕಿಸಿಕೊಡಿ. ಜೊತೆಗೆ ಪಿಎಂ ವಿಶ್ವಕರ್ಮ, ಪಿಎಂ ಇಜಿಪಿ, ಎನ್.ಎಲ್.ಎಮ್, ಎಸ್.ಎಚ್.ಜಿ ಯೋಜನೆಯಡಿ ಕೂಡ ಅರ್ಹರಿಗೆ ಸೌಲಭ್ಯಗಳನ್ನು ಒದಗಿಸುವಂಯೆ ಸೂಚನೆ ನೀಡಿದರು.ಇತ್ತೀಚೆಗೆ ಎಟಿಎಂ ದರೋಡೆ ಹಾಗೂ ಗ್ರಾಹಕರಿಗೆ ಅಪರಿಚಿತರಿಂದ ತೊಂದರೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಬ್ಯಾಂಕುಗಳು ಸಂಬಂಧಿಸಿದ ಎಟಿಎಮ್ ಕೇಂದ್ರಗಳಲ್ಲಿ ಸೆಕ್ಯುರಿಟಿ ಗಾರ್ಡ್‌ಗಳನ್ನು ನಿಯೋಜಿಸಬೇಕು. ಗ್ರಾಹಕರಿಗೆ ತೊಂದರೆಯಾಗದಂತೆ ತಾಂತ್ರಿಕ ವ್ಯವಸ್ಥೆ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.ಬಿ.ಸಿ ಸಖಿಗಳನ್ನು ನಿಯೋಜಿಸಿ
----ಕೋಟ್‌ಬ್ಯಾಂಕಿಂಗ್ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಸಮರ್ಪಕವಾಗಿ ತಲುಪಿಸುವ ಉದ್ದೇಶದಿಂದ ಎಲ್ಲಾ ಸದಸ್ಯ ಬ್ಯಾಂಕ್‌ಗಳು ಶಾಖೆಗಳ ತೆರೆಯುವಿಕೆಗೆ ಸಂಬಂಧಪಟ್ಟ ಅರ್ಜಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಜೊತೆಗೆ ಬಾಕಿ ಇರುವ ಎಲ್ಲಾ ಪ್ರಾಯೋಜಿತ ಯೋಜನೆಗಳ ಅರ್ಜಿಗಳನ್ನು ಕೂಡ ತ್ವರಿತವಾಗಿ ಪ್ರಕ್ರಿಯೆಗೊಳಿಸಿ ಪೂರೈಸಬೇಕು.ರಾಹುಲ್ ಶಿಂಧೆ, ಜಿಪಂ ಸಿಇಒ