ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದ ನಗರಸಭೆ ಅಧ್ಯಕ್ಷ ಶೇಷಾದ್ರಿ

KannadaprabhaNewsNetwork |  
Published : Jul 11, 2025, 01:47 AM IST
10ಕೆಆರ್ ಎಂಎನ್ 2.ಜೆಪಿಜಿರಾಮನಗರದ 5ನೇ ವಾರ್ಡಿನ ಸೇತುವೆ ಕಾಮಗಾರಿಯನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ರಾಮನಗರ: ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ವಾರ್ಡುಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರು ಗುರುವಾರ ವೀಕ್ಷಣೆ ಮಾಡಿದರಲ್ಲದೆ ಕೆಲ ಲೋಪದೋಷಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಮನಗರ: ಶಕ್ತಿ ದೇವತೆ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧ ವಾರ್ಡುಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ)ರವರು ಗುರುವಾರ ವೀಕ್ಷಣೆ ಮಾಡಿದರಲ್ಲದೆ ಕೆಲ ಲೋಪದೋಷಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

1ನೇ ವಾರ್ಡಿನಿಂದ ಬೆಳಗ್ಗೆ ನಗರಸಭಾ ಸದಸ್ಯರು, ಅಧಿಕಾರಿಗಳೊಂದಿಗೆ ಕಾಲ್ನಡಿಗೆ ಆರಂಭಿಸಿದ ಕೆ.ಶೇಷಾದ್ರಿ ಯುಐಡಿಎಫ್ ಅನುದಾನದ ಸುಮಾರು 60 ಕೋಟಿ ರು ವೆಚ್ಚದ ರಸ್ತೆ ಅಭಿವೃದ್ದಿ , ಚರಂಡಿ, ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಸೇತುವೆ ಹಾಗೂ ಕುಡಿಯುವ ನೀರಿನ ಕಾಮಗಾರಿಗಳನ್ನು ಪರಿಶೀಲಿಸಿದರು.

ಆನಂತರ ವಿನಾಯಕನಗರ, ಗಾಂಧಿನಗರ, ಚಾಮುಂಡೇಶ್ವರಿ ಬಡಾವಣೆ, ಕಲಾಸಿಪಾಳ್ಯ ರಸ್ತೆ, ಅಗ್ರಹಾರ, ಎಂ.ಜಿ.ರಸ್ತೆ , ನಾಲಬಂದವಾಡಿ, ಬನ್ನಿಮಹಾಂಕಾಳಿ ರಸ್ತೆ, ಮೆಹಬೂಬ್ ನಗರ , ಮಂಜುನಾಥ ನಗರ, ರಾಯರದೊಡ್ಡಿ ಸೇರಿದಂತೆ ಹಲವೆಡೆ ಕಾಲ್ನಡಿಗೆಯಲ್ಲಿ ಸಾಗಿದ ಕೆ.ಶೇಷಾದ್ರಿರವರು ಪರಿಶೀಲನವೆ ವೇಳೆ ಕಂಡು ಬಂದ ಲೋಪ-ದೋಷಗಳನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ತಾಕೀತು ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಐಡಿಎಫ್ ಅನುದಾನದಲ್ಲಿ ನಗರಸಭೆಗೆ 82.5 ಕೋಟಿ ರು. ಅನುದಾನ ಲಭ್ಯವಾಗಿದೆ. ಈ ಪೈಕಿ 60 ಕೋಟಿ ರು.ಗಳನ್ನು 57 ಕಿ.ಮೀ ಉದ್ದದ ರಸ್ತೆ ಅಭಿವೃದ್ದಿಗೆ ಬಳಸಿಕೊಳ್ಳಲಾಗುತ್ತಿದೆ. ಉಳಿದ ಹಣವನ್ನು ಸೀರಳ್ಳದ ತಡೆಗೋಡೆ ನಿರ್ಮಾಣಕ್ಕೆ ಬಳಕೆಯಾಗುತ್ತಿದೆ ಎಂದರು.

ಐಜೂರು ಭಾಗದ 6 ವಾರ್ಡುಗಳ ಕಾಮಗಾರಿಗೆ ಟೆಂಡರ್ ಪೂರ್ಣಗೊಂಡಿದೆ. ಸಧ್ಯದಲ್ಲೇ ವರ್ಕ್ ಆರ್ಡರ್ ಕೊಟ್ಟು, ಶಾಸಕ ಇಕ್ಬಾಲ್ ಹುಸೇನ್ ಅವರೊಂದಿಗೆ ಚರ್ಚಿಸಿ ಆ ಭಾಗದಲ್ಲಿ ಸುಮಾರು 19 ಕೋಟಿ ರು. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ತಿಳಿಸಿದರು.

ನಗರದ 1ನೇ ಮತ್ತು 2ನೇ ವಾರ್ಡು, ಯಾರಬ್‌ನಗರ, ವಿವೇಕಾನಂದನಗರ, 30 ಮತ್ತು 31ನೇ ವಾರ್ಡುಗಳಲ್ಲಿ ಪರಿಪೂರ್ಣ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬೇಕು. ಉಳಿದೆಡೆ ಹಾಲಿ ಲಭ್ಯವಿರುವ ಅನುದಾನದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ನಗರದ 5ನೇ ವಾರ್ಡಿನ ಸೇತುವೆ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಇದೀಗ ಸೇತುವೆ ಕಾಮಗಾರಿಗೆ ಚಾಲನೆ ನೀಡುತ್ತಿದ್ದೇವೆ. ಸೇತುವೆ ನಿರ್ಮಾಣದ ನಂತರ 5ನೇ ವಾರ್ಡಿನಿಂದ ನೇರವಾಗಿ ಬೆಂಗಳೂರು ಮೈಸೂರು ಹೆದ್ದಾರಿಗೆ ಸಂಪರ್ಕ ಸಾಧಿಸಬಹುದು. ಐದಾರು ವಾರ್ಡುಗಳ ನಾಗರೀಕರಿಗೆ ಈ ಸೇತುವೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಹೇಳಿದರು.

