- ಅಕ್ಕ ಮಹಾದೇವಿ ರಸ್ತೆಯ ಸಿಟಿ ಸೆಂಟ್ರಲ್ ಹಾಸ್ಪಿಟಲ್‌ನಲ್ಲಿ ಕಾರ್ಯಕ್ರಮ: ವ್ಯವಸ್ಥಾಪಕ ಶ್ರೀನಂದನ್ ರಾವ್ ಮಾಹಿತಿ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ ದಾವಣಗೆರೆಯಲ್ಲಿ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್ ನಿಂದ ನೂತನವಾಗಿ ಎಂಆರ್‌ಐ ಮತ್ತು ಸಿ.ಟಿ. ಸ್ಕ್ಯಾನ್ ಯಂತ್ರಗಳ ಉದ್ಘಾಟನಾ ಸಮಾರಂಭವನ್ನು ಅಕ್ಟೋಬರ್ 2ರಂದು ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆ ವ್ಯವಸ್ಥಾಪಕ ಶ್ರೀನಂದನ್ ರಾವ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ನಗರದ ಪಿ.ಜೆ. ಬಡಾವಣೆಯ ಅಕ್ಕ ಮಹಾದೇವಿ ರಸ್ತೆಯಲ್ಲಿರುವ ನೂತನ ಸಿಟಿ ಸೆಂಟ್ರಲ್ ಹಾಸ್ಪಿಟಲ್‌ನಲ್ಲಿ ಸಿಮೆನ್ಸ್ ಕಂಪನಿಯ ನೂತನ 1.5 ಟೆಸ್ಲಾ ಸಾಮರ್ಥ್ಯದ ಎಂ.ಆರ್.ಐ. ಹಾಗೂ ಅದೇ ಕಂಪನಿಯ 32 ಕ್ರೈಸ್ ಸಾಮರ್ಥ್ಯದ ಸಿ.ಟಿ. ಸ್ಕ್ಯಾನ್ ಯಂತ್ರಗಳನ್ನು ಅಳವಡಿಸಲಾಗಿದೆ ಎಂದರು.ಅಂದು ಮಧ್ಯಾಹ್ನ 12.30ಕ್ಕೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್.ಎಲ್. ಸುಬ್ಬರಾವ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರ ಸ್ವಾಮಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹಿರಿಯ ರೇಡಿಯಾಲಜಿಸ್ಟ್ ಡಾ. ಎಸ್.ಆರ್. ಹೆಗಡೆ, ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ದಾವಣಗೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಹೃದಯದ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ಅಳವಡಿಸಿದ್ದು, ಸಾರ್ವಜನಿಕರ ಆರೋಗ್ಯ ಕಾಳಜಿಯತ್ತ ಮತ್ತೊಂದು ಸೇವೆಯ ಸೇರ್ಪಡೆಯನ್ನು ಸಿಟಿ ಸೆಂಟ್ರಲ್ ಆಸ್ಪತ್ರೆ ಮಾಡಿಕೊಳ್ಳುತ್ತಿದೆ. ಸುಧೀರ್ಘ 25 ವರ್ಷಗಳ ಅವಿರತ ಆರೋಗ್ಯ ಸೇವೆ (24+7) ಒದಗಿಸುತ್ತಾ ಬಂದಿರುವ ದಾವಣೆಗೆರೆಯ ಏಕೈಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿದೆ. ಅತಿ ತುರ್ತು ಆರೋಗ್ಯದ ಸೇವೆ ಹಾಗೂ ಹೃದಯದ ಆರೋಗ್ಯ ಸೇವೆಗಳಿಗೆ ಹೆಸರುವಾಸಿಯಾಗಿದೆ ಎಂದರು.- - -
(ಬಾಕ್ಸ್) * 10,000ಕ್ಕೂ ಹೆಚ್ಚು ತೆರೆದ ಹೃದಯದ ಶಸ್ತ್ರಚಿಕಿತ್ಸೆ 25 ವರ್ಷಗಳ ಸೇವೆಯಲ್ಲಿ 10,000ಕ್ಕೂ ಹೆಚ್ಚು ತೆರೆದ ಹೃದಯದ ಶಸ್ತ್ರಚಿಕಿತ್ಸೆ, 15,000ಕ್ಕೂ ಹೆಚ್ಚು ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ. 1,00,000 ಕ್ಕೂ ಹೆಚ್ಚು ಹೊರರೋಗಿಗಳ ಪರೀಕ್ಷೆಯನ್ನು ನಡೆಸಲಾಗಿದೆ. ಕೊರೋನಾ ಹಾವಳಿ ಸಂದರ್ಭ ಇಡೀ ಆಸ್ಪತ್ರೆಯನ್ನು ಕೊರೋನಾ ಸೋಂಕಿತರ ಚಿಕಿತ್ಸೆಗೆ ಮೀಸಲಿಟ್ಟು ಉತ್ತಮ ಸೇವೆ ಒದಗಿಸಿದ ಹೆಗ್ಗಳಿಕೆ ನಮ್ಮದಾಗಿದೆ. ಎಲ್ಲ ರೀತಿಯ ಸರ್ಕಾರಿ ಆರೋಗ್ಯ ಯೋಜನೆಗಳು, ಆರೋಗ್ಯ ವಿಮಾ ಯೋಜನೆಗಳ ಸೌಲಭ್ಯಗಳನ್ನು ಹೊಂದಿದೆ. ಸುಮಾರು 15 ಹಾಸಿಗೆಗಳ ತೀವ್ರ ನಿಗಾ ಘಟಕ ಹೊಂದಿದ ಆಸ್ಪತ್ರೆ ಇದಾಗಿದೆ ಎಂದು ಶ್ರೀನಂದನ್ ರಾವ್ ವಿವರಣೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಬಿ.ಮಧು, ಸೂರಜ್ ಇದ್ದರು.
- - --29ಕೆಡಿವಿಜಿ36:
ದಾವಣಗೆರೆಯ ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ಎಂಆರ್‌ಐ, ಸಿಟಿ ಸ್ಕ್ಯಾನ್ ಯಂತ್ರಗಳ ಉದ್ಘಾಟನೆ ಕುರಿತು ಶ್ರೀನಂದನ್ ರಾವ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.