ಗುರು ರಾಘವೇಂದ್ರರು ಭಕ್ತರ ಪಾಲಿನ ಕಾಮಧೇನು: ಶ್ರೀಗಳು

KannadaprabhaNewsNetwork |  
Published : Dec 16, 2023, 02:00 AM IST
ಸೇಡಂ ಪಟ್ಟಣದ ಕೋಡ್ಲಾ ರಸ್ತೆಯಲ್ಲಿರುವ ಲಕ್ಷ್ಮೀ ನಗರ ಬಡಾವಣೆಯ ನಂಜನಗೂಡು ರಾಘವೇಂದ್ರ ಸ್ವಾಮಿಗಳವರ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದ ಸುಬುಧೇಂದ್ರ ಶ್ರೀಪಾದಂಗಳವರು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಸೇಡಂ ಪಟ್ಟಣದಲ್ಲಿ ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ

ಕನ್ನಡಪ್ರಭ ವಾರ್ತೆ ಸೇಡಂ

ನಂಬಿದ ಭಕ್ತರ ಕಷ್ಟಗಳನ್ನು ನಿವಾರಿಸಿ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಶ್ರೀಗುರು ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಕಲ್ಪ ವೃಕ್ಷದಂತೆ ಇದ್ದಾರೆ ಎಂದು ರಾಘವೇಂದ್ರ ಸ್ವಾಮಿಗಳ ಮಠದ ಸುಬುಧೇಂದ್ರ ಶ್ರೀಪಾದಂಗಳವರು ಹೇಳಿದರು.

ಪಟ್ಟಣದ ಕೋಡ್ಲಾ ರಸ್ತೆಯಲ್ಲಿರುವ ಲಕ್ಷ್ಮೀ ನಗರ ಬಡಾವಣೆಯ ನಂಜನಗೂಡು ರಾಘವೇಂದ್ರ ಸ್ವಾಮಿಗಳವರ ಮೃತ್ತಿಕಾ ಬೃಂದಾವನ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ‌ ನೀಡಿದರು.

ಭಕ್ತರು ಶ್ರದ್ಧೆ ಭಕ್ತಿಯಿಂದ ರಾಘವೇಂದ್ರ ಸ್ವಾಮಿಗಳ ಸ್ಮರಣೆ ಮಾಡಿದಾಗ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಕಳೆಯುತ್ತಾರೆ. ನಾವು ಭಗವಂತನಲ್ಲಿ ಬೇಡುವ ಮುನ್ನವೇ ನಮ್ಮ ಇಷ್ಟರ್ಥಗಳನ್ನು ಈಡೇರಿಸುತ್ತಾರೆ. ಕೇಳುವ ಅಗತ್ಯವೇ ಇಲ್ಲ. ರಾಘವೇಂದ್ರ ಮಹಾಸ್ವಾಮಿಗಳು ಮಾತೃವಹೃದಯಿಗಳಾಗಿದ್ದಾರೆ.

ಸಜ್ಜನರಿಗೆ ನಂಬಿದ ಭಕ್ತರಿಗೆ ಅನುಗ್ರಹ ಕೊಡುವ ಹಾಗೂ ಬೇಡಿದ್ದನ್ನು ಕೊಡುವ ಮಹಾಗುರುಗಳಾಗಿದ್ದಾರೆ. ಭವದ ರೋಗ ಕಳೆಯುವ ಕರುಣಾ ಮಾಯಿ. ಇಹ ಪರಗಳಲ್ಲಿ ರಾಘವೇಂದ್ರರು ರಕ್ಷಣೆ ನೀಡಲಿದ್ದಾರೆ. ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಸೇಡಂನಲ್ಲಿ ಮಠ ಸ್ಥಾಪಿಸಲಾಗಿದೆ. ಇಲ್ಲಿ ನಿರಂತರವಾಗಿ ಧಾರ್ಮಿಕ, ಸಾಂಸ್ಕೃತಿಕ, ಶುಭ ಸಮಾರಂಭಗಳು ನಡೆಯಲಿ. ಎಲ್ಲಾ ಭಕ್ತರು ಇಲ್ಲಿಗೆ ಬಂದು ರಾಘವೇಂದ್ರರ ದರ್ಶನ ಪಡೆದು ಈ ಮಠದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಮಠದ ಸೇವಾ ಕಾರ್ಯಗಳನ್ನು ಸುಗಮಗೊಳಿಸಲು ಮ್ಯಾನೇಜರ್ ವಿನೋದಕುಮಾರ ಅವರನ್ನು ನೇಮಿಸಲಾಗಿದೆ. ಹಾಗೂ ಓರ್ವ ಅರ್ಚಕರನ್ನು ನೇಮಿಸಲಾಗಿದೆ ಎಂದರು.

