ಕನ್ನಡಪ್ರಭ ವಾರ್ತೆ ಮಾಲೂರು
ನಗರದ ನಗರಸಭೆ ರಸ್ತೆಯ ಅಂಗಡಿಗಳಿಗೆ ಭೇಟಿ ನೀಡಿ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ೨ ಸ್ಲ್ಯಾಬ್ಗಳ ಜಿಎಸ್‌ಟಿ ಸೌಲಭ್ಯ ಗ್ರಾಹಕರಿಗೆ ತಲುಪುತ್ತಿದೆಯೇ ಇಲ್ಲವೇ ಎಂಬುದರ ಮಾಹಿತಿ ಪಡೆದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಮಾತನಾಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಾತಂತ್ರ‍್ಯ ದಿನದಂದು ಕೆಂಪುಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ನವರಾತ್ರಿ ಹಬ್ಬಕ್ಕೆ ಸಾರ್ವಜನಿಕರಿಗೆ ಸಿಹಿ ಸುದ್ದಿ ನೀಡುವುದಾಗಿ ಹೇಳಿದ್ದರು, ಅದರಂತೆ ನವರಾತ್ರಿ ಮೊದಲನೇ ದಿನವೇ ಜಿಎಸ್‌ಟಿ ನಾಲ್ಕು ಸ್ಲ್ಯಾಬ್‌ಗಳಿಂದ ಎರಡು ಸ್ಲ್ಯಾಬ್‌ಗಳಿಗೆ ಇಳಿಸಿ ಹೆಚ್ಚಿನ ಅವಕಾಶ ಕಲ್ಪಿಸಿದ್ದಾರೆ ಎಂದರು.
ಜಿಎಸ್‌ಟಿ ಸೌಲಭ್ಯ ಗ್ರಾಹಕರಿಗೆ ತಲುಪುತ್ತಿದೆ, ಇಲ್ಲವೇ ಎಂಬುದನ್ನು ಅಂಗಡಿಗಳ ಬಳಿ ತೆರಳಿ ವ್ಯಾಪಾರಸ್ಥರು ಹಾಗೂ ಗ್ರಾಹಕರ ಬಳಿ ಮಾಹಿತಿ ಪಡೆದು ಜಾಗೃತಿ ಮೂಡಿಸಲಾಗುತ್ತಿದೆ ಎಂದ ಮಲ್ಲೇಶ್ ಬಾಬು ಅವರು, ಜೆಡಿ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಜಿಎಸ್‌ಟಿ ಬಗ್ಗೆ ಹೆಚ್ಚು ಪ್ರಚಾರಪಡಿಸಿ ಅರಿವು ಮೂಡಿಸುವಂತೆ ಹೇಳಿದರು.ಜಿಪಂ ಮಾಜಿ ಸದಸ್ಯ ಜೆಡಿಎಸ್ ಮುಖಂಡ ಜಿ.ಇ.ರಾಮೇಗೌಡ ಮಾತನಾಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಟಿ.ಪಿ.ಕೃಷ್ಣಪ್ಪ, ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಬಲ ರಾಜು, ಬೆಳ್ಳಾವಿ ಸೋಮಣ್ಣ, ನಗರಸಭೆ ಸದಸ್ಯ ವೇಮನ, ಪುಟ್ಟಸ್ವಾಮಿ, ಅನಿತಾ ನಾಗರಾಜು, ಮುಖಂಡರಾದ ರಾಘವೇಂದ್ರ, ವೇಣುಗೋಪಾಲ್, ರಮೇಶ್, ವೆಂಕಟೇಶ್, ವೆಂಕಟಗಿರಿಯಪ್ಪ, ಮುನಿರಾಜು, ಲವ ಕುಶ, ಇನ್ನಿತರರು ಹಾಜರಿದ್ದರು.