ದಾವಣಗೆರೆ ಹಳೇ ಪಿ.ಬಿ. ರಸ್ತೆಯಲ್ಲಿ ಮುಸ್ಲಿಮರಿಂದ ರಂಜಾನ್‌ ಪ್ರಾರ್ಥನೆ

KannadaprabhaNewsNetwork |  
Published : Apr 01, 2025, 12:51 AM IST
31ಕೆಡಿವಿಜಿ16, 17, 18-ದಾವಣಗೆರೆ ಹಳೆ ಪಿಬಿ ರಸ್ತೆಯಲ್ಲಿ ರಂಜಾನ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿರುವ ಮುಸ್ಲಿಂ ಧರ್ಮೀಯರು. ..............31ಕೆಡಿವಿಜಿ19, 20, 21-ದಾವಣಗೆರೆ ಹಳೆ ಪಿಬಿ ರಸ್ತೆಯಲ್ಲಿ ರಂಜಾನ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆಗೆ ತೆರಳಿದ್ದ ಮಕ್ಕಳು, ಹಿರಿಯರು. | Kannada Prabha

ಸಾರಾಂಶ

ಮುಸ್ಲಿಂ ಸಮಾಜದವರು ನಗರ, ಜಿಲ್ಲಾದ್ಯಂತ ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

- ಖಬರಸ್ಥಾನ, ಮಸೀದಿಗಳಿಗೆ ಭೇಟಿ । ಪರ್ಯಾಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ- - - ಕನ್ನಡಪ್ರಭ ವಾರ್ತೆ ದಾವಣಗೆರೆ ಮುಸ್ಲಿಂ ಸಮಾಜದವರು ನಗರ, ಜಿಲ್ಲಾದ್ಯಂತ ಸೋಮವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಕಳೆದೊಂದು ತಿಂಗಳಿನಿಂದಲೂ ರೋಜಾ (ಉಪವಾಸ) ಮಾಡಿದ್ದ ಮುಸ್ಲಿಂ ಧರ್ಮೀಯರು ನಗರದ ಹಳೇ ಪಿ.ಬಿ. ರಸ್ತೆಯ ಖಬರಸ್ತಾನ ಸೇರಿದಂತೆ ಮಸೀದಿಗಳು, ವಿವಿಧೆಡೆ ಇರುವ ಹೊಸ ಖಬರಸ್ಥಾನಗಳ ಬಳಿ ಹೊಸ ವಸ್ತ್ರಧಾರಿಗಳಾಗಿ ಗುಂಪು ಗುಂಪಾಗಿ ಕುಟುಂಬ ಸಮೇತ, ಸ್ನೇಹಿತರೊಟ್ಟಿಗೆ ತೆರಳಿ, ಪ್ರಾರ್ಥಿಸಿದರು. ತಿಂಗಳ ಉಪವಾಸದ ನಂತರ ಜಕಾತ್‌, ಪಿತೃದಾನ ಮಾಡಿದರು. ಪರಸ್ಪರ ಆಲಂಗಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.

ಪ್ರಾರ್ಥನೆ ಬಳಿಕ ನಂತರ ಬಂಧು-ಬಳಗದೊಂದಿಗೆ ತಮ್ಮ ಮನೆಯಲ್ಲಿ ಹಬ್ಬದೂಟ ಸವಿದರು. ದ್ರಾಕ್ಷಿ, ಗೋಡಂ, ಬಾದಾಮಿ, ಸಕ್ಕರೆ, ಶಾವಿಗೆ ಪಾಯಸ, ಹಾಲು, ಗಸಗಸೆ ಪಿಸ್ತಾ ಬಳಸಿ ತಯಾರಿಸಿದ್ದ ವಿಶೇಷ ಸಿಹಿ ತಿಂಡಿಗಳು, ಬಗೆಬಗೆಯ ಭಕ್ಷ್ಯ ಭೋಜನಗಳನ್ನು ಸಿದ್ಧಪಡಿಸಿ ವಿಶೇಷತೆ ಮೆರೆದರು. ಹಳೇ ಪಿ.ಬಿ. ರಸ್ತೆಯಲ್ಲಿ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆಗಾಗಿ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆಗಳಲ್ಲಿ ಅವಕಾಶ ಕಲ್ಪಿಸಲಾಗಿತ್ತು.

ಜಿಲ್ಲಾದ್ಯಂತ ಸೋಮವಾರ ಮುಸ್ಲಿಮರು ರಂಜಾನ್ ಹಬ್ಬ ಆಚರಿಸಿದರೆ, ಹಿಂದುಗಳು ಚಂದ್ರದರ್ಶನ ಮಾಡುವ ಮೂಲಕ ಹೋಳಿಗೆ ಊಟ ಮಾಡಿದರು. ಹೊಸ ವರ್ಷಕ್ಕೆ ಬೇವು-ಬೆಲ್ಲ ಹಂಚಿ, ಶುಭಾಶಯ ವಿನಿಮಯ ಮಾಡಿಕೊಂಡರು. ಎಲ್ಲಾ ಕಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

- - - -31ಕೆಡಿವಿಜಿ16, 17, 18.ಜೆಪಿಜಿ:

ದಾವಣಗೆರೆ ಹಳೆ ಪಿ.ಬಿ. ರಸ್ತೆಯಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿರುವ ಮುಸ್ಲಿಂ ಧರ್ಮೀಯರು.

- - -

-31ಕೆಡಿವಿಜಿ19, 20, 21:

ದಾವಣಗೆರೆ ಹಳೆ ಪಿ.ಬಿ. ರಸ್ತೆಯಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆಗೆ ತೆರಳಿದ್ದ ಮಕ್ಕಳು, ಹಿರಿಯರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