ಪುತ್ತೂರು ನರಸಿಂಹನಾಯಕ ದಾಸವಾಣಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಅಧ್ಯಕ್ಷ ಕಾಶೀನಾಥರಾವ ಕುಲಕರ್ಣಿ, ಸಂತೋಷ ಕುಲಕರ್ಣಿ, ರಾಮಚಂದ್ರ ಜೋಶಿ, ಗುಂಡೇರಾವ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಡಾ.ವಾಸುದೇವ ಅಗ್ನಿಹೋತ್ರಿ, ಜಗನ್ನಾಥ ದೇಶಕ, ಪ್ರಭಾಕರ ಜೋಶಿ, ಮೋಹನಕುಮಾರ ರಂಜೋಳಕರ್, ರಾಜಕುಮಾರ್ ಕೆ, ವಸಂತ ದೇಶಕ, ಬಿಂದು ಮಾಧವ ಕುಲಕರ್ಣಿ, ನಾರಾಯಣರಾವ ಆಡಕಿ,ವೆಂಕಟೇಶ ಪಾಟೀಲ, ನಾಗೇಶ್ವರರಾವ ಮಾಲಿಪಾಟೀಲ, ಪ್ರದೀಪ ಜೋಶಿ ಊಡಗಿ, ಶ್ರೀನಿವಾಸ ದೇಶಪಾಂಡೆ ಆಡಕಿ, ಪ್ರಕಾಶ ಪಾಟೀಲ, ಶ್ರೀನಿವಾಸ ಕುಲಕರ್ಣಿ, ಮಧುಸೂದನ ಜೋಶಿ, ವಸಂತರಾವ ಕುಲಕರ್ಣಿ, ಗಂಗಾಧರ ಕುಲಕರ್ಣಿ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.ರಾಘವೇಂದ್ರ ಸ್ವಾಮಿಗಳು ಕರುಣಾಮಯಿಗಳು:

ಇತ್ತೀಚೆಗೆ ಸೂಪರ್ ಮಾರ್ಕೆಟ್ ಸಂಸ್ಕೃತಿ ಹೆಚ್ಚಿದೆ. ಒಂದು ಸೂಪರ್ ಮಾರ್ಕೆಟ್ ಅಂಗಡಿಗೆ ಹೋದರೆ ಅಲ್ಲಿ ನಮಗೆ ಬೇಕಾಗಿರುವ ಎಲ್ಲಾ ದೈನಂದಿನ ವಸ್ತುಗಳು ಸಿಗುತ್ತವೆ. ಹಾಗೆಯೇ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಚರಣದಲ್ಲಿ ಭಕ್ತಿಯಿಂದ ಸಮರ್ಪಿಸಿಕೊಂಡರೆ ಜೀವನದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ರಾಘವೇಂದ್ರ ಸ್ವಾಮಿಗಳು ಕರುಣಾಮಯಿಗಳಾಗಿದ್ದಾರೆ. ಋಣ ಬಾಧೆ, ವೈವಾಹಿಕ ಸಮಸ್ಯೆ, ಸಂತಾನ, ಭೂತ ಪ್ರೇತಗಳ ಕಾಟ, ಅನಾರೋಗ್ಯ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ರಾಘವೇಂದ್ರ ಸ್ವಾಮಿಗಳು ಪರಿಹರಿಸಲಿದ್ದಾರೆ. ಜೀವನದಲ್ಲಿ ಸುಖ ಸಂತೋಷ ನೆಮ್ಮದಿ ಕರುಣಿಸಲಿದ್ದಾರೆ.

- ಸುಬುಧೇಂದ್ರ ಶ್ರೀಪಾದಂಗಳು, ಮಂತ್ರಾಲಯಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಭಾಗಿ:

ಪ್ರತಿಷ್ಠಾಂಗ ಕಲಶ ಸ್ಥಾಪನೆ, ಶ್ರೀಗಳವಾರಿಂದ ಷೋಡಶೋಪಚಾರ ಪುಜೆ, ಪ್ರತಿಮೆಗಳಿಗೆ ಬೃಂದಾವನಕ್ಕೆ ಕಲಶಾಭಿಷೇಕ, ಮೂಲಮೃತ್ತಿಕಾ ಸ್ಥಾಪನೆ, ಶಾಲಗ್ರಾಮ ಸ್ಥಾಪನೆ, ಅಷ್ಟಬಂಧನ ಕಲಶಾಭಿಷೇಕ, ಮಾತೃಕಾನ್ಯಾಸ, ತತ್ತ್ವಾನ್ಯಾಸ, ಅಷ್ಟ ಮಹಾ ಮಂತ್ರಗಳ ಲಕ್ಷ್ಮೀ ಮುಖ್ಯ ಪ್ರಾಣದೇವರ ಶ್ರೀ ರಾಘವೇಂದ್ರ ಅಷ್ಟಾಕ್ಷರ ಮಂತ್ರಗಳ ಪುರಸ್ಸಾರ ಬಿಂಬವಾಹನೆ ಪ್ರತಿಷ್ಠಾಪನೆ ಧಾರ್ಮಿಕ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಪತ್ನಿ ಸಮೇತರಾಗಿ ಉಪಸ್ಥಿತಿ ಇದ್ದರು. ಹಾಗೂ ಅವರ ಸಹೋದರ ಬಸವರಾಜ ಪಾಟೀಲ ಊಡಗಿ ಅವರೂ ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