ನಗರದ ಬಹುತೇಕ ರಸ್ತೆಗಳನ್ನು ಕುಡಿಯುವ ನೀರು ವ್ಯವಸ್ಥೆ ಹಾಗು ಗ್ಯಾಸ್ ಪೈಪ್ ಲೈನ್‌ಗಾಗಿ ಅಗೆಯಲಾಗಿತ್ತು. ಶ್ರೀ ಚಾಮುಂಡೇಶ್ವರಿ ಅಮ್ಮನವರ ಕರಗ ಸೇರಿದಂತೆ ಒಟ್ಟು 8 ಕರಗಗಳು ಮುಂದಿನ ಮಂಗಳವಾರ ನಡೆಯಲಿದೆ. ಲಕ್ಷಾಂತರ ಮಂದಿ ಕರಗಗಳ ವೀಕ್ಷಣೆಗೆ ರಾಮನಗರಕ್ಕೆ ಆಗಮಿಸುತ್ತಿದ್ದಾರೆ. ನಾಗರೀಕರ ಅನುಕೂಲಕ್ಕಾಗಿ ನೆಟ್ಕಲ್ ಯೋಜನೆ ಹಾಗೂ ನಗರಸಭೆಯ ನಿಧಿಯಿಂದ ತತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚುವ ಕಾಮಗಾರಿಗಳು ನಡೆಯುತ್ತಿವೆ ಎಂದರು.

ನಗರ ವೀಕ್ಷಣೆ ವೇಳೆ ಉಪಾಧ್ಯಕ್ಷೆ ಆಯಿಷಾಬಾನುಸಫಿ, ಸದಸ್ಯರಾದ ಶಿವಸ್ವಾಮಿ (ಅಪ್ಪಿ), ಜಯಲಕ್ಷ್ಮಮ್ಮ, ಸೋಮಶೇಖರ್, ಬಿ.ಸಿ.ಪಾರ್ವತಮ್ಮ, ಮಹಾಲಕ್ಷ್ಮಿ ಗೂಳಿಗೌಡ, ಮುತ್ತುರಾಜು, ನರಸಿಂಹ, ಅಕ್ಲೀಂ, ಗಿರಿಜಮ್ಮ, ಮಂಜುನಾಥ್, ರಮೇಶ್, ಗ್ಯಾಬ್ರಿಯಲ್, ನಿಜಾಮುದ್ದೀನ್‌ ಷರೀಫ್, ಅಜ್ಮತ್, ಆರೀಫ್ , ಮುನಜಿಲ್ ಆಗಾ, ಸಮದ್, ಗೋವಿಂದರಾಜು, ನಾಗಮ್ಮ , ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು, ಟಿಎಪಿಸಿಎಂಎಸ್ ಅಧ್ಯಕ್ಷ ಸುರೇಶ್ (ದೊಡ್ಡಿ), ನಗರಾಭಿವೃದ್ದಿ ಪ್ರಾಧಿಕಾರದ ನಿರ್ದೇಶಕ ಪ್ರವೀಣ್, ನಗರಸಭೆ ಆಯುಕ್ತ ಡಾ.ಜಯಣ್ಣ, ಇಂಜಿನಿಯರ್‌ಗಳಾದ ಪವಿತ್ರ, ಶಂಕರ್, ರೂಪ ಆರೋಗ್ಯ ನಿರೀಕ್ಷಕ ವಿಜಯ್‌ಕುಮಾರ್, ವಾಟರ್ ಬೋರ್ಡ್ ಎಇಇ ಪವಿತ್ರ, ಶಿವರಾಜು, ಮುಖಂಡರಾದ ಶಿವಕುಮಾರಸ್ವಾಮಿ, ಗೂಳಿಗೌಡ, ಹಾಲಿನಚಂದ್ರು, ನಾರಾಯಣಪ್ಪ, ಡೇರಿ ವೆಂಕಟೇಶ್ ಮತ್ತಿತರರು ಹಾಜರಿದ್ದರು.

ಕೋಟ್ ...................

ರಾಮನಗರ ಟೌನ್ ನಲ್ಲಿ ದೊಡ್ಡ ಮಟ್ಟದ ಪ್ರಗತಿ ನಡೆಸಬೇಕು ಎಂಬುದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ರವರ ಆಶಯವಾಗಿದೆ. ಈ ನಿಟ್ಟಿನಲ್ಲಿ ಅವರ ಪ್ರಯತ್ನಗಳು ನಡೆಯುತ್ತಿವೆ. ಅದಕ್ಕೆ ಪೂರಕವಾಗಿ ನಗರಸಭೆ ಕೂಡ ಸಾಥ್ ನೀಡುತ್ತಿದೆ.

- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ

10ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ 5ನೇ ವಾರ್ಡಿನ ಸೇತುವೆ ಕಾಮಗಾರಿಯನ್ನು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ವೀಕ್ಷಣೆ ಮಾಡಿದರು.

-----------------------------------

PREV