ಬೀದಿಬದಿ ವ್ಯಾಪಾರಿಗಳ ಹಿತಕಾಯಲು ನಗರಸಭೆ ಬದ್ಧ

KannadaprabhaNewsNetwork |  
Published : Mar 08, 2026, 01:15 AM IST
7ಕೆಆರ್ ಎಂಎನ್ 3.ಜೆಪಿಜಿರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರು ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಿದರು. | Kannada Prabha

ಸಾರಾಂಶ

ರಾಮನಗರ: ಮಳೆ, ಗಾಳಿ, ಬಿಸಿಲು ಎನ್ನದೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರ ಹಿತಕಾಪಾಡಲು ನಗರಸಭೆ ಬದ್ಧವಾಗಿದೆ. ನಗರಸಭೆ ಗೌರವವನ್ನು ವ್ಯಾಪಾರಿಗಳು ಕಾಪಾಡಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಕಿವಿಮಾತು ಹೇಳಿದರು

ರಾಮನಗರ: ಮಳೆ, ಗಾಳಿ, ಬಿಸಿಲು ಎನ್ನದೆ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರ ಹಿತಕಾಪಾಡಲು ನಗರಸಭೆ ಬದ್ಧವಾಗಿದೆ. ನಗರಸಭೆ ಗೌರವವನ್ನು ವ್ಯಾಪಾರಿಗಳು ಕಾಪಾಡಬೇಕು ಎಂದು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಕಿವಿಮಾತು ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಶನಿವಾರ ಬೀದಿ ಬದಿ ವ್ಯಾಪಾರಿಗಳಿಗೆ ನಗರಸಭೆ ವತಿಯಿಂದ 2025-26ನೇ ಸಾಲಿನ 250 ಗುರುತಿನ ಚೀಟಿಗಳು ಮತ್ತು 150 ಛತ್ರಿಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು. ಪಟ್ಟಣ ಪ್ರದೇಶದಲ್ಲಿ 1,530 ಕ್ಕೂ ಹೆಚ್ಚು ವ್ಯಾಪಾರಿಗಳು ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರಿಗೆ ದೀನದಯಾಳ್ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಜೀವನೋಪಾಯ ಅಭಿಯಾನ (ಡೇ ನಲ್ಮ್) ದಡಿ 1530 ಗುರುತಿನ ಚೀಟಿಗಳು ಮತ್ತು ನೆರಳಿನ ಆಶ್ರಯವನ್ನು ನೀಡಲು ಛತ್ರಿಗಳನ್ನು ನಗರಸಭೆ ವತಿಯಿಂದ ಉಚಿತವಾಗಿ ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.

ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ 2,585 ಬೀದಿ ಬದಿ ವ್ಯಾಪಾರಿಗಳಿಗೆ 4 ಕೋಟಿ 27 ಲಕ್ಷ ರು. ಸಾಲ ಸೌಲಭ್ಯಗಳನ್ನು ಒದಗಿಸಿದ್ದು, ಅದರಲ್ಲಿ 1,702 ವ್ಯಾಪಾರಿಗಳು ಮತ್ತು ಅವರ ಕುಟುಂಬಸ್ಥರಿಗೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಭೀಮಾ ವಿಮಾ ಯೋಜನೆಯಡಿ 2,219 ಬೀದಿ ಬದಿ ವ್ಯಾಪಾರಿಗಳಿಗೆ ವಿಮೆ ಮಾಡಿಸಲಾಗಿದೆ. ಪ್ರಧಾನಮಂತ್ರಿ ಜನ-ಧನ ಯೋಜನೆಯಡಿ 201 ವ್ಯಾಪಾಸ್ಥರಿಗೆ ಬ್ಯಾಂಕಿನಲ್ಲಿ ಜೀರೋ ಬ್ಯಾಲೆನ್ಸ್ ಖಾತೆಗಳನ್ನು ತೆರೆಯಲು ಅನುಕೂಲ ಕಲ್ಪಿಸಿದೆ ಎಂದು ತಿಳಿಸಿದರು.

ಬೀದಿ ಬದಿ ವ್ಯಾಪಾರಿಗಳಿಗೆ ಮತ್ತಷ್ಟು ಕಾರ್ಯಕ್ರಮ ಕೊಡಲು ನಾವು ಸಿದ್ದರಿದ್ದೇವೆ. ಆದರೆ ಪೊಲೀಸರು, ಬೀದಿ ಬದಿ ವ್ಯಾಪಾರಿಗಳು ರಸ್ತೆಗೆ ಬಂದು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವ ಬಗ್ಗೆ ದೂರು ಹೇಳುತ್ತಾರೆ. ಬೇರೆಯವರಿಗೆ ತೊಂದರೆ ಆಗದಂತೆ ವ್ಯಾಪಾರ ಮಾಡಿ, ನಗರಸಭೆ ಅಧಿಕಾರಿಗಳು ತೋರಿಸಿರುವ ಸ್ಥಳದಲ್ಲಿಯೇ ವ್ಯಾಪಾರ ಮಾಡಬೇಕು. ಸಾರ್ವಜನಿಕರಿಂದ ದೂರುಗಳು ಬಂದರೆ ನಗರಸಭೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ. ಅಂತಹ ವಾತಾವರಣ ಸೃಷ್ಡಿಸಿಕೊಳ್ಳಬೇಡಿ ಎಂದು ಕೆ.ಶೇಷಾದ್ರಿ ಎಚ್ಚರಿಕೆ ನೀಡಿದರು.

ಇದೇ ವೇಳೆ 2026-27ನೇ ಸಾಲಿನ ಬಜೆಟ್ ನಲ್ಲಿ ವಿವೇಕಾನಂದರ ಪುತ್ಥಳಿಗೆ 7 ಲಕ್ಷ ರುಪಾಯಿ ಅನುದಾನ ಮೀಸಲಿಟ್ಟಿರುವುದಕ್ಕೆ ಅಧ್ಯಕ್ಷ ಕೆ.ಶೇಷಾದ್ರಿ ಅವರನ್ನು ವಿದ್ಯಾರ್ಥಿ ಪರಿಷತ್ತು ಹಾಗೂ ಸಮಿತಿಯ ಮುಖಂಡರು ಸನ್ಮಾನಿಸಿದರು.

ಈ ವೇಳೆ ನಗರಸಭೆ ಸದಸ್ಯರಾದ ನರಸಿಂಹ, ನಿಜಾಮುದ್ದೀನ್ ಷರೀಫ್, ಆರೀಫ್ , ಆಯುಕ್ತ ಡಾ.ಜಯಣ್ಣ, ಸಮುದಾಯ ಸಂಘಟಕ ಅಧಿಕಾರಿ ನಟರಾಜುಗೌಡ ಮತ್ತಿತರರು ಹಾಜರಿದ್ದರು.

7ಕೆಆರ್ ಎಂಎನ್ 3.ಜೆಪಿಜಿ

ರಾಮನಗರ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಶೇಷಾದ್ರಿ ಬೀದಿ ಬದಿ ವ್ಯಾಪಾರಿಗಳಿಗೆ ಛತ್ರಿಗಳನ್ನು ವಿತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಲು ಖರೀದಿ ದರ ಲೀಟರ್‌ಗೆ 50 ಪೈಸೆ ಹೆಚ್ಚಳ: ಚಿಮುಲ್ ಅಧ್ಯಕ್ಷ ವಿ.ಮಂಜುನಾಥರೆಡ್ಡಿ
ಸವಾಲು ಎದುರಿಸಲು, ತ್ಯಾಗಕ್ಕೂ ಸಿದ್ಧವಾಗಿರಬೇಕು